T20 World Cup 2024: ಭಾರತ-ಪಾಕ್ ಪಂದ್ಯಕ್ಕೆ ಉಗ್ರರ ಕರಿನೆರಳು; ʼಒಂಟಿ ತೋಳʼ ದಾಳಿ ಬೆದರಿಕೆ
T20 World Cup 2024: ಮುಂದಿನ ತಿಂಗಳು ಭಾರತ-ಪಾಕಿಸ್ತಾನ್ ನಡುವಣ ಪಂದ್ಯ ನಡೆಯಲಿದ್ದು, ಇದಕ್ಕೆ ಇದೀಗ ಉಗ್ರರ ಕರಿನೆರಳು ಬಿದ್ದಿದೆ. ಐಸಿಸ್-ಕೆ ಹೆಸರಿನ ಭಯೋತ್ಪಾದಕ ಸಂಘಟನೆಯು ʼಲೋನ್ ವುಲ್ಫ್ʼ ದಾಳಿ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ. ಈ ದಾಳಿ ಬೆದರಿಕೆ ಬೆನ್ನಲ್ಲೇ ನ್ಯೂಯಾರ್ಕ್ ನಗರದಾದ್ಯಂತ ಪೊಲೀಸ್ ಭದ್ರತೆಯನ್ನು ಹೆಚ್ಚಳ ಮಾಡಲಾಗಿದೆ.
ಇದನ್ನೂ ಓದಿ: Open Book Exam: 8 ರಿಂದ 10 ನೇ ತರಗತಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ತೆರೆದ ಪುಸ್ತಕ ಪರೀಕ್ಷೆ
ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಈ ಬಾರಿಯ ಟಿ20 ವಿಶ್ವಕಪ್ ಪಂದ್ಯ ಆಯೋಜಿಸಲಿದ್ದು, ಹಾಗಾಗೀ ಅಮೆರಿಕದ ಮೂರು ನಗರದಲ್ಲಿ ನಡೆಯಲಿದೆ.
ಉಗ್ರ ಸಂಘಟನೆ ಕೇವಲ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಾತ್ರ ಬೆದರಿಕೆಯೊಡ್ಡಿದೆ. ಅಲ್ಲದೇ ಉಗ್ರರು ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಕ್ರೀಡಾಂಗಣದ ಮೇಲೆ ಡ್ರೋನ್ ಹಾರುತ್ತಿರುವುದು ಇದೆ. ದಿನ 09/06/2024 ಎಂದು ಬರೆಯಲಾಗಿದೆ. ಈ ದಿನ ಭಾರತ ಪಾಕಿಸ್ತಾನ ಪಂದ್ಯ ನಡೆಯಲಿದೆ.
ಇದನ್ನೂ ಓದಿ: Patna: ಆಸ್ಪತ್ರೆಯಲ್ಲಿ ಗರ್ಭಿಣಿ ಸಾವು; ಮಹಡಿಯಿಂದ ನರ್ಸ್ ಅನ್ನು ಎಸೆದು ಸೇಡು ತೀರಿಸಿಕೊಂಡ ಕುಟುಂಬ
ಹಾಗಾಗಿ ಅಂದು ನೊ-ಫ್ಲೈ ಝೋನ್ ಎಂದು ನ್ಯೂಯಾರ್ಕ್ ಪೊಲೀಸರು ಯುಎಸ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್‌ಗೆ ವಿನಂತಿಸಿದೆ. ಪಂದ್ಯ ವೀಕ್ಷಣೆ ಮಾಡಲೆಂದು ಬರುವ ಪ್ರೇಕ್ಷಕರ ಸುರಕ್ಷತೆಯಿಂದ ಎಲ್ಲಾ ಕೆಲಸಗಳನ್ನು ಮಾಡಲಾಗುತ್ತಿದೆ. ಭದ್ರತಾ ವ್ಯವಸ್ಥೆಯನ್ನು ಹೆಚ್ಚು ಬಿಗಿಗೊಳಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ.