K-SET Results: ಕರ್ನಾಟಕ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ; ತಾತ್ಕಾಲಿಕ ಫಲಿತಾಂಶ ಪ್ರಕಟ

K-SET Results: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ (ಕೆ-ಸೆಟ್) ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಂಗಳವಾರ ಪ್ರಕಟಿಸಿದೆ.

ಇದನ್ನೂ ಓದಿ: SIT: ಪ್ರಜ್ವಲ್ ಅರೆಸ್ಟ್ ಆಗುತ್ತಿದ್ದಂತೆ SIT ಮೊದಲು ಮಾಡುವುದೇ ಧ್ವನಿ ಪರೀಕ್ಷೆ !!

ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ 41 ವಿಷಯಗಳಿಗೆ ಜನವರಿ 13ರಂದು ನಡೆದ ಪರೀಕ್ಷೆಯಲ್ಲಿ ಒಟ್ಟು 6,675 ಮಂದಿ ಅರ್ಹತೆ ಪಡೆದಿದ್ದು, ಅಷ್ಟೂ ಮಂದಿಯ ನೋಂದಣಿ ಸಂಖ್ಯೆ ಗಳನ್ನು ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿ ಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Bengaluru Deep Fake: 9 ನೇ ತರಗತಿ ವಿದ್ಯಾರ್ಥಿನಿಯ ಅಶ್ಲೀಲ ಚಿತ್ರ ಹರಿಬಿಟ್ಟ ವಿದ್ಯಾರ್ಥಿ ಸೇರಿ ಮೂವರ ಸೆರೆ

ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅಭ್ಯರ್ಥಿಗಳ ಅರ್ಹತೆ ನಿರ್ಧರಿಸಲು ಈ ಪರೀಕ್ಷೆ ಪ್ರಮುಖವಾಗಿದ್ದು, ಇದರ ಜವಾಬ್ದಾರಿಯನ್ನು ಇದೇ ಮೊದಲ ಬಾರಿಗೆ ರಾಜ್ಯ ಸರಕಾರ ಕೆಇಎಗೆ ವಹಿಸಿತ್ತು. ಅದನ್ನು ಯಶಸ್ವಿಯಾಗಿ ಮುಗಿಸಿದ್ದು, ವೆಬ್‌ಸೈಟ್ ನಲ್ಲಿ ವಿಷಯ, ವರ್ಗವಾರು ಅರ್ಹರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

”ಕೆ-ಸೆಟ್ ಪರೀಕ್ಷೆಗೆ ಒಟ್ಟು 1,17,303 ಮಂದಿ ನೋಂದಾಯಿಸಿಕೊಂಡು, 95,201 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 6,675 ಮಂದಿ ಅರ್ಹತೆ ಪಡೆದಿದ್ದಾರೆ. ಇವರಲ್ಲಿ ಪುರುಷರು 3,398 ಹಾಗೂ ಮಹಿಳೆಯರು 3,180 ಹಾಗೂ ತೃತೀಯ ಲಿಂಗಿಗಳು 97 ಮಂದಿ ಇದ್ದಾರೆ. 350 ಮಂದಿ ವಿಶೇಷ ಸಾಮರ್ಥ್ಯವುಳ್ಳವರು ಪಟ್ಟಿ ಯಲ್ಲಿಸೇರಿದ್ದಾರೆ,” ಎಂದು ತಿಳಿಸಿದ್ದಾರೆ.

‘ಯುಜಿಸಿ ಹಾಗೂ ರಾಜ್ಯದ ಮೀಸಲು ನಿಯಮಗಳ ಪ್ರಕಾರ ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ದಾಖಲೆಗಳ ಪರಿಶೀಲನೆ ನಂತರ ಅರ್ಹ ಅಭ್ಯರ್ಥಿಗಳಿಗೆ ಇ- ಪ್ರಮಾಣ ಪತ್ರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದಲೇ ನೀಡಲಾಗುವುದು,” ಎಂದೂ ಅವರು ವಿವರಿಸಿದ್ದಾರೆ.

5 Comments
  1. MichaelLiemo says

    ventolin online canada: ventolin sale uk – can i buy ventolin over the counter in australia
    ventolin tablets buy

  2. Josephquees says

    buy lasix online: lasix 40 mg – lasix pills

  3. Josephquees says

    prednisone 2 mg: prednisone 5mg capsules – 5 mg prednisone tablets

  4. Josephquees says

    buy semaglutide online: Buy compounded semaglutide online – buy semaglutide online

  5. Timothydub says

    buying drugs from canada: Canadian Pharmacy – legitimate canadian pharmacy

Leave A Reply

Your email address will not be published.