Kadaba: ದಂಪತಿಗಳ ಕಾರು ಅಡ್ಡಗಟ್ಟಿ ಸ್ಕ್ರೂಡ್ರೈವರ್‌ನಿಂದ ಹಲ್ಲೆಗೆ ಯತ್ನ; ಪ್ರಕರಣ ದಾಖಲು

Kadaba: ಇಲ್ಲಿನ ಕೌಕ್ರಡಿ ಗ್ರಾಮದ ಆಲಂಪಾಡಿ ಎಂಬಲ್ಲಿ ಕಾರನ್ನು ಅಡ್ಡಗಟ್ಟಿ ದಂಪತಿಗಳನ್ನು ನಿಂದನೆ ಮಾಡಿ, ಸ್ಕ್ರೂಡ್ರೈವರ್‌ನಿಂದ ಹಲ್ಲೆ ಮಾಡಲು ಯತ್ನಿಸಿರುವ ಘಟನೆಯೊಂದು ನಡೆದಿದೆ.

 

ಈ ಘಟನೆ ನಡೆದಿರುವುದು ಜುಲೈ 29 ರಂದು. ಮಧ್ಯಾಹ್ನ ಮಹಿಳೆಯೊಬ್ಬರು ತನ್ನ ಗಂಡನ ಜೊತೆ ನೆಲ್ಯಾಡಿಯಿಂದ ಮನೆ ಕಡೆಗೆ ಹೋಗುತ್ತಿರುವ ಸಂದರ್ಭದಲ್ಲಿ ಆಲಂಪಾಡಿ ಎಂಬಲ್ಲಿಗೆ ತಲುಪಿದಾಗ, ಆರೋಪಿ ಅಬ್ದುಲ್‌ ನಾಸೀರ್‌ ಎಂಬಾತ ಏಕಾಏಕಿ ಅವರು ಕಾರನ್ನು ಅಡ್ಡಗಟ್ಟಿದ್ದು ಅವಾಚ್ಯ ಶಬ್ದಗಳ ನಿಂದನೆ ಮಾಡಿ ಅವರು ಹೋಗುತ್ತಿದ್ದ ಕಾರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ.

ಕಾರಿನ ಡೋರ್‌ನ ಬಳಿ ಬಂದು ಅನುಚಿತ ವರ್ತನೆ ಮಾಡಿ, ಸ್ಕ್ರೂಡ್ರೈವರ್‌ನಿಂದ ಹಲ್ಲೆ ನಡೆಸಲು ಪ್ರಯತ್ನ ಮಾಡಿದ್ದು, ಮಹಿಳೆಯ ಗಂಡ ಕಾರಿನಿಂದ ಇಳಿಯಲು ಯತ್ನ ಮಾಡಿದಾಗ ಅವರನ್ನು ದೂಡಿ, ಸ್ಕ್ರೂಡ್ರೈವರ್‌ನಿಂದ ಹಲ್ಲೆ ನಡೆಸಲು ಮುಂದಾಗಿದ್ದಾನೆ ಎಂಬುವುದಾಗಿ ಮಹಿಳೆ ದೂರು ನೀಡಿದ್ದಾರೆ.

ಈ ಕುರಿತು ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Wayanad Landslide: ವಯನಾಡು ದುರಂತ : ಮಣ್ಣಿನ ರಾಶಿಯಲ್ಲಿ ಸಿಲುಕಿದ ವ್ಯಕ್ತಿಯಿಂದ ಕಾಪಾಡಿ ಎಂಬ ಆರ್ಥನಾದ : ಮನಕಲಕುವ ವಿಡಿಯೋ ವೈರಲ್

Leave A Reply

Your email address will not be published.