Course Fee Hike : ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟ ಸರ್ಕಾರ – ಇಂಜನಿಯರಿಂಗ್ ಶುಲ್ಕ ಶೇ 10ರಷ್ಟು ಹೆಚ್ಚಳ !!

Course Fee Hike: ವೃತ್ತಿಪರ ಕೋರ್ಸ್‌ ವ್ಯಾಸಾಂಗ ಮಾಡ ಬಯಸುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದ್ದು, ತಾಂತ್ರಿಕ ಶಿಕ್ಷಣ ಕೋರ್ಸ್‌ಗಳ ಪ್ರವೇಶ ಶುಲ್ಕ ಶೇ.10ರಷ್ಟು(Course Fee Hike) ಹೆಚ್ಚಳ ಮಾಡಲು ನಿರ್ಧರಿಸಿದೆ.

Renukaswamy Case: ದರ್ಶನ್ ಮತ್ತು ಗ್ಯಾಂಗ್ ಶೇಕ್ ಶೇಕ್ – ರೇಣುಕಾಸ್ವಾಮಿ ಕೇಸಿನ ವಾದಕ್ಕೆ ಸರ್ಕಾರ ಕಳಿಸಿದ ವಕೀಲರ ಹಿನ್ನೆಲೆ ಕೇಳಿದ್ರೇ ನೀವೂ ಶಾಕ್ !!

ಹೌದು, ಪ್ರವೇಶ ಶುಲ್ಕದ ಬಗ್ಗೆ ಉನ್ನತ ಶಿಕ್ಷಣ ಇಲಾಖೆ(Higher Education Department) ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಖಾಸಗಿ ಅನುದಾನರಹಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ 2024-25ನೇ ಸಾಲಿನ ಎಂಜಿನಿಯರಿಂಗ್‌(Engineering), ಆರ್ಕಿಟೆಕ್ಚರ್(Architect) ಕಾಲೇಜುಗಳಲ್ಲಿ ವೃತ್ತಿಪರ ಕೋರ್ಸುಗಳ ಶುಲ್ಕವನ್ನು ಶೇ.10 ರಷ್ಟು ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದೆ. ಹೀಗಾಗಿ ಅನುದಾನ ರಹಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ 2024-25ನೇ ಸಾಲಿನ ಎಂಜಿನಿಯರಿಂಗ್‌, ಆರ್ಕಿಟೆಕ್ಚರ್‌ ಕೋರ್ಸ್‌ಗಳ ಶುಲ್ಕ ಶೇ.10ರಷ್ಟು ಹೆಚ್ಚಳವಾಗಲಿದೆ.

ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ.ಶರಣಪ್ರಕಾಶ್​ ಪಾಟೀಲ್‌(Dr Sharanaprakash Patil) ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್‌(Dr Sudhakar) ನೇತೃತ್ವದಲ್ಲಿ ಖಾಸಗಿ ಅನುದಾನಿತ, ಅನುದಾನರಹಿತ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಇಂದು ನಡೆದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

ಕಳೆದು ವರ್ಷ ಸರ್ಕಾರಿ ಕೋಟಾದ ಇಂಜಿನಿಯರಿಂಗ್ ಪ್ರವೇಶದ ಶುಲ್ಕ ಹೆಚ್ಚಳವಾಗಿತ್ತು. ಈ ಸಲ 15% ಶುಲ್ಕ ಹೆಚ್ಚಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಒತ್ತಾಯಿಸಿತ್ತು. ಆದರೆ ಸರ್ಕಾರ ಹಾವು ಸಾಯಬಾರದು, ಕೋಲೂ ಮುರಿಯಬಾರದೆಂದು 10% ಹೆಚ್ಚಿಸಿದೆ.

ಗಾಯದ ಮೇಲೆ ಬರೆ ಎಳೆದ ಸರ್ಕಾರ!!
ಈಗಾಗಲೇ ಸಿಇಟಿ ಫಲಿತಾಂಶ ಬಿಟ್ಟರೂ ಕಟ್ ಆಫ್ ಮಾರ್ಕ್ ಬಿಟ್ಟಿಲ್ಲ. ಇಂಜಿನಿಯರಿಂಗ್ ಸೀಟ್ ಸಿಗಲಿಲ್ಲವೆಂದರೆ ಪದವಿ ಶಿಕ್ಷಣ ಆದರೂ ಪಡೆಯೋಣ ಎಂದು ಕೆಲವರು ಯೋಚಿಸಿದರೆ ಈಗಾಗಲೇ ಕೆಲವೆಡೆ ಪದವಿ ಕಾಲೇಜಿನಲ್ಲಿ ಪ್ರವೇಶಾತಿ ಮುಗಿದು ತರಗತಿಗಳು ಪ್ರಾಯಂಭವಾಗುತ್ತಿವೆ. ಹೀಗಾಗಿ ಸಮಯ ಮೀರುತ್ತಿದೆ ಎಂದು ಆಂತಕಗೊಂಡಿರುವ ವಿದ್ಯಾರ್ಥಿಗಳಿಗೆ ಶುಲ್ಕ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ.

ಗಂಡನ ಮನೆಯಲ್ಲಿ ತಾಳಿ ಬಿಚ್ಚಿಟ್ಟು ಮಹಿಳೆ ನಾಪತ್ತೆ! ಪುತ್ತೂರು ಪೊಲೀಸ್ ಠಾಣೆಗೆ ದೂರು ದಾಖಲು!

Leave A Reply

Your email address will not be published.