CET ಯಲ್ಲಿ 2 ಪ್ರಥಮ, ಒಟ್ಟು 7 ರಾಂಕ್: ಬೆಳ್ತಂಗಡಿಯ ನಿಹಾರ್ ಎಸ್.ಆರ್.ಗೆ ಸುವರ್ಣ ಟಿವಿ ಮತ್ತು ವೈದ್ಯ ಶಿಕ್ಷಣ ಸಚಿವರಿಂದ ಸನ್ಮಾನ
CET: ಕಳೆದ ಶನಿವಾರ ಭಾನುವಾರ ಬೆಂಗಳೂರಿನಲ್ಲಿ ಕನ್ನಡಪ್ರಭ ಮತ್ತು ಸುವರ್ಣ ವಾಹಿನಿಗಳ ನೇತೃತ್ವದಲ್ಲಿ ಮೆಗಾ ಎಜುಕೇಶನ್ ಫೆಸ್ಟ್ ನಡೆದಿತ್ತು. ಈ ಸಮಾರಂಭಕ್ಕೆ ಸಿಇಟಿಯಲ್ಲಿ 2 ಪ್ರಥಮ ರಾಂಕ್ ಸಹಿತ ಒಟ್ಟು 7 ರಾಂಕುಗಳನ್ನು ಗಳಿಸಿದ ಮಂಗಳೂರಿನ ಎಕ್ಸ್ ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿ ನಿಹಾರ್ ಎಸ್.ಆರ್ ರನ್ನು ಅತಿಥಿಯನ್ನಾಗಿ ಕರೆಯಲಾಗಿತ್ತು. ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ನಿಹಾರ್ ಎಸ್ ಆರ್ ನನ್ನು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಸಮ್ಮುಖದಲ್ಲಿ ಗೌರವಿಸಲಾಯಿತು. ನಿಹಾರ್ ಎಸ್ ಆರ್ ಬೆಳಾಲು ಗ್ರಾಮದ ಸುದರ್ಶನ್ ಬಿ ಪ್ರವೀಣ್ ಮತ್ತು ರೂಪಾ ಕೆಎಸ್ ದಂಪತಿಗಳ ಪುತ್ರ.
2 ಪ್ರಥಮ 2 ತೃತೀಯ ಒಟ್ಟು 7 ರ್ಯಾಂಕ್, ನೀಟ್ ಜಿ ಎಲ್ಲೂ ಕೂಡ ಸಾಧನೆ
ಅವರು 2023-24ನೇ ವರ್ಷದ ಸಿಇಟಿಯಲ್ಲಿ ರಾಜ್ಯದಲ್ಲೇ 2 ಪ್ರಥಮ ರಾಂಕ್ ಪಡೆದಿದ್ದಾರೆ. ಸಿಇಟಿಯಲ್ಲಿ ಒಟ್ಟು 7 ರಾಂಕ್ ಗಳನ್ನು ಇವರು ಪಡೆದುಕೊಂಡಿದ್ದಾರೆ. ಬಿ ಎನ್ ವೈ ಎಸ್ ಮತ್ತು ಬಿಎಸ್ಸಿ ಅಗ್ರಿಕಲ್ಚರ್‌ನಲ್ಲಿ ತಲಾ 1st ರ‍್ಯಾಂಕ್, ವೆಟರಿನರಿ ಮತ್ತು ಬಿ ಎಸ್ಸಿ ನರ್ಸಿಂಗ್ ನಲ್ಲಿ 3ನೇ ರ‍್ಯಾಂಕ್, ಬಿ. ಫಾರ್ಮ್ ಹಾಗೂ ಡಿ. ಫಾರ್ಮ್ 5ನೇ ರ‍್ಯಾಂಕ್, ಇಂಜಿನಿಯರಿoಗ್ ನಲ್ಲಿ 12ನೇ ರ‍್ಯಾಂಕ್ ಪಡೆದಿದ್ದಾರೆ. ಅಲ್ಲದೇ ನೀಟ್ ನಲ್ಲಿ 720 ರಲ್ಲಿ 690 ಅಂಕ ಪಡೆದು ಇಂಡಿಯಾದಲ್ಲಿ 5096 ರ‍್ಯಾಂಕ್ ಹಾಗೂ ಕೆಟಗರಿಯಲ್ಲಿ 2475 ರ‍್ಯಾಂಕ್ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಿಹಾರ್, ತಾವು ರಾಂಕ್ ಬರಲು ಕಾರಣವಾದ ಅಂಶಗಳ ಬಗ್ಗೆ ಮಾತನಾಡಿದರು. ನಿರಂತರ ಓದು, ಅಧ್ಯಯನ ಮತ್ತು ಸ್ಪರ್ಧಾತ್ಮಕ ಮನೋಭಾವ ರ್ಯಾಂಕ್ ಗಳಿಸಲು ಸಹಾಯವಾಯಿತು ಎoದಿದ್ದಾರೆ. ಯಾವುದೇ ಕಾರಣಕ್ಕೂ ಕಾನ್ಸೆಪ್ಟ್ ಅರ್ಥ ಆಗದೆ ನಾನು ಮುಂದಕ್ಕೆ ಓದುತ್ತಿರಲಿಲ್ಲ. ಈ ರೀತಿಯ ಎಕ್ಸ್ಪೋಗಳು ವಿದ್ಯಾರ್ಥಿಗಳಿಗೆ ಒಂದೇ ಕಡೆ ಹಲವು ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ತೆರೆದಿಡುತ್ತವೆ ಎಂದಿದ್ದಾರೆ ನಿಹಾರ್.
ಸಮಾರಂಭದಲ್ಲಿ ವೈದ್ಯ ಶಿಕ್ಷಣ ಸಚಿವ ಡಾಕ್ಟರ್ ಶರಣ ಪಾಟೀಲ್, ಸುವರ್ಣ ವಾಹಿನಿ ಮುಖ್ಯಸ್ಥ ಅಜಿತ್ ಹನುಮಕ್ಕನವರ್, ಡಾಕ್ಟರ್ ರಾಜಕುಮಾರ್ ಮೊಮ್ಮಗ, ಚಿತ್ರನಟ ಯುವರಾಜ್ ಕುಮಾರ್, ಮಾಜಿ ಡಿಸಿಎಂ ಡಾ. ಅಶ್ವತ್ ನಾರಾಯಣ ಗೌಡ ಉಪಸ್ಥಿತರಿದ್ದರು.
ಜೊತೆಗೆ ತಾವು ಕಲಿತ ವಿದ್ಯಾಸಂಸ್ಥೆ ಎಕ್ಸ್ ಪರ್ಟ್ ನ ಮತ್ತು ಶಿಕ್ಷಕರ ಮತ್ತು ಪೋಷಕರ ನಿರಂತರ ಬೆಂಬಲದಿಂದ ಈ ಸಾಧನೆ ಸಾಧ್ಯವಾಗಿದೆ ಎಂದಿದ್ದಾರೆ.