Home Business Splendor Bike: ಹಳೆಯ ಸ್ಲೆಂಡರ್ ಬೈಕ್ ಹೊಂದಿರುವವರಿಗೆ RTO ಕಡೆಯಿಂದ ಗುಡ್ ನ್ಯೂಸ್ !!

Splendor Bike: ಹಳೆಯ ಸ್ಲೆಂಡರ್ ಬೈಕ್ ಹೊಂದಿರುವವರಿಗೆ RTO ಕಡೆಯಿಂದ ಗುಡ್ ನ್ಯೂಸ್ !!

Splendor Bike

Hindu neighbor gifts plot of land

Hindu neighbour gifts land to Muslim journalist

Splendor Bike: RTO ಕೆಲವೊಮ್ಮೆ ಕೆಲವು ವಾಹನಗಳಿಗೆ ಸಂಬಂಧಪಟ್ಟಂತೆ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತದೆ. ಅಂತೆಯೇ ಇದೀಗ ದೇಶಾದ್ಯಂತ ಹಿಂದಿನಿಂದಲೂ ಭಾರಿ ಹೆಸರು ಮಾಡಿರುವ, ಎಲ್ಲರ ಫೇವರಿಟ್ ಎನಿಸಿರುವ ಸ್ಪ್ಲೆಂಡರ್ ಬೈಕ್(Splendor Bike) ಕುರಿತು ಹೊಸ ನಿಯಮ ಜಾರಿಗೆ ತಂದು, ಮಾಲೀಕರಿಗೆ ಅನುಕೂಲ ಮಾಡಿಕೊಡಲು ಮುಂದಾಗಿದೆ.

ಇದನ್ನೂ ಓದಿ: Zodiac Signs: ಈ ರಾಶಿಯವರು ತುಂಬಾ ರೋಮ್ಯಾಂಟಿಕ್ ಆಗಿರುತ್ತಾರೆ! ನೀವಿದ್ದೀರಾ ಈ ಲಿಫ್ಟ್ ನಲ್ಲಿ?

ಇಂದು ಎಲ್ಲಿ ನೋಡಿದರೂ ಎಲೆಕ್ಟ್ರಿಕ್ ವಾಹನಗಳದ್ದೇ(Electric Vehicles) ಹವಾ. ಅವುಗಳ ಹೊಸ ಪರ್ವವೇ ಶುರುವಾಗಿದೆ. ಅಂದರೆ ಜನರು ಬದಲಾವಣೆ ಬಯಸುತ್ತಿದ್ದಾರೆ. ಹೀಗಾಗಿ ಎವರ್ ಗ್ರೀನ್ ಬೈಕ್ ಆಗಿರುವ ಸ್ಪ್ಲೆಂಡರ್ ಬೈಕ್ ಅನ್ನೂ ಇದೀಗ ನಾವು ಎಲೆಕ್ಟ್ರಿಕ್ ವಾಹನ ಆಗಿ ಬದಲಾಯಿಸಬಹುದು. ಹೌದು, ಅತ್ಯಂತ ಕಡಿಮೆ ಖರ್ಚಿನಲ್ಲಿ ನಿಮ್ಮ ಹೀರೋ ಸ್ಪ್ಲೆಂಡರ್ ಬೈಕ್(Hero Splendor )ಅನ್ನು ಈ ಮೂಲಕ ನೀವು ಎಲೆಕ್ಟ್ರಿಕ್ ಬೈಕ್ಅನ್ನಾಗಿ ಪರಿವರ್ತಿಸಬಹುದಾಗಿದೆ. ಇ ಒಂದು ಮಹಾತ್ಕಾರ್ಯಕ್ಕೆ GoGoA1 ಸಂಸ್ಥೆಯ ಮುಂದಾಗಿದೆ.

ಇದನ್ನೂ ಓದಿ: Intresting News: ಮಹಿಳೆಯರು ತಿಳಿದಿರಲೇಬೇಕಾದ 10 ಕಾನೂನಿನ ಹಕ್ಕುಗಳಿವು : ಮಹಿಳೆಯರೇ ನಿಮ್ಮ ರಕ್ಷಣೆಗಾಗಿ ಈ ಹಕ್ಕುಗಳ ಬಗ್ಗೆ ತಿಳಿಯಿರಿ

GoGoA1 ಸಂಸ್ಥೆ :

• GoGoA1 ಸಂಸ್ಥೆ ಈಗಾಗಲೇ ಭಾರತ ದೇಶದ 50ಕ್ಕೂ ಹೆಚ್ಚಿನ ಫ್ರಾಂಚೈಸಿಗಳಲ್ಲಿ ಕಾಣಿಸಿಕೊಳ್ಳಲಿದೆ.

• ಗ್ರಾಹಕರಿಗೆ ಬೇಕಾಗಿರುವಂತಹ ಸರ್ವಿಸ್ ಗಳನ್ನು ಕೂಡ ನೀಡುವುದಕ್ಕೆ ಸಿದ್ಧವಾಗಿದೆ.

• ಇದೇ ರೀತಿಯಲ್ಲಿ ಕಂಪನಿ, ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಾರಿಗೆ ಇಂಡಸ್ಟ್ರಿ ಅನ್ನೋದು ಇನ್ನಷ್ಟು ವೇಗವಾಗಿ ಬೆಳೆಯೋದಕ್ಕೆ ಕೂಡ ಸಹಾಯಕವಾಗುವ ರೀತಿಯಲ್ಲಿ ಸದ್ಯದ ಮಟ್ಟಿಗೆ ತನ್ನ ಬೆಳವಣಿಗೆಯ ದಿಕ್ಕನ್ನು ಆಯ್ಕೆ ಮಾಡಿಕೊಂಡಿದೆ.

GoGoA1 ಹೀರೋ ಸ್ಪ್ಲೆಂಡರ್ ಕನ್ವರ್ಷನ್ ಕಿಟ್ ಅಂದರೆ ಏನು?

• ಮಾರುಕಟ್ಟೆಯಲ್ಲಿ Hero Splendor ಬೈಕ್ ಗಾಗಿ EV (Electric Vehicle) Conversion Kit ಬಿಡುಗಡೆ ಮಾಡಲಾಗಿದೆ. ಹೀರೋ ಸ್ಪ್ಲೆಂಡರ್ ಖರೀದಿಸಲು ಮತ್ತು ಪೆಟ್ರೋಲ್ ಉಳಿಸಲು ಬಯಸುವವರಿಗೆ, ಇದೀಗ ತಮ್ಮ ನೆಚ್ಚಿನ ಬೈಕಿನಲ್ಲಿ ಎಲೆಕ್ಟ್ರಿಕ್ ಕಿಟ್ ಅಳವಡಿಸಿ ಹಣ ಉಳಿಸುವ ಆಯ್ಕೆ ಇದೆ.

• ನಿಮ್ಮ ಹೀರೋ ಸ್ಪ್ಲೆಂಡರ್ ನಲ್ಲಿ ಇರುವಂತಹ ಪೆಟ್ರೋಲ್ ಇಂಜಿನ್ ಅನ್ನು ಪವರ್ಫುಲ್ ಆಗಿರುವಂತಹ ಎಲೆಕ್ಟ್ರಿಕ್ ಮೋಟರ್ ನೊಂದಿಗೆ ರಿಪ್ಲೇ ಮಾಡಲಾಗುತ್ತದೆ. ಇದರ ಜೊತೆಗೆ ಹೈಕ್ ಕೆಪ್ಯಾಸಿಟಿ ಬ್ಯಾಟರಿ ಪ್ಯಾಕ್, ಕಂಟ್ರೋಲರ್ ಯೂನಿಟ್, ಹಾಗೂ ಬೇಕಾಗುವಂತಹ ಇನ್ನಿತರ ವೈರಿಂಗ್ ಕಾಂಪೋನೆಂಟ್ ಗಳನ್ನು ಅಳವಡಿಸಲಾಗುತ್ತದೆ.

ಇದರಿಂದ ಕಾನೂನು ತೊಡಕುಗಳು ಇವೆಯೇ?

RTO ಈಗಾಗಲೇ ಈ ಕನ್ವರ್ಷನ್ ಕಿಟ್ ಜೊತೆಗೆ ರಸ್ತೆಗಳಲ್ಲಿ ಚಲಿಸುವಂತಹ ವಾಹನಗಳನ್ನು ಅಪ್ರೂವ್ ಮಾಡಿರುವುದರಿಂದಾಗಿ ನಿಮಗೆ ಯಾವುದೇ ರೀತಿಯ ಕಾನೂನು ಸಮಸ್ಯೆ ಇರುವುದಿಲ್ಲ.

ಇದರ ಬೆಲೆ ಏನು? ಎಷ್ಟು ಕಿಲೋಮೀಟರ್ ಒಡುತ್ತೆ?

• ಈ ಕಿಟ್ ಜೊತೆಗೆ ನಿಮಗೆ 3 ವರ್ಷಗಳ ವಾರಂಟಿ ಕೂಡ ಸಿಗಲಿದೆ. Rushlane ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಒಮ್ಮೆ ಚಾರ್ಜ್ ಮಾಡಿ ನೀವು ನಿಮ್ಮ ಬೈಕ್ ಅನ್ನು 151 ಕಿ.ಮೀ ಓಡಿಸಬಹುದು ಎಂದು GoGoA1 ಹೇಳಿಕೊಂಡಿದೆ.

• ಕಿಟ್ ನ ಬೆಲೆಯ ನೋಡುವುದಾದರೆ 35,000 ವರೆಗೆ ಇರುತ್ತದೆ. ಆದರೆ ಈ ಮೂಲ ಬೆಲೆಯೊಂದಿಗೆ ನೀವು ರೂ.6300 GST ಪಾವತಿಸಬೇಕಾಗಲಿದೆ ಹಾಗೂ ಬ್ಯಾಟರಿ ಬೆಲೆಯನ್ನು ಕೂಡ ನೀವು ಪ್ರತ್ಯೇಕ ಪಾವತಿಸಬೇಕು. ಒಟ್ಟಾರೆ ನೀವು ಈ ಕಿಟ್ ಹಾಗೂ ಬ್ಯಾಟರಿ ಖರೀದಿಸಲು ರೂ.95,000 ಪಾವತಿಸಬೇಕು.