Mangalore: ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

Share the Article

Mangalore: ಪಿಯುಸಿ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬ ಸೋಮವಾರ ಸಂಜೆ ಕಾಲೇಜಿನಿಂದ ಮನೆಗೆ ಬಂದು ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಂಬೆ ಬಳಿ ನಡೆದಿರುವ ಕುರಿತು ವರದಿಯಾಗಿದೆ.

ಮನೆಯಲ್ಲಿ ಪೋಷಕರು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ತುಂಬೆಯ ಪರ್ಲಕ್ಕೆ ನಿವಾಸಿಗಳಾದ ಕರುಣಾಕರ ಗಟ್ಟಿ ಮತ್ತು ಶೋಭಾ ಗಟ್ಟಿ ದಂಪತಿಗಳ ಪುತ್ರ ತೇಜಸ್‌ ಗಟ್ಟಿ (17) ಮೃತ ವಿದ್ಯಾರ್ಥಿ.

ತಂದೆ ಕರುಣಾಕರ ಕೆಲಸದಿಂದ ಬಂದು ಬಾಗಿಲು ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ತೇಜಸ್‌ ಗಟ್ಟಿ ಮೊಡಂಕಾಪು ಕಾಲೇಜಿನಲ್ಲಿ ಪಿಯುಸಿ ಎರಡನೇ ವರ್ಷದ ವಿದ್ಯಾರ್ಥಿ. ಕಳೆದ ಶನಿವಾರ ಕಾಲೇಜಿನಲ್ಲಿ ತೇಜಸ್‌ ಮೊಬೈಲ್‌ ಬಳಸಿ ಉಪನ್ಯಾಸಕರಿಗೆ ಸಿಕ್ಕಿ ಬಿದ್ದಿದ್ದು, ಕಾಲೇಜು ಆಡಳಿತದವರು ಮೊಬೈಲ್‌ ವಶಪಡಿಸಿ ನಂತರ ತಂದೆ ತಾಯಿಗೆ ತಿಳಿಸಿದ್ದಾರೆ. ಸೋಮವಾರ ತೇಜಸ್‌ಗೆ ಮೊಬೈಲ್‌ ನೀಡಿರಲಿಲ್ಲ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ: Kodagu:ಕೊಡಗು: ಜು.09 ರಂದು ಉದ್ಯೋಗ ಮೇಳ!

Comments are closed.