Kunkuma: ಕೆಮಿಕಲ್ ಬಳಸದೆ ಮನೆಯಲ್ಲೇ ಒರಿಜಿನಲ್ ಕುಂಕುಮ ಮಾಡುವುದು ಹೇಗೆ? ಇಲ್ಲಿದೆ ನೋಡಿ ಸುಲಭ ವಿಧಾನ !!
Kunkuma: ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಾಗೂ ಸಂಪ್ರದಾಯದಲ್ಲಿ ಅರಿಶಿನ ಹಾಗೂ ಕುಂಕುಮಕ್ಕೆ ಮಹತ್ವ ಜಾಸ್ತಿ. ಯಾವುದೇ ಶುಭ ಸಂದರ್ಭ ಕೂಡ ಅರಿಶಿನ ಹಾಗು ಕುಂಕುಮ(Kunkuma) ಇಲ್ಲದೆ ನಡೆಯುವುದೇ ಇಲ್ಲ. ಇವುಗಳಿಗೆ ಡಿಮ್ಯಾಂಡ್ ಹೆಚ್ಚಾದಂತೆ ನಕಲಿ ಅರಿಶಿನ ಕುಂಕುಮ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. ಇದರ ರಗಳೆಯನ್ನು ತಪ್ಪಿಸಲು ನೀವು ಮನೆಯಲ್ಲೇ ಕುಳಿತುಕೊಂಡು ಒರಿಜಿನಲ್ ಕುಂಕುಮವನ್ನು ತಯಾರಿಸಬಹುದು.
ಎಸ್, ಹರಿಶಿಣ ಕುಂಕುಮಕ್ಕೆ ಬೇಡಿಕೆ ಹೆಚ್ಚಾಗಿರುವ ಕಾರಣ ಮಾರುಕಟ್ಟೆಯಲ್ಲೆಲ್ಲಾ ನಕಲಿ ಅರಿಶಿಣ ಕುಂಕುಮ ಚಾಲ್ತಿಯಲ್ಲಿದೆ. ಅರಿಶಿನವನ್ನಾದರೂ ಹೇಗಾದರೂ ಮಾಡಿ ಮನೆಯ ಬಳಿ ಬೆಳೆದುಕೊಳ್ಳಬಹುದು. ಈ ಮೂಲಕವಾದರೂ ನಾವು ಒರಿಜಿನಲ್ ಅರಿಶಿನವನ್ನು ಪಡೆಯಬಹುದು. ಆದರೆ ಕುಂಕುಮದ ಕಥೆಯಂತೂ ಕೇಳುವುದೇ ಬೇಡ. ಇರೋ ಬರೋ ಕೆಮಿಕಲ್ ಗಳನ್ನು ಹಾಕಿ, ಮುಟ್ಟಿದರೆ ಎರಡು ದಿನವಾದರೂ ಬಣ್ಣ ಮಾಸದಿರುವಂತಹ ವಿವಿಧ ಬಗೆಯ ಕುಂಕುಮಗಳು ಮಾರುಕಟ್ಟೆಯಲ್ಲಿ ಓಡಾಡುತ್ತಿವೆ. ಇದು ಅನೇಕರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಆದರೆ ಇನ್ನು ಮುಂದೆ ಆ ಚಿಂತೆಯನ್ನು ಬಿಡಿ. ಏಕೆಂದರೆ ನೀವು ಮನೆಯಲ್ಲಿ ಕುಳಿತುಕೊಂಡು ಒರಿಜಿನಲ್ ಆದ ಕುಂಕುಮವನ್ನು ತಯಾರಿಸಿಕೊಳ್ಳಬಹುದು. ಇದನ್ನು ನಮ್ಮ ದಿನನಿತ್ಯದ ಪೂಜೆಯ ಬಳಕೆಗೆ ಉಪಯೋಗಿಸಿಕೊಳ್ಳಬಹುದು. ಹಾಗಿದ್ರೆ ಕುಂಕುಮವನ್ನು ಮನೆಯಲ್ಲಿ ಹೇಗೆ ತಯಾರಿಸಬಹುದು? ಇಲ್ಲಿದೆ ನೋಡಿ ಡೀಟೇಲ್ಸ್.
ಕುಂಕುಮ ಮಾಡಲು ಬೇಕಾದ ವಸ್ತುಗಳು :
ಅರಶಿಣ ಕೊಂಬು
ನಿಂಬೆ ಕಾಯಿ ಅಥವಾ ಹುಳಿ
ಬಿಳಿಗಾರ
ಸ್ಪಟಿಕ
(ಬಿಳಿಗಾರ ಎಂದರೆ ಒಂದು ರೀತಿ ಕಲ್ಲಿನ ಪುಡಿಯಾಗಿದೆ. ಅಂಗಡಿಗಳಲ್ಲಿ ಸಿಗುತ್ತದೆ. ಹಾಗೆ ರಂಗೋಲಿ ಹಾಕಲು ಈ ಕಲ್ಲಿನ ಪುಡಿ ಬಹಳ ಶ್ರೇಷ್ಠ ಎಂದು ಕೂಡ ಹೇಳಲಾಗುತ್ತದೆ)
ಕುಂಕುಮ ಮಾಡುವುದು ಹೇಗೆ?
