Home Business Government Scheme: ಕೇಂದ್ರದ ಇದೊಂದು ಕಾರ್ಡ್ ನಿಮ್ಮಲ್ಲಿದೆಯಾ?! ಹಾಗಿದ್ರೆ ಉಚಿತವಾಗಿ ನಿಮ್ಮದಾಗುತ್ತೆ 5 ಲಕ್ಷ !!

Government Scheme: ಕೇಂದ್ರದ ಇದೊಂದು ಕಾರ್ಡ್ ನಿಮ್ಮಲ್ಲಿದೆಯಾ?! ಹಾಗಿದ್ರೆ ಉಚಿತವಾಗಿ ನಿಮ್ಮದಾಗುತ್ತೆ 5 ಲಕ್ಷ !!

Hindu neighbor gifts plot of land

Hindu neighbour gifts land to Muslim journalist

Ayushman Bharath Update: ಸರ್ಕಾರಿ ಯೋಜನೆ: ಬಡವರಿಗೆ ಸರ್ಕಾರದಿಂದ ಲಕ್ಷಾಂತರ ರೂಪಾಯಿ ಸಹಾಯವನ್ನು ಹಲವು ಯೋಜನೆ (ಸರ್ಕಾರಿ ಯೋಜನೆ)  ಮೂಲಕ ನೀಡಲಾಗುತ್ತಿದೆ. ಅದೇ ರೀತಿ ಆಯುಷ್ಮಾನ್ ಭಾರತ್ – ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB-PMJAY) ಕೂಡ ಇದೆ.

ಕೇಂದ್ರ ಸರ್ಕಾರವು ನಡೆಸುತ್ತಿರುವ ಆಯುಷ್ಮಾನ್ ಭಾರತ್ ಯೋಜನೆಯು ಆರೋಗ್ಯ ಯೋಜನೆಗಳಲ್ಲಿ ಬಹಳ ಜನಪ್ರಿಯವಾಗಿದೆ. ಈ ಯೋಜನೆ ಅಡಿಯಲ್ಲಿ  ಫಲಾನುಭಾವಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ, ಕುಟುಂಬದ ಸದಸ್ಯರು ದೀರ್ಘಾವಧಿಯವರೆಗೆ ಆಸ್ಪತ್ರೆಗೆ ಸೇರಿಸಬೇಕಾದರೆ, ವೈದ್ಯಕೀಯ ವೆಚ್ಚವನ್ನು ಬರಿಸಲು 5 ಲಕ್ಷದವರೆಗೆ ಪ್ರಯೋಜನವನ್ನು ಒದಗಿಸಲಾಗುತ್ತದೆ. ನೀವು ಕೂಡ ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನಗಳನ್ನು ಪಡೆಯಬೇಕಾದರೆ ಕುಟುಂಬದ ಸದಸ್ಯರ ಹೆಸರನ್ನು ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ (SECC) 2011 ರಲ್ಲಿ ಸೇರಿಸಿರಬೇಕು. 

ಆಯುಷ್ಮಾನ್ ಭಾರತ್ ಯೋಜನೆ 2023 ರ ಪ್ರಯೋಜನಗಳು: 

* ಈ ಯೋಜನೆಯಡಿಯಲ್ಲಿ ವೈದ್ಯರು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಬಹುದು. 

* ABHA ಕಾರ್ಡ್‌ಗಳಿಗೆ ನಗದು ರಹಿತ ಚಿಕಿತ್ಸೆ ಮತ್ತು ಪ್ರವೇಶ ಸೇವೆಗಳು ಲಭ್ಯವಿದೆ.

* ಈ ಯೋಜನೆಡಿ, ಪಟ್ಟಿ ಮಾಡಲಾದ ರಾಜ್ಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಸಿಗುತ್ತದೆ. 

* ಆಸ್ಪತ್ರೆಗೆ ದಾಖಲಾದರೆ, 15 ದಿನಗಳು ನಿಮ್ಮ ವೆಚ್ಚಗಳನ್ನು ಭಾರತ ಸರ್ಕಾರದ ಈ ಯೋಜನೆಯನ್ನು ಹೊಂದಿದೆ.

* ಇದು ಸಂಪೂರ್ಣ ನಗದು ರಹಿತ ಯೋಜನೆಯಾಗಿದೆ ಮತ್ತು ಪ್ರಯೋಜನಗಳನ್ನು ಪಡೆಯಲು ನಗದು ಅಗತ್ಯವಿಲ್ಲ.

ಆಯುಷ್ಮಾನ್ ಭಾರತ್ ಕಾರ್ಡ್ ಆನ್‌ಲೈನ್ ಅಪ್ಲಿಕೇಶನ್: 

ಆನ್‌ಲೈನ್‌ನಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್ ಪಡೆಯಲು ಅರ್ಜಿದಾರರು pmjay.gov.in ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ  ಪೋರ್ಟಲ್‌ಗೆ ಹೋಗಿ ಕ್ರಿಯೇಟ್  ABHA ಕಾರ್ಡ್ ಮೇಲೆ  ಕ್ಲಿಕ್ ಮಾಡಿ. ಅಲ್ಲಿ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ  OTP ಹಾಕಿ. ಈಗ ಅರ್ಜಿ ನಮೂನೆಗೆ ವಿವರಗಳನ್ನು ನಮೂದಿಸಿ. ನಂತ್ರ ನೋಂದಣಿಯನ್ನು ಪೂರ್ಣಗೊಳಿಸಲು ದಾಖಲೆಗಳು ಮತ್ತು ಪ್ರಮಾಣಪತ್ರಗಳನ್ನು ಅಪ್ಲೋಡ್ ಮಾಡಿ. ಅರ್ಜಿಯನ್ನು ಸಲ್ಲಿಸಿ ಮತ್ತು ಅಧಿಕಾರಿಗಳಿಂದ ಅನುಮೋದನೆಗಾಗಿ ಕಾಯಿರಿ.

ಆಯುಷ್ಮಾನ್ ಭಾರತ್ ಕಾರ್ಡ್ ಡೌನ್‌ಲೋಡ್ ಪ್ರಕ್ರಿಯೆ : 

pmjay.gov.inಗೆ ಭೇಟಿ ನೀಡುವ ಮೂಲಕ ಆಯುಷ್ಮಾನ್ ಭಾರತ್ ಕಾರ್ಡ್ ಡೌನ್‌ಲೋಡ್ ಮಾಡಬಹುದು.

pmjay.gov.inಗೆ ಹೋಗಿ ಮತ್ತು ಡೌನ್‌ಲೋಡ್ ಆಯುಷ್ಮಾನ್ ಕಾರ್ಡ್ ಬಟನ್ ಮೇಲೆ ಕ್ಲಿಕ್ ಮಾಡಿ.

ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಮತ್ತು ನಂತರ OTP ಹಾಕಿ. 

ನಿಮ್ಮ ಆಯುಷ್ಮಾನ್ ಕಾರ್ಡ್‌ನ ಡಿಜಿಟಲ್ ಕಾಪಿಯನ್ನು ಪರಿಶೀಲಿಸಿ ಅದನ್ನು ಡೌನ್‌ಲೋಡ್ ಮಾಡಿ.

ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ.