Love Jihad: ಭಾರತದ ಮೊದಲ ಲವ್ ಜಿಹಾದ್ ಪ್ರಕರಣ ಯಾವುದು ಗೊತ್ತಾ? ಎಲ್ಲಿ ನಡೆದಿತ್ತು? ಅಂದು ಏನೆಲ್ಲಾ ಆಗಿತ್ತು?
Love Jihad: ಲವ್ ಜಿಹಾದ್ ಪ್ರಕರಣ ಭಾರತದಲ್ಲಿ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಇದರ ನಿವಾರಣೆಗಾಗಿ ಸರ್ಕಾರ ಕೆಲವು ಕಾನೂನುಗಳನ್ನು ತಂದರೂ ಕೂಡ ಅದನ್ನು ತೊಲಗಿಸಲಗಲಿಲ್ಲ. ಇದನ್ನು ನಾನಾರೀತಿಯಲ್ಲಿ ವಿಶ್ಲೇಷಣೆ ಮಾಡುವುದಿದೆ. ಮುಖ್ಯ್ಯವಾಗಿ ಮುಸ್ಲಿಂ ಯುವಕರು ಹಿಂದೂ ಅಥವಾ ಅನ್ಯಧರ್ಮೀಯ ಯುವತಿಯರನ್ನು ಪ್ರೀತಿ ಪ್ರೇಮದ ಹೆಸರಲ್ಲಿ ನಂಬಿಸಿ, ಬಳಿಕ ಆಕೆಯನ್ನು ಮತಾಂತರ ಮಾಡುವುದನ್ನು ಲವ್ ಜಿಹಾದ್ ಅಂತ ಕೆಲ ಬಲಪಂಥೀಯ ಸಂಘಟನೆಗಳು ವ್ಯಾಖ್ಯಾನಿಸಿವೆ.
‘ಲವ್ ಜಿಹಾದ್”(Love Jihad)ಎಂಬುದು ಪ್ರಾಥಮಿಕವಾಗಿ ಭಾರತದಲ್ಲಿ ಕೆಲವು ರಾಜಕೀಯ ಮತ್ತು ಸಾಮಾಜಿಕ ಸಂದರ್ಭಗಳಲ್ಲಿ ಬಳಸಲಾಗುವ ಪದವಾಗಿದೆ. ಕೇರಳ ಹಾಗೂ ಕರ್ನಾಟಕದಲ್ಲಿ ಲವ್ ಜಿಹಾದ್ ಬಗ್ಗೆ ಮೊದಲು ವ್ಯಾಪಕವಾಗಿ ಚರ್ಚೆಗಳು ನಡೆದಿದ್ದಾವೆ. ಹಾಗಿದ್ರೆ ಭಾರತದ ಮೊದಲ ಲವ್ ಜಿಹಾದ್ ಪ್ರಕರಣ ನಡೆದಿದ್ದು ಎಲ್ಲಿ? ಯಾವಾಗ? ಆ ಪ್ರಕರಣ ಏನಾಯ್ತು ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.
ಭಾರತದ ಮೊದಲ ಲವ್ ಜಿಹಾದ್ ಪ್ರಕರಣ ಯಾವುದು?
ಲವ್ ಜಿಹಾದ್ ಮೊದಲ ಘಟನೆ 2009 ರಲ್ಲಿ ಕೇರಳದಲ್ಲಿ ನಡೆದಿತ್ತು. ಪತ್ತನಂತಿಟ್ಟ ಜಿಲ್ಲೆಯ ಕಾಲೇಜೊಂದರಲ್ಲಿ ಎಂಬಿಎ ಓದುತ್ತಿದ್ದ ಇಬ್ಬರು ಹಿಂದೂ ಹುಡುಗಿಯರು ತಮ್ಮ ಮುಸ್ಲಿಂ ಗೆಳೆಯರೊಂದಿಗೆ ಓಡಿಹೋದರು. ಬಳಿಕ ನ್ಯಾಯಾಲಯದಲ್ಲಿ ನಾವು ಸ್ವ ಇಚ್ಛೆಯಿಂದ ಹೋಗಿದ್ದಾಗಿ ತಿಳಿಸಿದರು. ನ್ಯಾಯಾಲಯವು ಅವರನ್ನು ಅವರ ಪೋಷಕರೊಂದಿಗೆ ಮನೆಗೆ ಕಳುಹಿಸಿತು. ಮುಂದಿನ ಬಾರಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಹುಡುಗಿಯರು ಉಲ್ಟಾ ಹೊಡೆದರು. ನಾವು ಪೋಷಕರೊಂದಿಗೆ ಹೋಗುತ್ತೇವೆ, ಆ ಹುಡುಗರ ಜೊತೆ ಹೋಗಲ್ಲ ಅಂತ ಹೇಳಿದ್ರು.
ಇದಾದ ಬಳಿಕ ಇಬ್ಬರು ಮುಸ್ಲಿಂ ಪುರುಷರು ಸಲ್ಲಿಸಿದ ಜಾಮೀನು ಅರ್ಜಿಯಲ್ಲಿ ಆದೇಶವನ್ನು ಉಚ್ಚರಿಸುವಾಗ, ಕೇರಳದ ಹೈಕೋರ್ಟ್ ಮುಸ್ಲಿಮೇತರ ಹುಡುಗಿಯರನ್ನು ಗುರಿಯಾಗಿಸುವ ‘ರೋಮಿಯೋ ಜಿಹಾದ್/ಲವ್ ಜಿಹಾದ್ ಆಂದೋಲನ’ದ ತನಿಖೆಗೆ ಆದೇಶಿಸಿತ್ತು. ಅಂದಿನ ಪೊಲೀಸ್ ಮಹಾನಿರ್ದೇಶಕರು ವಿಸ್ತೃತ ವಿಚಾರಣೆ ನಡೆಸಿ ಲವ್ ಜಿಹಾದ್ ಅಸ್ತಿತ್ವದಲ್ಲಿಲ್ಲ ಎಂದು ವರದಿ ಸಲ್ಲಿಸಿದ್ದು, ಇದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದರು.