Home Business Bank Services: HDFC ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್; ಎರಡು ದಿನ ಹಲವು ಸೇವೆಗಳು ಲಭ್ಯವಿಲ್ಲ!

Bank Services: HDFC ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್; ಎರಡು ದಿನ ಹಲವು ಸೇವೆಗಳು ಲಭ್ಯವಿಲ್ಲ!

Bank Services

Hindu neighbor gifts plot of land

Hindu neighbour gifts land to Muslim journalist

Bank Services: ಖಾಸಗಿ ವಲಯದ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ಖಾತೆ ಹೊಂದಿರುವವರು ಇನ್ಮುಂದೆ ಈ ಬಗ್ಗೆ ಎಚ್ಚರದಿಂದಿರಬೇಕು. ಹೌದು, ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರಿಗೆ ಎರಡು ದಿವಸ ಹಲವು ಸೇವೆಗಳು (Bank Services) ಲಭ್ಯವಿಲ್ಲ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಇತ್ತೀಚೆಗೆ ಮಹತ್ವದ ಘೋಷಣೆ ಮಾಡಿದೆ.

Unnatural Physical Relation: ಪತ್ನಿಯೊಂದಿಗೆ ಅಸ್ವಾಭಾವಿಕ ಲೈಂಗಿಕತೆ ಮಾಡಬಹುದೇ ಬೇಡವೇ, ಹೈಕೋರ್ಟ್ ಕೊಡ್ತು ಅಚ್ಚರಿ ತೀರ್ಪು !

ಆದ್ದರಿಂದ ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರು ಈ ದಿನಾಂಕಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಸದ್ಯ ಯಾವ ಸೇವೆಗಳು ಲಭ್ಯವಿದೆ ಎಂಬುದನ್ನು ಪರಿಶೀಲಿಸಿ. ಅದಕ್ಕೆ ತಕ್ಕಂತೆ ಬ್ಯಾಂಕಿಂಗ್ ಸೇವೆಗಳನ್ನು ಯೋಜಿಸುವುದು ಉತ್ತಮ. ಇಲ್ಲದಿದ್ದರೆ, ನೀವು ತೊಂದರೆಗಳನ್ನು ಎದುರಿಸಬೇಕಾಗಬಹುದು.

ಈಗಾಗಲೇ ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಎಸ್‌ಎಂಎಸ್ ರೂಪದಲ್ಲಿ ಅನೇಕ ಸೇವೆಗಳು ಲಭ್ಯವಿರುವುದಿಲ್ಲ ಎಂದು ಇತ್ತೀಚೆಗೆ ಬಹಿರಂಗಪಡಿಸಿದೆ. ವಿಂಡೋ ಅಪ್‌ಡೇಟ್‌ನಿಂದಾಗಿ ಬ್ಯಾಂಕಿಂಗ್ ಸೇವೆಗಳಿಗೆ ಅಡ್ಡಿಯಾಗಲಿದೆ ಎಂದು ವಿವರಿಸಿದ್ದು ಆದ್ದರಿಂದ ಬ್ಯಾಂಕ್ ಗ್ರಾಹಕರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಎಚ್‌ಡಿಎಫ್‌ಸಿ ಬ್ಯಾಂಕ್ ನೆಟ್ ಬ್ಯಾಂಕಿಂಗ್ ಸೇವೆಗಳು ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಜೂನ್ 9 ರಂದು ಬೆಳಿಗ್ಗೆ 3.30 ರಿಂದ ಬೆಳಿಗ್ಗೆ 6.30 ರವರೆಗೆ ಲಭ್ಯವಿರುವುದಿಲ್ಲ. ಅಲ್ಲದೆ, ಈ ಸೇವೆಗಳು ಜೂನ್ 16 ರಂದು ಈ ಸೇವೆಗಳು ಬೆಳಿಗ್ಗೆ 3.30 ರಿಂದ 7.30 ರವರೆಗೆ ಲಭ್ಯವಿಲ್ಲ.

ಖಾತೆಗೆ ಸಂಬಂಧಿಸಿದ ಸೇವೆಗಳು, ಠೇವಣಿಗಳು, ನಿಧಿ ವರ್ಗಾವಣೆ (IMPS, NEFT, RTGS) ಸೇವೆಗಳು ಮೇಲೆ ತಿಳಿಸಿದ ಸಮಯದಲ್ಲಿ ಲಭ್ಯವಿರುವುದಿಲ್ಲ. ಅಂದರೆ ಹಣವನ್ನು ಕಳುಹಿಸಲಾಗುವುದಿಲ್ಲ. ಇನ್ನು ಯಾವುದೇ ಬಾಹ್ಯ ಅಥವಾ ವ್ಯಾಪಾರಿ ಪಾವತಿ ಸೇವೆಗಳು ಲಭ್ಯವಿಲ್ಲ. ಇನ್ನೂ ತ್ವರಿತ ಖಾತೆ ತೆರೆಯುವ ಸೇವೆಗಳನ್ನು ಪಡೆಯಲು ಸಾಧ್ಯವಿಲ್ಲ. ಅಲ್ಲದೆ UPI ಪಾವತಿಗಳನ್ನು ಮಾಡಲು ಸಾಧ್ಯವಿಲ್ಲ.

ಇನ್ನು ಬ್ಯಾಂಕ್ ಜೂನ್ 4 ಮತ್ತು ಜೂನ್ 6 ರಂದು ಸಿಸ್ಟಮ್‌ಗಳನ್ನು ನವೀಕರಿಸಿದೆ. ನಂತರ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಪ್ರಿಪೇಯ್ಡ್ ಕಾರ್ಡ್ ಸೇವೆಗಳು ಲಭ್ಯವಿಲ್ಲ. ಈಗ ಬ್ಯಾಂಕ್ ಖಾತೆ ಸೇವೆಗಳ ಮೇಲೆ ಪರಿಣಾಮ ಬೀರಿದೆ.

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!ಸರ್ಕಾರಿ ನೌಕರರ ಬೇಡಿಕೆಗೆ ಅಸ್ತು ಎಂದ ಸಿಎಂ, ಡಿಸಿಎಂ!