Tank Clean: ಸಿಂಟೆಕ್ಸ್, ಟ್ಯಾಂಕ್ ಒಳಗೆ ಇಳಿಯುವುದೇ ಬೇಡ – ಈ ಟ್ರಿಕ್ಸ್ ಫಾಲೋ ಮಾಡಿ, ಮೇಲಿದ್ದುಕೊಂಡೆ ಸುಲಭವಾಗಿ ಸ್ವಚ್ಛಗೊಳಿಸಿ !!
Tank Clean: ಇಂದು ನಗರ ಬಿಡಿ ಹಳ್ಳಿಗಳಲ್ಲಿ ಕೂಡ ಪ್ರತಿ ಮನೆಯ ಮೇಲೆ ಸಿಂಟೆಕ್ಸ್ ಅಥವಾ ನೀರಿನ ಟ್ಯಾಂಕ್ ಇದ್ದೇ ಇರುತ್ತದೆ. ಬಾವಿ ಬೋರ್ವೆಲ್ಗಳಿದ್ದರೂ ಕೂಡ ಈ ಟ್ಯಾಂಕ್ಗಳಿಗೆ ನೀರನ್ನು ತುಂಬಿಸಿ ಮನೆಯವರು ಉಪಯೋಗಿಸುತ್ತಾರೆ. ಇದು ಇಂದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಈ ಸಿಂಟೆಕ್ಸ್ ಅಥವಾ ಟ್ಯಾಂಕ್ಗಳನ್ನು ಕ್ಲೀನ್(Tank Clean) ಮಾಡುವುದೇ ಎಲ್ಲರಿಗೂ ಹರಸಾಹಸವಾಗಿದೆ. ಹಾಗಿದ್ರೆ ನಾವು ನಿಮಗೆ ಇದನ್ನು ಸುಲಭವಾಗಿ ಹೇಗೆ ಕ್ಲೀನ್ ಮಾಡಬಹುದು ಎಂಬ ಉಪಾಯವನ್ನು ಹೇಳಿಕೊಡುತ್ತೇವೆ.
ಹೌದು, ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವುದು ಸರಳವಾದ ಕೆಲಸವಲ್ಲ. ಇದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಆದ್ರೆ, ಇನ್ಮುಂದೆ ಒಳಗೆ ಹೋಗಿ ಸ್ವಚ್ಛಗೊಳಿಸುವುದು ಅಗತ್ಯವಿಲ್ಲ. ನೀರಿನ ಟ್ಯಾಂಕ್ ತುಂಬಾ ಸರಳವಾಗಿ ಮತ್ತು ಸುಲಭವಾಗಿ ಸ್ವಚ್ಛಗೊಳಿಸಬಹುದು.
ಆ ಪ್ಲಾನ್ ಏನೆಂದರೆ ಟ್ಯಾಂಕ್ ಖಾಲಿ ಮಾಡಿದ ನಂತರ ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಡಿಟರ್ಜೆಂಟ್ ಪೌಡರ್, ಡೆಟಾಲ್, ಅಡಿಗೆ ಸೋಡಾ ಸೇರಿಸಿ ಮಿಶ್ರಣ ಮಾಡಿ ಟ್ಯಾಂಕ್’ಗೆ ಹಾಕಿ. ನಂತ್ರ ಉದ್ದವಾದ ಮಾಪ್ ಸ್ಟಿಕ್ ಅಥವಾ ಸ್ಟಿಕ್ ಬ್ರೂಮ್ ಬಳಸಿ ಇಡೀ ಟ್ಯಾಂಕ್ ಚೆನ್ನಾಗಿ ಸ್ಕ್ರಬ್ ಮಾಡಿ. ಈಗ ಕೊಳೆ ಬೇಗ ಹೋಗುತ್ತದೆ. ನಾವು ಬಿಸಿ ನೀರನ್ನ ಸುರಿಯುವುದರಿಂದ ಕೊಳಕು ಬೇಗನೆ ಬರುತ್ತದೆ. ಅದರ ನಂತರ ಇಡೀ ಟ್ಯಾಂಕ್ ಸ್ಕ್ರಬ್ಬಿಂಗ್ ಮಾಡಿ ಸ್ವಚ್ಛಗೊಳಿಸಬಹುದು. ಹೀಗಾಗಿಯೇ ನಾವು ಹೆಚ್ಚು ಶ್ರಮವಿಲ್ಲದೆ ನೀರಿನ ಟ್ಯಾಂಕ್ ಸುಲಭವಾಗಿ ಸ್ವಚ್ಛಗೊಳಿಸಬಹುದು.