Viral Video: ಉಡುಪಿ: ಇವನೆಂಥಾ ಕ್ರೂರಿ! ನಾಯಿಯನ್ನು ಸ್ಕೂಟರ್‌ಗೆ ಕಟ್ಟಿ ಎಳೆದೊಯ್ದ ಪಾಪಿ

Share the Article

Viral Video: ದೇಶದ ನಾನಾ ಕಡೆಗಳಲ್ಲಿ ಮೂಕ ಪ್ರಾಣಿಗಳ ವಿರುದ್ಧ ಕ್ರೌರ್ಯ ನಡೆಯುತ್ತಿರುವ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿರುವ ಕುರಿತು ವರದಿಯಾಗುತ್ತಲೇ ಇರುತ್ತದೆ. ಅದರಲ್ಲೂ ಬೀದಿ ನಾಯಿಗಳ ಮೇಲೆ ಅಮಾನುಷ ಕೃತ್ಯ ನಡೆಯುತ್ತಲೇ ಇದೆ. ಇದೀಗ ಅಂತಹುದೇ ಒಂದು ಘಟನೆ ಶಿರ್ವ ಮಂಚಕಲ್ಲಿನಲ್ಲಿ ಕೂಡಾ ನಡೆದಿದೆ.

Hamsalekha: ನನ್ನ ಪಂಪನಾಣೆ, ನನ್ನ ಪದ ಬಳಕೆ ಉದ್ದೇಶ ಪೂರಿತವಲ್ಲ- ಹಂಸಲೇಖ ಕ್ಷಮೆಯಾಚನೆ

ಪಾಪಿಯೋರ್ವ ನಾಯಿಯೊಂದನ್ನು ತನ್ನ ಸ್ಕೂಟರ್‌ ಗೆ ಕಟ್ಟಿ ಇಡೀ ಮಂಚಕಲ್ಲಿನ ಪೇಟೆಯಲ್ಲಿ ಎಳೆದುಕೊಂಡು ಹೋಗಿರುವ ದೃಶ್ಯವೊಂದು ವೈರಲ್‌ ಆಗಿದೆ. ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಂದ ಹಾಗೆ ಈತ ಯಾಕಾಗಿ ಈ ಮೂಕ ಪ್ರಾಣಿಯ ಜೊತೆ ಈ ರೀತಿ ನಡೆದುಕೊಂಡ ಎಂಬುವುದರ ಕುರಿತು ಮಾಹಿತಿ ದೊರಕಿಲ್ಲ.

ಈ ವೈರಲ್‌ ವೀಡಿಯೋಗೆ ಅನೇಕರು ಖಂಡನೆ ವ್ಯಕ್ತಪಡಿಸಿದ್ದು, ಪ್ರಾಣಿಗಳ ವಿರುದ್ಧ ಕರುಣೆ ಇಲ್ಲದೆ ಕ್ರೌರ್ಯ ಮೆರೆಯುವ ಕ್ರೂರಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಜರುಗಿಸಲು ಆಗ್ರಹಿಸಿದ್ದಾರೆ.

Leave A Reply

Your email address will not be published.