Mangaluru: ಯಾರೋ ರಾಜೀನಾಮೆ ಕೇಳಿದ್ರು ಅಂತ ಕೊಡೋಕ್ಕಾಗಲ್ಲ- ಹರೀಶ್‌ ಕುಮಾರ್‌

Mangaluru: ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್‌ ಸೋಲು ಕಂಡಿದ್ದು, ಈ ಕಾರಣಕ್ಕಾಗಿ ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ವಿಧಾನಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಹೇಳಿದ್ದಾರೆ.

ಅತೀ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಇಲ್ಲಿದೆ! ಅಮೆಜಾನ್ ಇನ್ನಿತರ ಹಲವು ಅಪ್ಲಿಕೇಶನ್ ಫ್ರೀ ಫ್ರೀ ಫ್ರೀ!

ಮನೆಯಲ್ಲಿ ಕೂತವನನ್ನು ಜಿಲ್ಲಾಧ್ಯಕ್ಷ ಮಾಡಿಲ್ಲ, ಪಕ್ಷದ ಬಗ್ಗೆ ಜಿಲ್ಲೆಯಲ್ಲಿ ಹಲವಾರು ಜವಾಬ್ದಾರಿಗಳನ್ನು ನಾನು ಮಾಡಿದ್ದೇನೆ. ಹಾಗಾಗಿ ನನಗೆ ಜಿಲ್ಲಾಧ್ಯಕ್ಷ ಸ್ಥಾನವನ್ನು ನೀಡಿದ್ದಾರೆ. ಅಭ್ಯರ್ಥಿ ಗೆಲುವಿಗೆ ನಾನು ಕೆಲಸ ಮಾಡಿದ್ದೇನೆ. ಗೆದ್ದಿದ್ದರೆ ನನ್ನ ಗೆಲುವು ಎಂದು ಹೇಳುತ್ತಾರೆ. ಸೋತರೆ ಬೇರೆಯವರ ಮೇಲೆ ಬೆರಳು ತೋರಿಸುತ್ತಾರೆ, ಪಕ್ಷ ಹೇಳಿದರೆ ರಾಜೀನಾಮೆ ನೀಡಿ, ಪಕ್ಷ ಸದೃಢಗೊಳಿಸಲು ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಅವರು ಮಂಗಳೂರಿನ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಲೋಕಸಭಾ ಚುನಾವಣೆಯ ಸೋಲಿನ ಹೊಣೆಯನ್ನು ಪದ್ಮರಾಜ್‌ ಅವರು ಹೊರುತ್ತೇನೆ ಎಂದು ಹೇಳಿದ್ದಾರೆ. ಹಾಗಂತ ಸೋಲಿಗೆ ಅವರೊಬ್ಬರೇ ಕಾರಣರಲ್ಲ. ಎಲ್ಲರೂ ಒಟ್ಟಿಗೆ ಕೆಲಸ ಮಾಡಿದ್ದೆವು. ಕಳೆದ ಲೋಕಸಭಾ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿ ನಮ್ಮ ಅಭ್ಯರ್ಥಿಗೆ ಹೆಚ್ಚು ಮತ ದೊರಕಿದೆ. ಆದರೂ ಸೋಲು-ಸೋಲೇ. ನಮ್ಮ ಪಕ್ಷವನ್ನು ಸದೃಢಗೊಳಿಸುವಲ್ಲಿ ನಾವು ಇನ್ನೂ ಹೆಚ್ಚು ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.

Bank Job 2024: ಬ್ಯಾಂಕ್ ಉದ್ಯೋಗ ಪಡೆಯಲು ಸುವರ್ಣ ಅವಕಾಶ! 9,995 ಐಬಿಪಿಎಸ್‌ ಆರ್‌ಆರ್‌ಬಿ ಬ್ಯಾಂಕ್‌ ಹುದ್ದೆಗೆ ಅರ್ಜಿ ಆಹ್ವಾನ!

Leave A Reply

Your email address will not be published.