Home Breaking Entertainment News Kannada ಕಿರುತೆರೆಯ ಜನಪ್ರಿಯ ನಟ ನಿಧನ

ಕಿರುತೆರೆಯ ಜನಪ್ರಿಯ ನಟ ನಿಧನ

Hindu neighbor gifts plot of land

Hindu neighbour gifts land to Muslim journalist

ಮುಂಬೈ : ಹಿಂದಿ ಕಿರುತೆರೆಯ ಜನಪ್ರಿಯ ಹಾಸ್ಯ ನಟ ದೀಪೇಶ್ ಭಾನ್ ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ.

ವರದಿಗಳ ಪ್ರಕಾರ, ದೀಪೇಶ್ ಭಾನ್ ಇಂದು ಬೆಳಗ್ಗೆ ಮುಂಬೈನಲ್ಲಿ ಕ್ರಿಕೆಟ್ ಆಡುವಾಗ ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ವೈದ್ಯರು ಮೃತಪಟ್ಟಿರೋದಾಗಿ ತಿಳಿಸಿದ್ದಾರೆ.


ಕಿರುತೆರೆ ಮೂಲಕ ವೃತ್ತಿ ಜೀವನ ಪ್ರಾರಂಭ ಮಾಡಿದ ನಟ ದೀಪೇಶ್ ಹಲವಾರು ಹಾಸ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕಿರುತೆರೆ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದ್ದಾರೆ. ‘ಭಾಬಿ ಜಿ ಘರ್ ಪರ್ ಹೈ’ನಲ್ಲಿ ಮಲ್ಖಾನ್ ಸಿಂಗ್ ಪಾತ್ರವನ್ನು ನಿರ್ವಹಿಸಿದ್ದ ದೀಪೇಶ್ ಭಾನ್ ಜನಪ್ರಿಯ ನಟನಾಗಿದ್ದರು.

ನಟ ದೀಪೇಶ್ ಭಾನ್ ಅವರ ನಿಧನವನ್ನು ಸಹಾಯಕ ನಿರ್ದೇಶಕ ಮತ್ತು ನಟ ವೈಭವ್ ಮಾಥುರ್ ಖಚಿತಪಡಿಸಿದ್ದಾರೆ. ದೀಪೇಶ್ ಅವರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಭಾಬಿ ಜಿ ಘರ್ ಪರ್ ಹೇ ನಿರ್ಮಾಪಕರು ಕೂಡ ನಟ ದೀಪೇಶ್ ಅವರ ಹಠಾತ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ದೀಪೇಶ್ ತಾಯಿಯನ್ನು ಕಳೆದುಕೊಂಡಿದ್ದರು. ಅಮ್ಮನ್ನು ಕಳೆದುಕೊಂಡ ದುಃಖವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಭಾವನಾತ್ಮಕ ಪೋಸ್ಟ್ ನಲ್ಲಿ ದೀಪೇಶ್, ‘ಅಮ್ಮಾ, ನೀವು ಯಾಕೆ ಹೊರಟಿದಿರಿ. ಲವ್ ಯೂ ಅಮ್ಮ. ನಾನು ನಿನ್ನನ್ನು ಕಳೆದುಕೊಳ್ಳುತ್ತೇನೆ’ ಎಂದು ಹೇಳಿದ್ದರು. ಆದರೀಗ ಪುತ್ರನು ಸಹ ಅಮ್ಮನಿರುವ ಜಾಗಕ್ಕೆ ಹೋಗಿದ್ದಾರೆ.

ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಭಾಬಿ ಜಿ ಘರ್ ಪರ್ ಹೈ ತಂಡ “ನಮ್ಮ ಪ್ರೀತಿಯ ದೀಪೇಶ್ ಭಾನ್ ಅವರ ಹಠಾತ್ ನಿಧನದಿಂದ ತೀವ್ರ ದುಃಖ ಮತ್ತು ಆಘಾತವಾಗಿದೆ. ಭಾಬಿಜಿ ಘರ್ ಪರ್ ಹೈ ಚಿತ್ರದಲ್ಲಿನ ಅತ್ಯಂತ ಸಮರ್ಪಿತ ನಟರಲ್ಲಿ ಒಬ್ಬರು ಮತ್ತು ನಮ್ಮ ಕುಟುಂಬದಲ್ಲಿ ಒಬ್ಬರು. ಅವರನ್ನು ಎಲ್ಲರೂ ತುಂಬಾ ಮಿಸ್ ಮಾಡಿಕೊಳ್ಳುತ್ತಾರೆ. ಅವರ ಕುಟುಂಬಕ್ಕೆ ನಮ್ಮ ಸಂತಾಪಗಳು. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ದೇವರು ಅವರ ಕುಟುಂಬಕ್ಕೆ ಈ ನಷ್ಟವನ್ನು ನಿಭಾಯಿಸುವ ಶಕ್ತಿಯನ್ನು ನೀಡಲಿ’ ಎಂದಿದ್ದಾರೆ.

ಖ್ಯಾತ ನಟಿ ಕವಿತಾ ಕೌಶಿಕ್ ಟ್ವೀಟ್ ಮಾಡಿ ದೀಪೇಶ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ‘ದೀಪೇಶ್ ನಿಧನ ನಿಜಕ್ಕೂ ಆಘಾತ ತಂದಿದೆ. 41 ನೇ ವಯಸ್ಸಿನಲ್ಲಿ ದೀಪೇಶ್ ಭಾನ್ ನಿಧನರಾಗಿದ್ದಾರೆ ತೀವ್ರ ನೋವಿನ ಸಂಗತಿ. ಎಫ್‌ಐಆರ್‌ನಲ್ಲಿ ಬಹಳ ಮುಖ್ಯವಾದ ಪಾತ್ರವರ್ಗದ ಸದಸ್ಯ, ಫಿಟ್ ಆಗಿದ್ದ ದೀಪೇಶ್ ಗೆ ಕುಡಿಯುವುದು ಮತ್ತು ಧೂಮಪಾನ ಮಾಡುತ್ತಿರಲಿಲ್ಲ’ ಎಂದು ಭಾವುಕ ಟ್ವೀಟ್ ಮಾಡಿದ್ದಾರೆ.