IND vs ENG: ಇಂಗ್ಲೆಂಡ್ ವಿರುದ್ಧ 4-1 ಅಂತರದಲ್ಲಿ ಭಾರತಕ್ಕೆ ಸರಣಿ ಜಯ

IND vs ENG: ಸೂಪರ್ ಸಂಡೆ ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ (England) ವಿರುದ್ಧ ನಡೆದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಟಿ20 ಸರಣಿಯನ್ನು 4-1 ಅಂತರದಲ್ಲಿ ಗೆದ್ದುಕೊಂಡಿದೆ. ಅಲ್ಲದೇ 2019ರ ಬಳಿಕ ಒಂದೇ ಒಂದು ಟಿ20 ಸರಣಿಯನ್ನೂ ಸೋಲದ ಭಾರತ ಗೆಲುವಿನ ಪರಂಪರೆಯನ್ನು ಮುಂದುವರಿಸಿದೆ.
ಭಾರತ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 247 ರನ್ ಕಲೆಹಾಕಿತು. ಭಾರತದ ಪರ ಅಭಿಷೇಕ್ ಶರ್ಮಾ 135 ರನ್ (54 ಎಸೆತ, 13 ಸಿಕ್ಸರ್, 7 ಬೌಂಡರಿ), ಶಿವಂ ದುಬೆ 30 ರನ್, ತಿಲಕ್ ವರ್ಮಾ 24 ರನ್, ಸಂಜು ಸ್ಯಾಮ್ಸನ್ 16 ರನ್, ಅಕ್ಷರ್ ಪಟೇಲ್ 15 ರನ್, ಸೂರ್ಯಕುಮಾರ್ ಯಾದವ್ 2 ರನ್, ಹಾರ್ದಿಕ್ ಪಾಂಡ್ಯ ಮತ್ತು ರಿಂಕು ಸಿಂಗ್ ತಲಾ 9 ರನ್ ಗಳಿಸಿದ್ರು.
ಗೆಲುವಿಗೆ 248 ರನ್ಗಳ ಬೃಹತ್ ಗುರಿ ಪಡೆದ ಇಂಗ್ಲೆಂಡ್ 10.3 ಓವರ್ಗಳಲ್ಲೇ 97 ರನ್ಗಳಿಗೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡು ಸೋಲೊಪ್ಪಿಕೊಂಡಿತು.
Comments are closed.