Kitchen Hacks: ಕರಿಬೇವಿನ ಎಲೆಗಳನ್ನು ತಿಂಗಳುಗಳ ಕಾಲ ಹೀಗೆ ಸಂಗ್ರಹಿಸಿಡಿ; ಫ್ರೆಶ್ ಆಗಿರುತ್ತೆ!

Share the Article

Kitchen Hacks: ಅಡುಗೆಗೆ ರುಚಿಯ ಜೊತೆಗೆ ಘಮ್ ಅನ್ನೋ ಸುವಾಸನೆ ಕೂಡಾ ಅಷ್ಟೇ ಮುಖ್ಯ. ಅದಕ್ಕಾಗಿ ಕೆಲವರು ಕೊತ್ತಂಬರಿ ಸೊಪ್ಪು, ಕರಿ ಬೇವಿನ ಸೊಪ್ಪು, ಪುದಿನಾ ಸೊಪ್ಪು ಹೀಗೆ ನಾನಾ ಸೊಪ್ಪುಗಳನ್ನು ಬಳಸುತ್ತಾರೆ. ಆದರೆ ಒಂದು ಸಮಸ್ಯೆಯೆಂದರೆ ಕರಿಬೇವಿನ ಎಲೆಗಳು ತುಂಬಾ ಸೂಕ್ಷ್ಮವಾಗಿರುತ್ತವೆ. ಅಲ್ಲದೇ ಎರಡು ಮೂರು ದಿನಗದಲ್ಲೇ ಒಣಗಲು, ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತವೆ. ಅದಕ್ಕಾಗಿ ನೀವು ಕರಿ ಬೇವಿನ ಸೊಪ್ಪನ್ನು ತಿಂಗಳುಗಳ ಕಾಲ ಪ್ರೆಶ್ ಆಗಿರಿಸಲು ಈ ವಿಧಾನ (Kitchen Hacks) ಬಳಸಿ.

ಮೊದಲು ಕರಿಬೇವಿನ ಎಲೆಗಳನ್ನು ಶುಭ್ರವಾಗಿ ತೊಳೆದು, ಬಟ್ಟೆಯ ಮೇಲೆ ಹರಡಿ, ನೀರು ಸಂಪೂರ್ಣವಾಗಿ ಆರುವವರೆಗೆ ಬಿಡಿ. ನೆನಪಿರಲಿ ನೀರು ಸಂಪೂರ್ಣವಾಗಿ ಆರಿದ ನಂತರ ಮಾತ್ರ, ಅವುಗಳನ್ನು ಕಾಗದದ ಟವಲ್‌ನಲ್ಲಿ ಸುತ್ತಿ, ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ, ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿ ಇಟ್ಟಲ್ಲಿ ಒಂದು ವಾರದವರೆಗೂ ಫ್ರೆಶ್ ಆಗಿ ಇರಿಸಬಹುದಾಗಿದೆ.

ಮತ್ತೊಂದು ಉತ್ತಮ ವಿಧಾನವೆಂದರೆ ಎಲೆಗಳನ್ನು ಐಸ್ ಟ್ರೇನಲ್ಲಿ ಸಂಗ್ರಹಿಸುವುದು. ಅದಕ್ಕಾಗಿ ಕರಿ ಬೇವು ಎಲೆಗಳನ್ನು ತೊಳೆದು ಒಣಗಿಸಿ, ಐಸ್ ಟ್ರೇನಲ್ಲಿ ಹಾಕಿ, ನೀರಿನಿಂದ ತುಂಬಿಸಿ, ಫ್ರೀಜರ್‌ನಲ್ಲಿಡಿ. ಅವು ಹೆಪ್ಪುಗಟ್ಟಿ ಗಟ್ಟಿಯಾಗಿ ರೂಪುಗೊಳ್ಳುತ್ತವೆ. ನಂತರ ಅಗತ್ಯವಿದ್ದಾಗ, ಒಂದು ಗಡ್ಡೆಯನ್ನು ತೆಗೆದುಕೊಂಡು ಬೆಚ್ಚಗಿನ ನೀರಿನಲ್ಲಿ ಅದ್ದಿ. ಇದು ಅವುಗಳನ್ನು ಫ್ರೆಶ್ ಆಗಿರುವ ಕರಿಬೇವಿನ ಎಲೆಗಳಂತೆ ತಾಜಾವಾಗಿ ಇರುತ್ತದೆ.

ಇನ್ನೊಂದು ವಿಧಾನವೆಂದರೆ ಎಲೆಗಳನ್ನು ಚೆನ್ನಾಗಿ ತೊಳೆದು, ಚೆನ್ನಾಗಿ ಒಣಗಿಸಿ, ನಂತರ ಅವುಗಳನ್ನು ಗರಿಗರಿಯಾಗಿಸಲು ಬಿಸಿಲಿನಲ್ಲಿ ಅಥವಾ ಮೈಕ್ರೋವೇವ್/ಏರ್ ಫ್ರೈಯರ್‌ನಲ್ಲಿ ಒಂದೆರಡು ನಿಮಿಷಗಳ ಕಾಲ ಇರಿಸಿ. ನಂತರ ಅವುಗಳನ್ನು ಡಬ್ಬದಲ್ಲಿ ಸಂಗ್ರಹಿಸಿ, ಆಗ ಅವು ತಿಂಗಳುಗಳವರೆಗೆ ಇರುತ್ತವೆ.

ಇದನ್ನೂ ಓದಿ:Shah rukh khan: ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ದಾನಿ ಸಂಬಳ ಎಷ್ಟು? ಅವರ ಆಸ್ತಿ ಮೌಲ್ಯ ಎಷ್ಟು ಗೊತ್ತಾ?

ಅಥವಾ ಕರಿಬೇವಿನ ಎಲೆಗಳನ್ನು ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ ಫ್ರಿಡ್ಜ್‌ನಲ್ಲಿ ಇಡಬಹುದು.

ಇನ್ನೊಂದು ವಿಧಾನವೆಂದರೆ, ಎಲೆಗಳನ್ನು ಉಪ್ಪು ನೀರಿನಲ್ಲಿ ಸ್ವಲ್ಪ ಸಮಯ ನೆನೆಸಿ. ಅದು ಒಣಗಿದ ನಂತರ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡಿ.

Comments are closed.