Cricket: ‘T-20 I’ ನಲ್ಲಿ ನಂ.1 ಸ್ಥಾನ ಪಡೆದ ಭಾರತದ ಸ್ಪಿನ್ನರ್ ವರುಣ್ ಚಕ್ರವರ್ತಿ

Cricket: ಇಂದು (ಸೆಪ್ಟೆಂಬರ್ 17) ರ ಬುಧವಾರದಂದು ವರುಣ್ ಚಕ್ರವರ್ತಿ ಟಿ20ಐ ಶ್ರೇಯಾಂಕದಲ್ಲಿ ನಂ.1 ಸ್ಥಾನ ಪಡೆದಿದ್ದಾರೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ (Cricket) ಕೌನ್ಸಿಲ್ ಘೋಷಣೆ ಮಾಡಿದೆ.

ವರುಣ್ ಚಕ್ರವರ್ತಿ ಮೂರು ಸ್ಥಾನಗಳ ಏರಿಕೆಯೊಂದಿಗೆ ಜಾಕೋಬ್ ಡಫಿ ಅವರನ್ನು ಅಗ್ರ ಸ್ಥಾನದಿಂದ ಕೆಳಗಿಳಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ ಐಸಿಸಿ ಟಿ20ಐ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದ ಮೂರನೇ ಭಾರತೀಯ ಬೌಲರ್ ಪಟ್ಟವನ್ನು ವರುಣ್ ಚಕ್ರವರ್ತಿ ಪಡೆದುಕೊಂಡಿದ್ದಾರೆ.
ಈ ಮೊದಲು ಅಗ್ರಸ್ಥಾನ ಪಡೆದ ಭಾರತೀಯ ಬೌಲರ್ ಪಟ್ಟವನ್ನು ಜಸ್ಪ್ರೀತ್ ಬುಮ್ರಾ ಮತ್ತು ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಪಡೆದಿದ್ದರು.
Comments are closed.