Karnataka Squad: ರಣಜಿ ಟೂರ್ನಿಗೆ ಕರ್ನಾಟಕ ತಂಡ ಪ್ರಕಟ

Share the Article

Ranaji Trophy 2025 Karnataka Squad: ಅ.15 ರಿಂದ ಶುರುವಾಗಲಿರುವ ರಣಜಿ ಟ್ರೋಫಿ ಟೂರ್ನಿಯ ಮೊದಲ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಪ್ರಕಟ ಮಾಡಲಾಗಿದೆ. ಸೌರಾಷ್ಟ್ರ ವಿರುದ್ಧದ ಪಂದ್ಯಕ್ಕಾಗಿ ಕರ್ನಾಟಕ ತಂಡ ಈ ರೀತಿ ಇದೆ. ಗ್ರೂಪ್-ಬಿ ಹಂತದ ಮೊದಲ ಪಂದ್ಯ ರಾಜ್‌ಕೋಟ್‌ನಲ್ಲಿ ನಡೆಯಲಿದ್ದು, ಕರ್ನಾಟಕ ಹಾಗೂ ಸೌರಾಷ್ಟ್ರ ತಂಡ ಮುಖಾಮುಖಿಯಾಗಲಿದೆ.

ಕರ್ನಾಟಕ ರಣಜಿ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಕರುಣ್ ನಾಯರ್, ಆರ್. ಸ್ಮರಣ್, ಕೆಎಲ್ ಶ್ರೀಜಿತ್ (ವಿಕೆಟ್ ಕೀಪರ್), ಕೆವಿ ಅನೀಶ್, ಅಭಿನವ್ ಮನೋಹರ್, ನಿಕಿನ್ ಜೋಸ್, ವಿಜಯಕುಮಾರ್ ವೈಶಾಕ್, ವಿಧ್ವತ್ ಕಾವೇರಪ್ಪ, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ (ವಿಕೆಟ್ ಕೀಪರ್), ಶಿಖರ್ ಶೆಟ್ಟಿ, ಮೊಹ್ಸಿನ್ ಖಾನ್, ಅಭಿಲಾಷ್ ಶೆಟ್ಟಿ, ಎಂ. ವೆಂಕಟೇಶ್.

ಮೊದಲ ಪಂದ್ಯಕ್ಕೆ ಮಾತ್ರ ತಂಡವನ್ನು ಪ್ರಕಟ ಮಾಡಿದ್ದು, ಈ ಪಂದ್ಯದ ನಂತರ ಉಳಿದ ಮ್ಯಾಚ್‌ಗಳಿಗೆ ಕರ್ನಾಟಕ ತಂಡವನ್ನು ಮತ್ತೆ ಹೆಸರಿಸಲಾಗುತ್ತದೆ.

Comments are closed.