RCB: ಅಧಿಕೃತವಾಗಿ ಮಾರಾಟಕ್ಕೆ ಸಿದ್ಧವಾದ RCB – ಖರೀದಿಗೆ ಮುಂದಾಗಿದ್ದು ಯಾರು?

RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಲೀಕರಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL) ತಮ್ಮ ಕ್ರಿಕೆಟ್ ತಂಡದ ಮೇಲೆ ದೊಡ್ಡ ನಿರ್ಧಾರ ಕೈಗೊಂಡಿದೆ. ಅಂದರೆ ಆರ್‌ಸಿಬಿಯನ್ನು ಅಧಿಕೃತವಾಗಿ ಮಾರಾಟಮಾಡಲು ಸಿದ್ದ ಮಾಡಿದೆ. ಹಾಗಿದ್ದರೆ ತಂಡವನ್ನು ಖರೀದಿಸಲು ಮುಂದಾಗಿದ್ದು ಯಾರು? ಎಷ್ಟು ಕೋಟಿಗಳಿಗೆ ಮಾರಾಟವಾಗುತ್ತದೆ? ಇಲ್ಲಿದೆ ನೋಡಿ ಡೀಟೇಲ್ಸ್

ಹೌದು, ಡಿಯನ್ ಪ್ರೀಮಿಯರ್ ಲೀಗ್ನ (IPL) ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯ ಮಾಲೀಕರು ಬದಲಾಗುವುದು ಖಚಿತವಾಗಿದೆ. ಈ ಬಗ್ಗೆ ಖುದ್ದು ಡಿಯಾಜಿಯೊ ಮಾಹಿತಿ ನೀಡಿದೆ. ಅಲ್ಲದೆ “ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ (RCSPL) ನಲ್ಲಿನ ಹೂಡಿಕೆಯ ಮೌಲ್ಯಮಾಪನಕ್ಕೆ ಮುಂದಾಗುತ್ತಿರುವುದಾಗಿ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ಗೆ ನೀಡಿದ ಸಂವಹನದಲ್ಲಿ ತಿಳಿಸಿದೆ.
ಅಂದಹಾಗೆ RCBಯ IPL ಮತ್ತು WPL ತಂಡಗಳ ಮಾಲೀಕತ್ವ ಹೊಂದಿರುವ UK ಮೂಲದ ಮದ್ಯದ ದೈತ್ಯ ಡಿಯಾಜಿಯೊ, ಮಾರ್ಚ್ 31, 2026ರೊಳಗೆ ತನ್ನ ಫ್ರಾಂಚೈಸಿಯನ್ನು ಮಾರಾಟ ಮಾಡುವ ಪ್ರಕ್ರಿಯೆಯನ್ನ ಪ್ರಾರಂಭಿಸಿದ್ದು, ಅದನ್ನು ಪೂರ್ಣಗೊಳಿಸುವ ಗುರಿಯನ್ನ ಹೊಂದಿದೆ.
ಯುನೈಟೆಡ್ ಸ್ಪಿರಿಟ್ಸ್‌ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಸೋಮೇಶ್ವರ್ ಹೇಳುವಂತೆ, ಕಂಪನಿಯು ತನ್ನ ಪ್ರಮುಖ ವ್ಯವಹಾರವಾದ ಮದ್ಯಪಾನ ಉತ್ಪಾದನೆಯತ್ತ ಹೆಚ್ಚಿನ ಗಮನಹರಿಸಲು ಬಯಸುತ್ತಿದೆ. ಆರ್‌ಸಿಬಿ ನಮ್ಮಿಗೆ ಮೌಲ್ಯಯುತ ಆಸ್ತಿ ಆಗಿದ್ದರೂ, ಇದು ನಮ್ಮ ಮೂಲ ವ್ಯವಹಾರಕ್ಕೆ ನೇರ ಸಂಬಂಧ ಹೊಂದಿಲ್ಲ. ಆದ್ದರಿಂದ ನಾವು ಎಲ್ಲಾ ಪಾಲುದಾರರ ದೀರ್ಘಾವಧಿಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ತೆಗೆದುಕೊಂಡಿದ್ದೇವೆ, ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಕಾರ್ಯತಂತ್ರದ ಪರಿಶೀಲನೆಯ ನಂತರ, ಆರ್‌ಸಿಬಿ ತಂಡದ ಮಾರಾಟದ ಸಾಧ್ಯತೆಗಳೂ ಇದೆ ಎಂದು ಅಂದಾಜಿಸಲಾಗಿದೆ. ಕ್ರಿಕೆಟ್ ತಂಡದಿಂದ ಬರುವ ಆದಾಯ ಯುನೈಟೆಡ್ ಸ್ಪಿರಿಟ್ಸ್‌ನ ಒಟ್ಟು ಆದಾಯದಲ್ಲಿ ಅತಿ ಕಡಿಮೆ ಪಾಲು ಹೊಂದಿದೆ.
