Home Business Bank holiday: ನವೆಂಬರ್‌ನಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 10 ದಿನ ರಜೆ ಘೋಷಣೆ

Bank holiday: ನವೆಂಬರ್‌ನಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 10 ದಿನ ರಜೆ ಘೋಷಣೆ

Bank Holiday

Hindu neighbor gifts plot of land

Hindu neighbour gifts land to Muslim journalist

Bank holiday: ನವೆಂಬರ್ ತಿಂಗಳಲ್ಲಿ ಹಲವು ಹಬ್ಬಗಳ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 9 ರಿಂದ 10 ದಿನಗಳ ರಜೆ (bank holiday ) ಘೋಷಿಸಲಾಗಿದೆ. ಗ್ರಾಹಕರು ಮುಂಚಿತವಾಗಿ ಬ್ಯಾಂಕ್‌ ಕಾರ್ಯಗಳನ್ನು ಯೋಜನೆ ಮಾಡಿಕೊಳ್ಳುವುದು ಅಗತ್ಯ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಪ್ರತಿ ತಿಂಗಳು ಬ್ಯಾಂಕ್ ರಜೆಗಳ ವೇಳಾಪಟ್ಟಿಯನ್ನು ಪ್ರಕಟಿಸುತ್ತದೆ, ಅದರ ಪ್ರಕಾರ ಈ ಬಾರಿ ನವೆಂಬರ್‌ನಲ್ಲಿ ಒಟ್ಟು 10 ದಿನಗಳ ರಜೆಗಳು ಇರಲಿವೆ.

ಈ ತಿಂಗಳಲ್ಲಿ ಗುರುನಾನಕ್ ಜಯಂತಿ, ಕಾರ್ತಿಕ ಪೂರ್ಣಿಮೆ, ಕನಕದಾಸ ಜಯಂತಿ ಹಾಗೂ ಇತರ ಸ್ಥಳೀಯ ಹಬ್ಬಗಳ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಉದಾಹರಣೆಗೆ, ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಮತ್ತು ಇಗಾಸ್ ಬಾಗ್ವಾಲ್ ಹಬ್ಬದ ಕಾರಣದಿಂದ ಬೆಂಗಳೂರು ಮತ್ತು ಡೆಹ್ರಾಡೂನ್‌ನಲ್ಲಿ ಬ್ಯಾಂಕ್‌ಗಳು ರಜೆ ಇರುತ್ತವೆ.

ನವೆಂಬರ್ 5ರಂದು ಗುರುನಾನಕ್ ಜಯಂತಿ ಹಾಗೂ ಕಾರ್ತಿಕ ಪೂರ್ಣಿಮೆ ಪ್ರಯುಕ್ತ ದೇಶದ ಬಹುತೇಕ ಭಾಗಗಳಲ್ಲಿ ಬ್ಯಾಂಕ್‌ಗಳು ಮುಚ್ಚಲಿವೆ.

ನವೆಂಬರ್ 8ರಂದು ಎರಡನೇ ಶನಿವಾರ ಹಾಗೂ ಕನಕದಾಸ ಜಯಂತಿಯ ಸಂಧರ್ಭದಲ್ಲಿ ಬೆಂಗಳೂರಿನ ಬ್ಯಾಂಕ್‌ಗಳು ರಜೆ ಇರುತ್ತವೆ. ನವೆಂಬರ್ 22ರಂದು ನಾಲ್ಕನೇ ಶನಿವಾರ ಹಾಗೂ 23, 30ರಂದು ಭಾನುವಾರಗಳು ಇದ್ದುದರಿಂದ ಆ ದಿನಗಳಲ್ಲೂ ರಜೆ ಇರುತ್ತದೆ.

ರಜೆ ದಿನಗಳಲ್ಲಿ ಚೆಕ್ ಕ್ಲಿಯರೆನ್ಸ್‌, ಪಾಸ್‌ಬುಕ್ ಅಪ್‌ಡೇಟ್ ಅಥವಾ ನಗದು ವ್ಯವಹಾರಗಳಂತಹ ಬ್ರಾಂಚ್ ಸೇವೆಗಳು ಲಭ್ಯವಿರುವುದಿಲ್ಲ. ಆದರೆ ಮೊಬೈಲ್ ಬ್ಯಾಂಕಿಂಗ್‌, ಇಂಟರ್‌ನೆಟ್ ಬ್ಯಾಂಕಿಂಗ್‌ ಹಾಗೂ ಎಟಿಎಂ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.