NEET Scam: ನೀಟ್ ಹೋರಾಟಕ್ಕೆ ರಾಹುಲ್ ಗಾಂಧಿ ಎಂಟ್ರಿ; ವಿದ್ಯಾರ್ಥಿಗಳಿಗೆ ಸಂಸತ್ ನಲ್ಲೇ ದನಿಯಾಗುವೆ ಎಂದ ನಾಯಕ !

NEET Scam: ‘ನರೇಂದ್ರ ಮೋದಿ ಅವರು ಮತ್ತೊಂದು ಅವಧಿಗೆ ಪ್ರಮಾಣ ವಚನ ಸ್ವೀಕರಿಸುವ ಸಮಯಕ್ಕೆ ಮುನ್ನವೇ, ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳು ದೇಶದ 24 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಮತ್ತು ಅವರ ಕುಟುಂಬಗಳನ್ನು ಧ್ವಂಸಗೊಳಿಸಿದೆ’ ಎಂದು ಕಾಂಗ್ರೆಸ್ ಅಧಿ ನಾಯಕ ರಾಹುಲ್ ಗಾಂಧಿ ಭಾನುವಾರ ವಾಗ್ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ‘ ನಮ್ಮ ದೇಶದ ವಿದ್ಯಾರ್ಥಿಗಳ ಧ್ವನಿಯಾಗಿ ಸಂಸತ್ತಿನಲ್ಲಿ ನಾನು ಕಾರ್ಯನಿರ್ವಹಿಸುತ್ತೇನೆ. ಅಲ್ಲದೆ ಅವರ ಭವಿಷ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಪ್ರಬಲವಾಗಿ ಮಾತನಾಡುತ್ತೇನೆ’ ಎಂದು ಅವರು ‘X’ ಖಾತೆಯಲ್ಲಿ ಭರವಸೆ ನೀಡಿದ್ದಾರೆ. ಆಯಾ ಮೂಲಕ ನೀಟ್ ಆಕಾಂಕ್ಷಿಗಳಿಗೆ ಬಹು ದೊಡ್ಡ ಆಶಾಕಿರಣವೊಂದು ಸಿಕ್ಕಿದೆ.

Rain: ಧಾರವಾಡದಲ್ಲಿ ಮಳೆ ಆರ್ಭಟ; ನಡುರಸ್ತೆಯಲ್ಲೇ ವೃದ್ಧನ ಭಯಂಕರ ತಪಸ್ಸು…!

ಈ ಸಲ ನೀಟ್ ಪರೀಕ್ಷೆಯಲ್ಲಿ ಅನೇಕರು ಗರಿಷ್ಠ ಅಂಕಗಳನ್ನು ಪಡೆದಿದ್ದಾರೆ. ತಾಂತ್ರಿಕವಾಗಿ ಇಷ್ಟು ಅಂಕಗಳನ್ನು ಹಲವರು ಗಳಿಸಲು ಸಾಧ್ಯವಿಲ್ಲ’ ಎಂದಿರುವ ಅವರು, ಪ್ರಶ್ನೆ ಪತ್ರಿಕೆ ಸೋರಿಕೆಯ ಸಾಧ್ಯತೆಯನ್ನು ಕೇಂದ್ರ ಸರ್ಕಾರವು ನಿರಂತರವಾಗಿ ನಿರಾಕರಿಸುತ್ತಿದೆ’ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

“ಶಿಕ್ಷಣದ ಮಾಫಿಯಾವು ಸರ್ಕಾರಿ ಯಂತ್ರದೊಂದಿಗೆ ಶಾಮೀಲಾಗಿ ‘ಪ್ರಶ್ನೆ ಪತ್ರಿಕೆ ಸೋರಿಕೆ ಉದ್ಯಮ’ವನ್ನು ನಡೆಸುತ್ತಿವೆ. ಇದನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ ಬಳಿ ದೃಢವಾದ ಯೋಜನೆಯಿದೆ ಎಂದು ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ತಿಳಿಸಿದ್ದಾರೆ. ನಾವು ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಗೆ ಮುಕ್ತಿ ನೀಡುವ ಉದ್ದೇಶದಿಂದ ಕಾನೂನು ರೂಪಿಸುವ ಕುರಿತು ವಾಗ್ದಾನ ಮಾಡಿದ್ದೆವು ಎಂದು ಅವರು ಈ ಸಂದರ್ಭದಲ್ಲಿ ನೆನಪಿಸಿದ್ದಾರೆ.


ಆದರೆ ಪರೀಕ್ಷಾ ಅಕ್ರಮಗಳ ಸಾಧ್ಯತೆಗಳನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ತಳ್ಳಿಹಾಕಿದೆ. ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿನ ಬದಲಾವಣೆ ಮತ್ತು ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಸಮಯ ನಷ್ಟವಾದ ಕಾರಣ ಕೆಲ ಅಭ್ಯರ್ಥಿಗಳಿಗೆ ಕೃಪಾಂಕ ದೊರೆತಿವೆ. ಇದರಿಂದಾಗಿ ಕೆಲವರ ಅಂಕಗಳಲ್ಲಿ ಏರಿಕೆಯಾಗಿದೆ ಎಂದು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ವಾದಿಸಿದೆ. ಅಲ್ಲದೆ, 1600ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೀಡಲಾದ ಕೃಪಾಂಕಗಳನ್ನು ಪರಿಶೀಲಿಸಲು ಶಿಕ್ಷಣ ಸಚಿವಾಲಯವು ಸಮಿತಿಯನ್ನು ನೇಮಕ ಮಾಡಿದೆ. ಏನೇ ಆದರೂ ಜನರು ನಂಬುತ್ತಿಲ್ಲ. ರಾಷ್ಟ್ರದಾದ್ಯಂತ ಒಂದು ದಿನಕ್ಕೆ ಮೊದಲೇ ಕ್ವೇಶ್ಚನ್ ಪೇಪರ್ನಿಂದ ಪ್ರಶ್ನೆಗಳು ಹಂಚಿಹೋಗಿರುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿ ಕಾಣುತ್ತಿವೆ.

Karnataka Rains: ರಾಜ್ಯದ ಹಲವೆಡೆ ರೆಡ್ ಅಲರ್ಟ್, ಉಡುಪಿ ಸೇರಿ ಹಲವೆಡೆ ಆರೆಂಜ್, ದಕ್ಷಿಣ ಕನ್ನಡ, ಕೆಲವೆಡೆ ಯಲ್ಲೋ !

Leave A Reply

Your email address will not be published.