ಈ ನಡುವೆ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಮಾಲೀಕರಾದ ಅದರ್ ಪೂನಾವಾಲಾ ಅವರು ಆರ್‌ಸಿಬಿ ತಂಡವನ್ನು ಖರೀದಿಸಲು ಆಸಕ್ತಿ ತೋರಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮಿಂಟ್ ವರದಿಯ ಪ್ರಕಾರ, ಪೂನಾವಾಲಾ ಅವರು ತಂಡವನ್ನು 1 ರಿಂದ 1.2 ಶತಕೋಟಿ ಡಾಲರ್‌ಗಳ ಮೌಲ್ಯಕ್ಕೆ ಖರೀದಿಸಲು ಯೋಜನೆ ರೂಪಿಸಿದ್ದಾರೆ. ಇದರ ಅಂದಾಜು ಮೌಲ್ಯ ಸುಮಾರು ₹10,600 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಆಗಬಹುದು ಎಂದು ವರದಿಯಾಗಿದೆ. ಇದು ಕ್ರಿಕೆಟ್ ತಂಡದ ವಾರ್ಷಿಕ ಆದಾಯದ ಸುಮಾರು 20 ಪಟ್ಟು ಹೆಚ್ಚು ಮೌಲ್ಯ ಎಂದು ತಜ್ಞರು ಹೇಳುತ್ತಾರೆ.
ಕಳೆದ ವರ್ಷ ಪುರುಷರ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಕಡಿಮೆ ಪಂದ್ಯಗಳನ್ನು ಆಡಿದ್ದರಿಂದ, ಅದರ ಆದಾಯದಲ್ಲಿ 21% ಇಳಿಕೆ ಕಂಡು ₹504 ಕೋಟಿಗೆ ತಲುಪಿದೆ. ಹಾಗೆಯೇ, ಲಾಭದಲ್ಲೂ 36% ಇಳಿಕೆ ಕಂಡು ₹140 ಕೋಟಿಗೆ ತಲುಪಿದೆ. ಈ ಮೊತ್ತ ಯುನೈಟೆಡ್ ಸ್ಪಿರಿಟ್ಸ್‌ನ ಒಟ್ಟು ಆದಾಯದ ಕೇವಲ 9% ಮಾತ್ರ.
ಈ ವಿಷಯದ ಬಗ್ಗೆ ಡಿಯಾಗಿಯೋ ಇಂಡಿಯಾ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಪೂನಾವಾಲಾ ಅವರ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ. ಪೂನಾವಾಲಾ ಕೇವಲ ಭಾಗಶಃ ಹೂಡಿಕೆ ಮಾಡುವ ಉದ್ದೇಶವಲ್ಲ, ಬದಲಿಗೆ ಪೂರ್ಣ ಆರ್‌ಸಿಬಿ ಫ್ರಾಂಚೈಸಿಯನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಳ್ಳಲು ಬಯಸುತ್ತಿದ್ದಾರೆ ಎಂದು ತಿಳಿದುಬಂದಿದೆ.
Comments are closed.