Arecanut price: ಭೂತಾನ್ ನಿಂದ ಅಡಿಕೆ ಆಮದು; ರೈತರಿಗೆ ಶಾಕ್, ಒಂದೇ ದಿನದಲ್ಲಿ ಎರಡು ಸಾವಿರ ಕುಸಿತ ಕಂಡ ಅಡಿಕೆ ದರ!!!
Agriculture news arecanut price update Arecanut rate details in Kannada
Arecanut price: ರಾಜ್ಯದಲ್ಲಿ (karnataka) ದಿನೋಪಯೋಗಿ ವಸ್ತುಗಳ ಬೆಲೆಯಲ್ಲಿ ಏರಿಳಿತ ಆಗುತ್ತಲೇ ಇದೆ. ಇದೀಗ ಗಗನಕ್ಕೇರಿದ ಅಡಿಕೆ ಬೆಲೆಯೂ ಕುಸಿತ ಕಂಡಿದೆ. ಇದು ಅಡಿಕೆ ಬೆಳೆಗಾರರನ್ನು ಕಂಗಾಲು ಮಾಡಿದೆ. ಅಡಿಕೆ ಬೆಲೆ (Arecanut price) ದಿನದಿಂದ ದಿನಕ್ಕೆ ಏರಿಕೆ, ಇಳಿಕೆ ಕಾಣುತ್ತ ರೈತರಿಗೆ ಭಾರೀ ತಲೆನೋವು ತಂದೊಡ್ಡಿದೆ. ಆದರೆ ಕೆಲದಿನಗಳಿಂದ ಅಡಿಕೆ ಬೆಲೆಯಲ್ಲಿ ನಿರಂತರವಾಗಿ ಏರಿಕೆ ಕಂಡಿತ್ತು, ಅಡಿಕೆ ಧಾರಣೆ ₹500ರ ಗಡಿ ಸಮೀಪಿಸುತ್ತಿತ್ತು. ಇದರಿಂದ ಬೆಳೆಗಾರರು ಕೊಂಚ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಇದೀಗ ಈ ಬೆಲೆ ಕುಸಿತ ಕಂಡಿದೆ.
ಅಡಿಕೆ ದರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಹಿನ್ನೆಲೆ ಈ ಮಧ್ಯೆ ಕೇಂದ್ರ ಸರ್ಕಾರ ಭೂತಾನ್ ನಿಂದ ಅಡಿಕೆ ಆಮದು ಮಾಡಿಕೊಂಡಿದೆ. ಇದರಿಂದ ರೈತರಿಗೆ (farmer) ಶಾಕ್ ಉಂಟಾಗಿದೆ. ಅದರಲ್ಲೂ ರಾಜ್ಯದಲ್ಲಿಯೇ ಅತಿ ಹೆಚ್ಚು ಅಡಿಕೆ ಬೆಳೆಯುವ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಇದೀಗ ಆತಂಕ ಮನೆ ಮಾಡಿದೆ.
ಒಂದು ತಿಂಗಳಿಂದ ಸರಾಸರಿ ಪ್ರತಿ ಕ್ವಿಂಟಾಲ್ ಅಡಿಕೆ 50 ರಿಂದ 55 ಸಾವಿರ ರೂ. ದರ. ಕೇಂದ್ರ ಸರ್ಕಾರ ಭೂತಾನ್ನಿಂದ 17 ಸಾವಿರ ಟನ್ ಅಡಿಕೆ ಆಮದು ಮಾಡಿಕೊಂಡಿದೆ. ಭೂತಾನ್ನಿಂದ ಅಡಿಕೆ ಬರುತ್ತಿದ್ದಂತೆ ಒಂದೇ ದಿನದಲ್ಲಿ ಪ್ರತಿ ಕ್ವಿಂಟಾಲ್ ಅಡಿಕೆ ದರ ಎರಡು ಸಾವಿರ ರೂಪಾಯಿ ಕುಸಿತ ಕಂಡಿದೆ. ಪ್ರತಿ ಕ್ವಿಂಟಾಲ್ ರಾಶಿ ಅಡಿಕೆ ದರ ಸರಾಸರಿ 50 ರಿಂದ 55 ಸಾವಿರ ಬದಲು ಅಡಿಕೆ ಕನಿಷ್ಟ 42,810 ರಿಂದ ಗರುಷ್ಠ 52,012ಕ್ಕೆ ಸರಾಸರಿ 49,627ಕ್ಕೆ ಕುಸಿತವಾಗಿದೆ. ಭೂತಾನ್ ಅಡಿಕೆ ಆಮದು ಹಿನ್ನೆಲೆ ಅಡಿಕೆ ದರ ಕುಸಿಯುತ್ತಿದ್ದು, ಇನ್ನಷ್ಟು ದರ ಕುಸಿಯುವ ಭೀತಿ ಎದುರಾಗಿದೆ.
ರೈತರು ನೀರಿನ ಕೊರತೆಯಿಂದಾಗಿ ಸಾಕಷ್ಟು ಅಡಿಕೆ ಮರಗಳನ್ನು ಕಡಿದು ಹಾಕಿದ್ದಾರೆ. ಇದರಿಂದ ಸುಮಾರು 14,562 ಟನ್ ನಷ್ಟು ಅಡಿಕೆ ಇಳುವರಿ ಕಡಿಮೆಯಾಗಿದೆ. ಜಿಲ್ಲೆಯಲ್ಲಿ 38,989 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಇತ್ತು. ಪ್ರತಿ ವರ್ಷ 62,568 ಟನ್ ಅಡಿಕೆ ಇಳುವರಿ ಬರುತ್ತಿತ್ತು. ಬುತಾನ್ದಿಂದ ಅಡಿಕೆ ಭಾರತಕ್ಕೆ ಬರುತ್ತಿದ್ದಂತೆ ಅಡಿಕೆ ದರದಲ್ಲಿ ಸ್ವಲ್ಪ ಮಟ್ಟಿನ ಏರುಪೇರು ಶುರುವಾಗಿದೆ. ಹೀಗೆ ಪ್ರತಿ ಕ್ವಿಂಟಾಲ್ ಅಡಿಕೆ ಬೆಲೆ ಕುಸಿಯುತ್ತಿದೆ. ಇದರಿಂದ ಮುಂಬರುವ ದಿನಗಳಲ್ಲಿ ವಿದೇಶ ಅಡಿಕೆ ಮಾತ್ರ, ದೇಶದ ಅಡಿಕೆ ಬೆಳಗಾರರಿಗೆಭಾರೀ ಪೆಟ್ಟು ಕೊಡಲಿದೆ.
ಇದನ್ನೂ ಓದಿ: ಶಿರ್ವ: ಪ್ರತಿಭಾವಂತ ವಿದ್ಯಾರ್ಥಿನಿ ಅನಾರೋಗ್ಯಕ್ಕೆ ತುತ್ತಾಗಿ ಸಾವು!!!