Home Breaking Entertainment News Kannada Abhishek Ambareesh: ಅಭಿಷೇಕ್‌-ಅವಿವಾ ಬೀಗರೂಟಕ್ಕೆ ಸಜ್ಜಾದ ಮಂಡ್ಯ! 7ಟನ್‌ಚಿಕನ್‌, 7ಟನ್‌ ಮಟನ್‌, ಇನ್ನೇನಿದೆ ಮೆನುವಿನಲ್ಲಿ? ಇಲ್ಲಿದೆ...

Abhishek Ambareesh: ಅಭಿಷೇಕ್‌-ಅವಿವಾ ಬೀಗರೂಟಕ್ಕೆ ಸಜ್ಜಾದ ಮಂಡ್ಯ! 7ಟನ್‌ಚಿಕನ್‌, 7ಟನ್‌ ಮಟನ್‌, ಇನ್ನೇನಿದೆ ಮೆನುವಿನಲ್ಲಿ? ಇಲ್ಲಿದೆ ಲಿಸ್ಟ್‌

Abhishek Ambareesh

Hindu neighbor gifts plot of land

Hindu neighbour gifts land to Muslim journalist

Abhishek Ambareesh: ಮಂಡ್ಯದ ಗಂಡು ಎಂದೇ ಖ್ಯಾತಿ ಪಡೆದ ನಟ ರೆಬಲ್‌ಸ್ಟಾರ್‌ ಅಂಬರೀಶ್‌ ಅವರ ಮಗ ಅಭಿಷೇಕ್‌ ಅಂಬರೀಶ್‌ (Abhishek Ambareesh) ಮದುವೆ ಅವಿವಾ ಬಿದ್ದಪ್ಪ (Aviva Bidappa) ಅವರ ಜೊತೆ ಇತ್ತೀಚೆಗಷ್ಟೇ ಬಹಳ ವಿಜೃಂಭಣೆಯಿಂದ ಬೆಂಗಳೂರಿನಲ್ಲಿ ನಡೆಯಿತು. ಈಗ ಮಂಡ್ಯದಲ್ಲಿ ಈ ಭಾರೀ ವಿವಾಹದ ಮುಂದುವರಿದ ಭಾಗವಾಗಿ ಬೀಗರೂಟ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಭಾರೀ ಸಂಖ್ಯೆಯಲ್ಲಿ ಜನರಿಗೆ ಭರ್ಜರಿ ಮಾಂಸದೂಟ ಹಾಕಲು ಅಂಬರೀಶ್‌ ಕುಟುಂಬ ನಿರ್ಧರಿಸಿದ್ದು, ಈಗಾಗಲೇ ಇದರ ತಯಾರಿ ಆರಂಭವಾಗಿದೆ.

ಈ ಅದ್ಧೂರಿ ಬಾಡೂಟ ಜೂನ್‌ 16ರಂದು ನಡೆಯಲಿದೆ. ಬೀಗರೂಟ ಸಮಾರಂಭಕ್ಕೆ ಮಂಡ್ಯ ಸಜ್ಜಾಗಿದೆ. ಅಂದು ನರೇಂದ್ರ ಮೋದಿಯವರ ಕಾರ್ಯಕ್ರಮ ನಡೆದಿದ್ದ ಮದ್ದೂರಿನ ಗೆಜ್ಜಲಗೆರೆಯ ಬೃಹತ್‌ ಮೈದಾನದಲ್ಲಿ ಈ ಬೀಗರೂಟ ನಡೆಯಲಿದೆ. ಅಂದ ಹಾಗೆ ಸುಮಾರು ಹದಿನೈದು ಎಕರೆ ಜಾಗದಲ್ಲಿ ಜರ್ಮನ್‌ ಟೆಂಟ್‌ ಗಳನ್ನು ಹಾಕಲಾಗುತ್ತಿದೆ. ಹಾಗಾಗಿ ನೆರಳಿನಲ್ಲಿ ಕುಳಿತು ಜನರು ಬಾಡೂಟ ಸವಿಯಬಹುದು. ಅಂದಾಜು ಐವತ್ತು ಸಾವಿರ ಜನರ ಊಟಕ್ಕೆ ಇಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ವಿಐಪಿ, ಜನಸಾಮಾನ್ಯರಿಗೆ ಬೇರೆ ಕೌಂಟರ್‌ಗಳನ್ನು ಇಲ್ಲಿ ಆಯೋಜನೆ ಮಾಡಲಾಗಿದೆ.

ಬೀಗರೂಟ ಸಮಾರಂಭದಲ್ಲಿ ನೂತನ ವಧು ವರರು ಜನರಿಗೆ ನಮಸ್ಕಾರ ತಿಳಿಸಿ ಅಲ್ಲಿಯೇ ಅಭಿನಂದನೆ ತಿಳಿಸಲಿದ್ದಾರೆ ಎಂದು ವರದಿಯಾಗಿದೆ. ಭಾರೀ ಜನಸಂಖ್ಯೆ ಸೇರಲಿರುವುದರಿಂದ ನೂಕು ನುಗ್ಗಲಾಗುವ ಸಾಧ್ಯತೆ ಇದೆ ಎನ್ನುವ ಕಾರಣದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ.

ಬೀಗರೂಟ ಮೆನುವಿನ ಲಿಸ್ಟ್‌ ಕೇಳಿದರೆ ನಿಮಗೆ ಬಾಯಲ್ಲಿ ನೀರೂರುವುದಂತೂ ಖಂಡಿತ. ಭರ್ಜರಿ 7ಟನ್‌ ಮಟನ್‌,7ಟನ್‌ ಚಿಕನ್‌ ಅನ್ನು ಈ ಬಾಡೂಟಕ್ಕೆ ತಯಾರು ಮಾಡಲಾಗುತ್ತದೆ. ಉಳಿದ ಹಾಗೆ, ರಾಗಿ ಮುದ್ದೆ, ಬೋಟಿ ಗೊಜ್ಜು, ಎರಡು ತರದ ಚಿಕನ್‌ ಐಟಮ್‌, ತಿಳಿ ಸಾಂಬಾರ್‌, ಮೊಟ್ಟೆ, ಮಟನ್‌, ಮಜ್ಜಿಗೆ, ಬೀಡಾ, ನಂದಿನಿ ಐಸ್‌ಕ್ರೀಂ, ವಾಟರ್‌ ಬಾಟಲ್‌, ಬಾಳೆಜಣ್ಣು ಮುಂತಾದವುಗಳು ಇರಲಿದೆ.