Mangaluru: ವಿದ್ಯುತ್‌ ಸ್ಪರ್ಶಿಸಿ ಒದ್ದಾಡುತ್ತಿದ್ದ ನಾಯಿಯನ್ನು ರಕ್ಷಿಸಲು ಹೋದ ಸಿಎ ವಿದ್ಯಾರ್ಥಿನಿ ಸಾವು

Share the Article

Mangaluru: ಕಡಿದು ಬಿದ್ದಿರುವ ವಿದ್ಯುತ್‌ ತಂತಿ ತಗುಲಿ ಯುವತಿಯೊಬ್ಬಳು ಸಾವಿಗೀಡಾದ ಘಟನೆಯೊಂದು ಮಂಗಳೂರಿನ ಬಜ್ಪೆ ಸಮೀಪದ ಗುರುಪುರದಲ್ಲಿ ಇಂದು ಶುಕ್ರವಾರ ಬೆಳಗ್ಗೆ ನಡೆದಿದೆ. ಕಲ್ಲಕಲಂಬಿ ನಿವಾಸಿ ಹರೀಶ್‌ ಶೆಟ್ಟಿ ಅವರ ಪುತ್ರಿ ಅಶ್ವಿನಿ ಶೆಟ್ಟಿ (21) ಎಂಬಾಕೆಯೇ ಮೃತ ಯುವತಿ. ಈಕೆ ಮಂಗಳೂರಿನ ಕಾಲೇಜಿನಲ್ಲಿ ಸಿಎ ಕಲಿಯುತ್ತಿದ್ದಳು.

ಹರೀಶ್‌ ಶೆಟ್ಟಿ ಅವರು ತಮ್ಮ ಮನೆಯ ದನಗಳನ್ನು ಗದ್ದೆಯಲ್ಲಿ ಮೇಯಲು ಕಟ್ಟಲೆಂದು ಹೋಗಿದ್ದ ಸಂದರ್ಭದಲ್ಲಿ ಅವರ ಹಿಂದೆ ಮನೆಯ ಎರಡು ನಾಯಿಗಳು ಕೂಡಾ ಹೋಗಿದ್ದವು. ಮನೆಯ ನಾಯಿಗಳನ್ನು ತರಲೆಂದು ಅಶ್ವಿನಿ ಹೋದ ಸಂದರ್ಭದಲ್ಲಿ ವಿದ್ಯುತ್‌ ತಂತಿ ಸ್ಪರ್ಶಗೊಂಡು ಅಸ್ವಸ್ಥರಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತ ಹೊಂದಿದ್ದಾರೆ.

ಮೊದಲಿಗೆ ಮನೆಯ ನಾಯಿಗೆ ವಿದ್ಯುತ್‌ ಶಾಕ್‌ ಹೊಡೆದಿದ್ದು, ಶಾಕ್‌ ಹೊಡೆದಿದ್ದರಿಂದ ನಾಯಿ ಗದ್ದೆಯಲ್ಲಿ ಬಿದ್ದು ಹೊರಳಾಡುತ್ತಿದ್ದುದನ್ನು ಕಂಡು ನಾಯಿಯ ರಕ್ಷಣೆಗೆಂದು ಹೋದಾಗ, ತುಂಡಾಗಿ ಬಿದ್ದಿದ್ದ ತಂತಿ ತುಳಿದು ಅಶ್ವಿನ್‌ ವಿದ್ಯುತ್‌ ಶಾಕ್‌ಗೆ ಒಳಗಾಗಿದ್ದಾಳೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ದಿನಗಳಿಂದ ಎಡೆಬಿಡದೆ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ವಿದ್ಯುತ್‌ ಅವಘಡಗಳು ಸಂಭವಿಸುತ್ತಲೇ ಇದೆ. ಇದೀಗ ಮತ್ತೊಂದು ಘಟನೆ ನಡೆದಿದೆ.

Divorce: ಹಾರ್ದಿಕ್​-ನತಾಶಾ ಡಿವೋರ್ಸ್ ಬಳಿಕ, ಈ ಸ್ಟಾರ್ ಜೋಡಿ ಡಿವೋರ್ಸ್?

Leave A Reply