Home Business Canara Bank : ಕೆನರಾಬ್ಯಾಂಕ್‌ ಗ್ರಾಹಕರೇ ನಿಮಗೊಂದು ಮಹತ್ವದ ಸುದ್ದಿ!

Canara Bank : ಕೆನರಾಬ್ಯಾಂಕ್‌ ಗ್ರಾಹಕರೇ ನಿಮಗೊಂದು ಮಹತ್ವದ ಸುದ್ದಿ!

Canara Bank

Hindu neighbor gifts plot of land

Hindu neighbour gifts land to Muslim journalist

Canara Bank : ಇಂದಿನ ಡಿಜಿಟಲ್ ಯಗದಲ್ಲಿ ಮನೆಯಲ್ಲೇ ಕುಳಿತು ಕ್ಷಣಮಾತ್ರದಲ್ಲಿಯೇ ಎಲ್ಲ ವ್ಯವಹಾರ ವಹಿವಾಟು ನಡೆಸುವ ತಂತ್ರಜ್ಞಾನ(Technology) ಕ್ಷೇತ್ರದಲ್ಲಿ ಬೆಳವಣಿಗೆ ಆಗಿದ್ದು, ಕೆಲಸದ ಒತ್ತಡದ ನಡುವೆ ಬ್ಯಾಂಕಿಂಗ್ ವಹಿವಾಟು ನಡೆಸಲು ಸಾಧ್ಯವಾಗದೇ ಇದ್ದವರು ಪರಿತಪಿಸುವ ಅವಶ್ಯಕತೆ ಈಗಿಲ್ಲ. ಈಗ ಕ್ಷಣ ಮಾತ್ರದಲ್ಲಿಯೇ ಬೆರಳ ತುದಿಯಲ್ಲಿ ಎಲ್ಲ ವ್ಯವಹಾರ ವಹಿವಾಟು ನಡೆಸಲು ಎಲ್ಲ ಬ್ಯಾಂಕಿಂಗ್ ವ್ಯವಸ್ಥೆಗಳು ಅನುವು ಮಾಡಿಕೊಟ್ಟಿವೆ.

ಕೆನರಾ ಬ್ಯಾಂಕ್‌ (Canara Bank)ತನ್ನ ಗೃಹ, ವಾಹನ ಸಾಲ(Vechicle Loan) ಮೊದಲಾದ ರಿಟೇಲ್‌ ಸಾಲಗಳು ಮತ್ತು ಎಂಎಸ್‌ಎಇ ಸಾಲಗಳ ಮೇಲಿನ ರೆಪೋ(Repo) ಆಧಾರಿತ ಬಡ್ಡಿ ದರವನ್ನು (Intrest Rate) ಯಥಾಸ್ಥಿತಿಯಲ್ಲಿಯೇ ಮುಂದುವರಿಸಿಕೊಂಡು ಬಂದಿದೆ.ಆದರೆ ಎ.12ರಿಂದ ಅನ್ವಯವಾಗುವಂತೆ, ವೆಚ್ಚ ಆಧಾರಿತ ಬಡ್ಡಿ ದರ ಮಾರ್ಜಿನಲ್ ಕಾಸ್ಟ್ ಬೇಸ್ಡ್ ಲೆಂಡಿಂಗ್ ರೇಟ್ಗಳನ್ನು(MCLR) ಹೆಚ್ಚಳ ಮಾಡಿದೆ. ಒಂದು ವರ್ಷದ ಅವಧಿಯ ಸಾಲಕ್ಕೆ ಬಡ್ಡಿ ದರವನ್ನು ಶೇ.8.60ರಿಂದ ಶೇ.8.65ಕ್ಕೆ ಹೆಚ್ಚಳ ಮಾಡಲಾಗಿರುವ ಕುರಿತು ಬ್ಯಾಂಕ್‌ ಮಾಹಿತಿ ನೀಡಿದೆ. 6 ತಿಂಗಳ ಅವಧಿಯ ಎಂಸಿಎಲ್‌ಆರ್‌ ಅನ್ನು ವಾರ್ಷಿಕ ಶೇ.8.40ರಿಂದ ಶೇ.8.45ಕ್ಕೆ ಏರಿಕೆ ಮಾಡಲಾಗಿದೆ.