Home Business Ambani’s car driver salary: ಅಂಬಾನಿ ಕಾರು ಡ್ರೈವರ್’ಗಳು ನಮ್ಮ ಶಾಸಕರಿಗಿಂತ ಹೆಚ್ಚು ಗಳಿಸ್ತಾರೆ, ಅವ್ರ...

Ambani’s car driver salary: ಅಂಬಾನಿ ಕಾರು ಡ್ರೈವರ್’ಗಳು ನಮ್ಮ ಶಾಸಕರಿಗಿಂತ ಹೆಚ್ಚು ಗಳಿಸ್ತಾರೆ, ಅವ್ರ ಮಕ್ಳು ಓದೋದು US ನಲ್ಲಿ !

Ambani's car driver salary
Image source: MensXP

Hindu neighbor gifts plot of land

Hindu neighbour gifts land to Muslim journalist

Ambani’s car driver salary: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮುಕೇಶ್ ಅಂಬಾನಿ (Mukesh Ambani) ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು. ಮುಕೇಶ್ ಅಂಬಾನಿ (Mukesh Ambani) ದೇಶದಾದ್ಯಂತ ಏಷ್ಯಾ ಖಂಡದಲ್ಲಿಯೂ ನಂ.1 ಶ್ರೀಮಂತ ಎಂಬ ಪಟ್ಟವನ್ನು ಪಡೆದುಕೊಂಡಿದ್ದಾರೆ. 6.83 ಲಕ್ಷ ಕೋಟಿ ರೂ. ಆಸ್ತಿಯ ಒಡೆಯರಾಗಿದ್ದಾರೆ. ಅಂಬಾನಿಯು ಆಂಟಿಲಿಯಾ (Antilia) ಎಂಬ ಹೆಸರಿನ ಮನೆ ಹೊಂದಿದ್ದು, ಇದು ವಿಶ್ವದ ಎರಡನೇ ಅತ್ಯಂತ ದುಬಾರಿ ಮನೆಯಾಗಿದೆ. ಆಂಟಿಲಿಯಾವನ್ನು ನೋಡಿಕೊಳ್ಳಲು ಸುಮಾರು 600 ಸಿಬ್ಬಂದಿಗಳಿದ್ದಾರೆ. ಈ ನಿವಾಸದ ವೆಚ್ಚ ಸುಮಾರು 6,000 ಕೋಟಿ ಮತ್ತು 12,000 ಕೋಟಿ ರೂ. ಎನ್ನಲಾಗಿದೆ.

ಈ ಶ್ರೀಮಂತ ಉದ್ಯಮಿ ಅಂಬಾನಿ ಅವರ ಮನೆಯಲ್ಲಿನ ಕೆಲಸದವರಿಗೆ ಹೆಚ್ಚಿನ ವೇತನ ನೀಡಲಾಗುತ್ತದೆ. ಹೌದು, ಅಂಬಾನಿ ಕಾರು ಡ್ರೈವರ್’ಗಳು ಶಾಸಕರಿಗಿಂತ (MLA) ಹೆಚ್ಚು ಗಳಿಸ್ತಾರೆ. ಅವರ ವೇತನ ಎಷ್ಟೆಂದು ತಿಳಿದರೆ ಖಂಡಿತ ಶಾಕ್ ಆಗುತ್ತೀರಾ!!. ಹಾಗಿದ್ದರೆ ಅಂಬಾನಿ ಅವರ ಕಾರು ಡ್ರೈವರ್’ಗಳ ಸಂಬಳ (Ambani’s car driver salary) ಎಷ್ಟಿರಬಹುದು? ಮುಕೇಶ್‌ ಅಂಬಾನಿ ಡ್ರೈವರ್‌ ಒಂದು ತಿಂಗಳಿಗೆ ಎರಡು ಲಕ್ಷ ರೂಪಾಯಿ ಸಂಬಳ ಅಂದರೆ ವಾರ್ಷಿಕ 24 ಲಕ್ಷ ರೂ. ಪಡೆಯುತ್ತಾರೆ. ಬಹುಶಃ ಇಷ್ಟು ವೇತನ ದೊಡ್ಡ ದೊಡ್ಡ ಪದವಿ ಪಡೆದವರಿಗೂ ಇರಲಿಕ್ಕಿಲ್ಲ‌. ಅಂಬಾನಿ ಮನೆಯ ಬಾಣಸಿಗ ವೇತನವೂ ಎರಡು ಲಕ್ಷ ರೂಪಾಯಿ ಆಗಿದೆ. ಅಬ್ಬಬ್ಬಾ!! ಇವರ ವೇತನ ನೋಡಿದ್ರೆ, ಬೇರೆ ಕಡೆ ನೌಕರಿ ತೊರೆದು ಅಲ್ಲಿಗೆ ಹೋಗಿ ಸೇರಿಕೊಳ್ಳಬೇಕು ಎನಿಸುವಂತಿದೆ ಅಲ್ವಾ??

ಡ್ರೈವರ್ ವೇತನ ಇಷ್ಠಿರಬೇಕಾದರೆ ಆತ ಸಾಮಾನ್ಯ ಕಾರು ಚಾಲಕ ಆಗಿರಲಿಕ್ಕಿಲ್ಲ. ಎಲ್ಲಾ ರೀತಿಯಲ್ಲೂ, ಎಲ್ಲಾ ವಾಹನಗಳಲ್ಲಿ ಪರಿಣತಿ ಹೊಂದಿರುವವನೇ ಆಗಿರುತ್ತಾರೆ. ಹೌದು, ಅಂಬಾನಿ ಕುಟುಂಬದಲ್ಲಿ ಚಾಲಕನಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಜೊತೆಗೆ ಅವರಿಗೆ ಅನೇಕ ಪರೀಕ್ಷೆಗಳನ್ನು ನಡೆಸಿ ನಂತರ ಆಯ್ಕೆ ಮಾಡಲಾಗುತ್ತದೆ.
ಅಲ್ಲದೆ, ಅಂಬಾನಿಯವರಿಗೆ ಕಾರ್ ಡ್ರೈವರ್ ಗಳನ್ನು ಒದಗಿಸುವ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆ ಹೊಂದಿದೆ ಎನ್ನಲಾಗಿದೆ.

ಮುಖೇಶ್ ಅಂಬಾನಿ ತಮ್ಮ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸಂಬಳ ನೀಡುವುದು ಮಾತ್ರವಲ್ಲ ಅವರಿಗೆ ವಿಮೆ ಕೂಡ ನೀಡುತ್ತಾರೆ. ಅಂಬಾನಿ ಮನೆಯಲ್ಲಿ ಕೆಲಸ ಮಾಡುವ ಕೆಲವು ಸಿಬ್ಬಂದಿಗಳ ಮಕ್ಕಳು US ನಲ್ಲಿ ಓದುತ್ತಿದ್ದಾರಂತೆ. ಅಬ್ಬಬ್ಬಾ ಅಂಬಾನಿ ಮನೆ ಕೆಲಸದವರ ಅದೃಷ್ಟ ಸಖತ್ ಆಗಿದೆ ಎಂದೇ ಹೇಳಬಹುದು.

 

ಇದನ್ನು ಓದಿ: Pratap Simha: ” ಭಯ – ಆ ಭಯ ಇರಬೇಕು ಸಿದ್ದರಾಮಯ್ಯನವರೇ ” ಸಿದ್ದು ಕಾಲೆಳೆದ ಪ್ರತಾಪ್ ಸಿಂಹ !