Rakhi Sawant: ಆದಿಲ್ ಖಾನ್ ಮೈಸೂರು ಜೈಲಿನಿಂದಲೇ ರಾಖಿ ಸಾವಂತ್ ನ್ನು ಕೊಲ್ಲಲು ಪ್ಲ್ಯಾನ್!? ಏನಿದು ಆರೋಪ???

Rakhi Sawant Claims Adil Khan Duranni Is Planning To KILL Her

Rakhi Sawant: ರಾಖಿ ಸಾವಂತ್ ಅವರ ಗೋಳು ಒಂದಲ್ಲಾ ಎರಡಲ್ಲಾ. ದಿನಕ್ಕೊಂದು ಗೋಳು ಇದ್ದೇ ಇದೆ. ವಿಚಿತ್ರ ಸ್ವಭಾವ ಇರುವ ರಾಖಿ, ಇರುವೆ ನೋಡಿ ಹೆಗ್ಗಣ ಅಂತಾರೆ. ಹಾಗಿರುವಾಗ ಚಿಕ್ಕ ವಿಚಾರ ಸಿಕ್ಕರೂ ಇಡೀ ವಿಶ್ವಕ್ಕೆ ಪ್ರಚಾರ ಮಾಡುತ್ತಾರೆ .

 

ಈ ಮೊದಲು ಸಲ್ಮಾನ್ ಖಾನ್​ಗೆ ಬೆದರಿಕೆ ಬಂದಾಗ ತಮಗೂ ಬೆದರಿಕೆ ಬಂದಿದೆ ಎಂದು ಹೇಳಿಕೊಂಡು ಓಡಾಡಿದ್ದರು. ಜೊತೆಗೆ ಹೆಲ್ಮೆಟ್ ಧರಿಸಿ ರಸ್ತೆ ಮೇಲೆಲ್ಲ ಸುತ್ತಾಡಿದ್ದರು.

ಮುಖ್ಯವಾಗಿ ರಾಖಿ (Rakhi Sawant) ಅವರು ಆದಿಲ್ ಖಾನ್​ ಜೊತೆಗಿನ ಮದುವೆ ವಿಚಾರವನ್ನು ಮುಚ್ಚಿಟ್ಟಿದ್ದ ಅವರು ನಂತರ ಅದನ್ನು ರಿವೀಲ್ ಮಾಡಿದರು. ಇದೀಗ ಪತಿ ಬಗ್ಗೆ ರಾಖಿ ಸಾವಂತ್ ಹಲವು ಆರೋಪ ಮಾಡಿದ್ದು, ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ಆದಿಲ್​ನ ಅರೆಸ್ಟ್​ ಮಾಡಲಾಗಿದೆ.

ಹೌದು, ಫೆಬ್ರವರಿ 7ರಂದು ರಾಖಿ ಸಾವಂತ್ ಪತಿ ಆದಿಲ್​ನ ಅರೆಸ್ಟ್​ ಮಾಡಲಾಯಿತು. ಆದಿಲ್​ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ರಾಖಿ ಸಾವಂತ್ ದೂರಿದ್ದರು. ಅಷ್ಟೇ ಅಲ್ಲ ದೈಹಿಕವಾಗಿ ಆತ ಹಿಂಸೆ ನೀಡಿದ್ದಾನೆ ಎಂದೆಲ್ಲ ಆರೋಪ ಮಾಡಿದ್ದರು ರಾಖಿ. ಹೀಗಾಗಿ, ಆದಿಲ್​ನ ಬಂಧಿಸಲಾಗಿದೆ. ಇರಾನಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ ಆರೋಪವೂ ಅವರ ಮೇಲಿದೆ. ಸದ್ಯ ಅವರು ಮೈಸೂರಿನ ಜೈಲಿನಲ್ಲಿದ್ದಾರೆ.

ಈಗ ಅವರು ಹೊಸ ಡ್ರಾಮಾ ಶುರು ಮಾಡಿದಂತಿದೆ. ಪತಿಯಿಂದ ಬೆದರಿಕೆ ಇದೆ ಎಂದು ಹೇಳಿಕೊಂಡಿದ್ದಾರೆ. ‘ನನ್ನನ್ನು ಕೊಲ್ಲಲು ಆದಿಲ್ ಜೈಲಿನಿಂದಲೇ ಪ್ಲಾನ್ ಮಾಡಿದ್ದಾನೆ’ ಎಂದು ಅವರು ಹೇಳಿದ್ದಾರೆ.

‘ಆದಿಲ್​ ನನ್ನನ್ನು ಕೊಲ್ಲಲು ಜೈಲಿನಿಂದಲೇ ಸಂಚು ರೂಪಿಸುತ್ತಿದ್ದಾನೆ. ನನ್ನ ಮುಗಿಸಲು ಕಾಂಟ್ರ್ಯಾಕ್ಟ್ ನೀಡಿದ್ದಾನೆ. ನೀನು ನನ್ನನ್ನು ಕೊಲ್ಲಲು ಸಾಧ್ಯವಿಲ್ಲ. ನೀನು ಹೀಗೇಕೆ ಮಾಡುತ್ತಿದ್ದೀಯಾ? ಹಣಕ್ಕಾಗಿಯೇ ಅಥವಾ ದ್ವೇಷಕ್ಕಾಗಿಯೇ?’ ಎಂದು ರಾಖಿ ಪ್ರಶ್ನೆ ಮಾಡಿದ್ದಾರೆ.

ಆದಿಲ್ ನಿತ್ಯ ಜೈಲಿನಿಂದ ನನಗೆ ಕರೆ ಮಾಡುತ್ತಾನೆ. ಐ ಲವ್ ಯೂ ಎನ್ನುತ್ತಾನೆ. ನನ್ನನ್ನು ಇಲ್ಲಿಂದ ಬಿಡಿಸು ಎನ್ನುತ್ತಾನೆ. ನಾನು ಅವನನ್ನು ಕ್ಷಮಿಸಿದ್ದೇನೆ. ಆದರೆ, ನಾನು ಅವನನ್ನು ಹತ್ತಿರ ಸೇರಿಸಿಕೊಳ್ಳುವುದಿಲ್ಲ’ ಎಂದು ರಾಖಿ ಹೇಳಿದ್ದಾರೆ.

ಇದನ್ನೂ ಓದಿ:Rashmika Mandanna: ರಶ್ಮಿಕಾ ನಟನೆಯ ಪುಷ್ಪಾ ಸಿನಿಮಾದ ಶ್ರೀವಲ್ಲಿ ಪಾತ್ರ ನಾನು ಚೆನ್ನಾಗಿ ಮಾಡುತ್ತಿದ್ದೆ- ಖ್ಯಾತ ನಟಿಯೋರ್ವಳ ಮಾತು

 

Leave A Reply

Your email address will not be published.