Flower Show: ನವೆಂಬರ್ 27 ರಿಂದ ಕಬ್ಬನ್‌ ಪಾರ್ಕ್‌ನಲ್ಲಿ ಫ್ಲವ‌ರ್ ಶೋ, ಇಲ್ಲಿದೆ ಫುಲ್ ಡಿಟೇಲ್ಸ್

Share the Article

Flower Show: ಈ ತಿಂಗಳ ಕೊನೆಯಲ್ಲಿ ಕಬ್ಬನ್‌ ಪಾರ್ಕ್‌ನಲ್ಲಿ (Cubbon Park) ಫ್ಲವರ್ ಶೋ ಆರಂಭವಾಗುತ್ತಿದೆ.

ಇದೇ ನವೆಂಬರ್ 27 ರಿಂದ ಕಬ್ಬನ್ ಪಾರ್ಕ್‌ನಲ್ಲಿ ಫ್ಲವ‌ರ್ ಶೋ ಆರಂಭಆಗಲಿದ್ದು, ಸುಮಾರು 11 ದಿನಗಳ ಕಾಲ ಈ ಶೋ ಇರಲಿದೆ. ಮುಖ್ಯವಾಗಿ ಮಕ್ಕಳ ದಿನಾಚರಣೆ ಹಾಗೂ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಈ ಫ್ಲವ‌ರ್ ಶೋ ಆಯೋಜನೆ ಮಾಡುತ್ತಿದ್ದು, ಇದು ಬೆಂಗಳೂರಿಗೆ ಬಹಳ ಸಂತೋಷ ಸುದ್ದಿ.ಹಿಂದಿನ ಬಾರಿ ಸಹ ಮಕ್ಕಳ ದಿನಾಚರಣೆ ಅಂಗವಾಗಿ ಕಬ್ಬನ್ ಪಾರ್ಕ್‌ನಲ್ಲಿ 3 ದಿನಗಳ ಕಾಲ ಫ್ಲವರ್ ಶೋ ಆಯೋಜನೆ ಮಾಡಲಾಗಿತ್ತು.

ಈ ಬಾರಿ 11 ದಿನಗಳ ಕಾಲ ನಡೆಯಲಿದೆ ಅಂದರೆ ಡಿಸೆಂಬರ್ 8ರ ತನಕ ಇರಲಿದೆ ಎಂದು ತೋಟಗಾರಿಕಾ ಇಲಾಖೆ ತಿಳಿಸಿದೆ.ಅಲ್ಲದೇ, ಸುಮಾರು 20 ಸಾವಿರದಿಂದ 25 ಸಾವಿರದಷ್ಟು ಹೂ ಕುಂಡಗಳನ್ನ ಕಬ್ಬನ್ ಪಾರ್ಕ್‌ನ ಬಾಲ ಭವನದ ಹತ್ತಿರ, ಜಯಚಾರಾಜೇಂದ್ರ ಪ್ರತಿಮೆ ಮುಂದೆ ಹಾಗೂ ಬಾಲ್ ಸ್ಟ್ಯಾಂಡ್ ಮುಂದೆ ಪ್ರದರ್ಶನಕ್ಕೆ ಇಡಲು ನಿರ್ಧಾರ ಮಾಡಲಾಗಿದ್ದು. ಈ ಪ್ರದರ್ಶನ ಬೆಳಗ್ಗೆ 6 ಗಂಟೆಯಿಂದ ಆರಂಭ ಆಗುತ್ತದೆ ಮತ್ತು ಸಂಜೆ 7ರ ತನಕ ಇರಲಿದೆ. ವಯಸ್ಕರಿಗೆ 50 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದ್ದು, ಮಕ್ಕಳಿಗೆ 10 ರೂಪಾಯಿ ಇಡಲಾಗಿದೆ. ದೇಶ-ವಿದೇಶಗಳಿಂದ ತರಿಸಲಾಗಿರುವ ಬಣ್ಣಬಣ್ಣದ ಹೂಗಳಿಂದ ವಿವಿಧ ಆಕಾರಗಳನ್ನ ಈ ಬಾರಿ ಸಹ ನಿರ್ಮಾಣ ಮಾಡಲಾಗುತ್ತದೆ.

Comments are closed.