RCB ತಂಡದ ಹೆಸರು ಬದಲಾವಣೆ – ಹೊಸ ಹೆಸರು ಏನು?

RCB ಫ್ರಾಂಚೈಸಿಯ ಮಾಲೀಕತ್ವವನ್ನು ಮಾರಾಟ ಮಾಡಲು ಯುಕೆ ದೈತ್ಯ ಕಂಪನಿ ಡಿಯಾಜಿಯೊ ನಿಶ್ಚಯಿಸಿದೆ. ದರ ಬೆನ್ನಲ್ಲೇ ಆರ್‌ಸಿಬಿಯ ತಂಡದ ಹೆಸರು ಕೂಡ ಬದಲಾವಣೆಯಾಗುತ್ತದೆ ಎಂದು ಹೇಳಲಾಗುತ್ತಿದೆ.

ಕ್ರಿಕ್‌ಬಜ್ ಪ್ರಕಾರ ಅದಾನಿ ಗ್ರೂಪ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಖರೀದಿಸಲು ಇಚ್ಛಿಸುತ್ತಿದ್ದು, ಮೆಡಿಕಲ್ ಇಂಡಸ್ಟ್ರಿಯ ಬೃಹತ್ ಕಂಪನಿ ಸೀರಮ್ ಇನ್ಸ್ಟಿಟ್ಯೂಟ್‌ನ ಅದಾರ್ ಪೂನಾವಾಲಾ ಸಹ ಆಸಕ್ತರಾಗಿದ್ದಾರಂತೆ. ಅಲ್ಲದೇ ಜೆಎಸ್‌ಡಬ್ಲ್ಯೂ ಗ್ರೂಪ್‌ನ ಪಾರ್ಥ್ ಜಿಂದಾಲ್, ದೆಹಲಿ ಮೂಲದ ಕೋಟ್ಯಧಿಪತಿ ಹಾಗೂ ಅಮೆರಿಕಾ ಮೂಲದ ಎರಡು ಖಾಸಗಿ ಸಂಸ್ಥೆಗಳು ಹೀಗೆ ಆರು ಸಂಸ್ಥೆಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಖರೀದಿಸಲು ಆಸಕ್ತಿ ತೋರಿಸಿವೆ.
ಇನ್ನೂ ರಾಯಲ್ ಚಾಲೆಂಜರ್ಸ್ ಎಂಬ ಹೆಸರನ್ನು ರಾಯಲ್ ಚಾಲೆಂಜ್ ಎಂಬ ಮದ್ಯಪಾನದ ಬ್ರಾಂಡ್‌ನಿಂದ ಆರಿಸಿ ಇಡಲಾಗಿತ್ತು. ಹೀಗಾಗಿ ಆರ್‌ಸಿಬಿ ಖರೀದಿಸುವ ಮುಂದಿನ ಮಾಲೀಕರು ತಮ್ಮದಲ್ಲದ ರಾಯಲ್ ಚಾಲೆಂಜ್ ಬ್ರಾಂಡ್‌ಗೆ ಉಚಿತವಾಗಿ ಪ್ರಚಾರ ಮಾಡಲು ಮುಂದಾಗುವುದಿಲ್ಲ. ಹೀಗಾಗಿ ಖಂಡಿತವಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರು ಬದಲಾಗಲಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
Comments are closed.