ಮೊದಲು ಅರಶಿಣವನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಈಗ ದೊಡ್ಡ ಬೌಲ್‌ಗೆ ನಿಂಬೆ ರಸ ಹಾಕಿಕೊಂಡು ಅದಕ್ಕೆ ಬಿಳಿಗಾರದ ಪುಡಿ, ಸ್ಪಟಿಕದ ಪುಡಿಯನ್ನು ಸಮ ಪ್ರಮಾಣದಲ್ಲಿ ಹಾಕಿಕೊಂಡು ಕಲಸಿಕೊಳ್ಳಿ. ಇದು ನಿಂಬೆ ರಸದಲ್ಲಿ ಚೆನ್ನಾಗಿ ಬೆರೆಯಬೇಕು. ನಿಂಬೆ ರಸ ಮಾತ್ರ ಉಳಿದು ಬೇರೆಲ್ಲಾ ವಸ್ತು ಕರಗಿಬಿಡುತ್ತದೆ. ನಂತರ ಈ ಮಿಶ್ರಣಕ್ಕೆ ಅರಶಿಣ ಕೊಂಬನ್ನು ಹಾಕಿಕೊಳ್ಳಬೇಕು. ಹಾಗೆ ಅರಶಿಣ ಈ ಮಿಶ್ರಣದಲ್ಲಿ ಮುಳುಗಬೇಕು. ಹೀಗೆ ಅರಶಿಣವನ್ನು ಕನಿಷ್ಟ ಎರಡು ದಿನ ನೆನೆಸಿ ಬಳಿಕ ಅರಶಿಣ ತೆಗೆದು ನೆರಳಿನಲ್ಲಿ ಒಣಗಿಸಬೇಕು. ಈ ಅರಶಿಣ ಈಗಾಗಲೇ ಕೆಂಪು ಬಣ್ಣಕ್ಕೆ ತಿರುಗಿರುತ್ತದೆ. ಮನೆಯ ನೆರಳಿನಲ್ಲಿ ಸುಮಾರು 1 ವಾರ ಒಣಗಿಸಬೇಕು. ಪುಡಿಯಾಗುವಷ್ಟು ಒಣಗಬೇಕು. ವಾರದ ಬಳಿಕ ಈ ಅರಶಿಣ ಮುರಿದರೆ ತುಂಡಾಗುವಂತೆ ಇರಬೇಕು.
ಆದ್ರೆ ಇದನ್ನು ಹುಡಿ ಮಾಡುವುದು ಬಹಳ ಕಷ್ಟ. ಮಿಕ್ಸಿಯಲ್ಲಿ ಪುಡಿಯಾಗುವುದಿಲ್ಲ, ಹೀಗಾಗಿ ಒಂದು ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಳ್ಳಿ. ಅರಶಿಣ ಕಪ್ಪಾಗದಂತೆ ಬಿಸಿ ಮಾಡಿದರೆ ಸಾಕು. ನಂತರ ಮಿಕ್ಸಿಗೆ ಹಾಕಿ ಪುಡಿ ಮಾಡಬಹುದು. ಇಲ್ಲವೆ ಕಲ್ಲಿನಲ್ಲಿ ಕುಟ್ಟಿಕೊಂಡು ಸಣ್ಣ ಸಣ್ಣ ಪುಡಿಯಾದ ಬಳಿಕ ಪುನಃ ಮಿಕ್ಸಿ ಜಾರ್‌ಗೆ ಹಾಕಿಕೊಂಡು ಪುಡಿ ಮಾಡಿಕೊಳ್ಳಬಹುದು. ನಂತರ ಜರಡಿ ಹಿಡಿದು ನುಣ್ಣನೆಯ ಪುಡಿ ತೆಗೆದುಕೊಳ್ಳಿ. ಇದಕ್ಕೆ 50 ಗ್ರಾಂ ನಷ್ಟು ದೇಸಿ ತುಪ್ಪವನ್ನು ಬೆರೆಸಿ ಮತ್ತೆ ಮಿಕ್ಸ್ ಮಾಡಿ. ಈಗ ಶುದ್ಧ ಕುಂಕುಮ ಸಿದ್ಧವಾಗಿದೆ ಇದನ್ನ ನೀವು ಗಾಜಿನ ಪಾತ್ರೆ ಅಥವಾ ಹಿತ್ತಾಳೆ ಪಾತ್ರೆಯಲ್ಲಿ ಸಂಗ್ರಹಿಸಿ ಇಡಬಹುದು ಜೊತೆಗೆ ಯಾವುದೇ ರಾಸಾಯನಿಕ ಬಳಸದೆ ಇರುವುದರಿಂದ ಜೊತೆಗೆ ಇದರ ಪರಿಮಳವೂ ಕೂಡ ಅದ್ಭುತವಾಗಿರುತ್ತದೆ.