Cricket: 331 ಎಸೆತಗಳಲ್ಲಿ ಹೊಸ ವಿಶ್ವ ದಾಖಲೆ ಮಾಡಿದ ಅಭಿಷೇಕ್ ಶರ್ಮಾ

Cricket: ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ (Cricket) ಟೀಮ್ ಇಂಡಿಯಾದ ಯುವ ಆಟಗಾರ ಅಭಿಷೇಕ್ ಶರ್ಮಾ (Abhishek Sharma) ಅವರು ಹೊಸ ವಿಶ್ವ ದಾಖಲೆ ಮಾಡಿದ್ದಾರೆ.

ದುಬೈನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ 39 ಎಸೆತಗಳಲ್ಲಿ 5 ಸಿಕ್ಸ್ಗಳೊಂದಿಗೆ 74 ರನ್ ಗಳಿಸಿ, ಟಿ20 ಕ್ರಿಕೆಟ್ನಲ್ಲಿ ಐವತ್ತು ಸಿಕ್ಸರ್ಗಳನ್ನು ಕೇವಲ 331 ಎಸೆತಗಳಲ್ಲಿ ಬಾರಿಸಿದ್ದಾರೆ. ಹೀಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ಎಸೆತಗಳಲ್ಲಿ 50 ಸಿಕ್ಸ್ಗಳ ಬಾರಿಸಿದ ವಿಶ್ವ ದಾಖಲೆ ಅಭಿಷೇಕ್ ಶರ್ಮಾ ಪಾಲಾಗಿದೆ.
ಇದನ್ನೂ ಓದಿ:Nirmala Sitharaman GST 2.0: ಹೊಸ ಜಿಎಸ್‌ಟಿ ಜಾರಿ: ಇಂದಿನಿಂದ ಈ ವಸ್ತುಗಳು ದುಬಾರಿ
ಈ ಮೊದಲು ಮುನ್ನ ಈ ಭರ್ಜರಿ ದಾಖಲೆ ವೆಸ್ಟ್ ಇಂಡೀಸ್ನ ಎವಿನ್ ಲೂಯಿಸ್ ಹೆಸರಿನಲ್ಲಿತ್ತು. ಇವರು 366 ಎಸೆತಗಳಲ್ಲಿ 50 ಸಿಕ್ಸ್ ಸಿಡಿಸಿದ್ದರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತೀ ವೇಗವಾಗಿ 50 ಸಿಕ್ಸರ್ಗಳನ್ನು ಬಾರಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಮಾಡಿದ್ದರು. ಇದೀಗ ಈ ದಾಖಲೆಯನ್ನು ಮುರಿದು ಅಭಿಷೇಕ್ ಶರ್ಮಾ ಹೊಸ ಇತಿಹಾಸ ನಿರ್ಮಿಸಿದ್ದಾರೆ.
Comments are closed.