Udupi Railway Track: ಉಡುಪಿ ಬಳಿ ತಪ್ಪಿದ ಸಂಭಾವ್ಯ ರೈಲು ದುರಂತ; ಸಮಯ ಪ್ರಜ್ಞೆ ಮೆರೆದ ಸಿಬ್ಬಂದಿ, ಭಾರೀ ಶ್ಲಾಘನೆ

Udupi Railway Track: ಶನಿವಾರ ತಡರಾತ್ರಿ 2.25ರ ಸುಮಾರಿಗೆ ಉಡುಪಿಯ ಇನ್ನಂಜೆ ಮತ್ತು ಪಡುಬಿದ್ರಿ ನಡುವಿನ ರೈಲ್ವೆ ಹಳಿಯಲ್ಲಿ ಲೋಪವೊಂದನ್ನು ಸಕಾಲದಲ್ಲಿ ಸಿಬ್ಬಂದಿಯೊಬ್ಬರು ಪತ್ತೆ ಹಚ್ಚಿದ ಪರಿಣಾಮ ಸಂಭಾವ್ಯ ಭಾರಿ ರೈಲು ದುರಂತವು ತಪ್ಪಿದೆ.

ಇದನ್ನೂ ಓದಿ: Credit Cards ಇದ್ಯಾ? ಹಾಗಾದ್ರೆ ವಿಮಾನದಲ್ಲಿ ಪ್ರೀಯಾಗಿ ಪ್ರಯಾಣಿಸಬಹುದು!

ಟ್ರ್ಯಾಕ್‌ ನಿರ್ವಹಣಾ ಸಿಬ್ಬಂದಿ ಪ್ರದೀಪ್‌ ಶೆಟ್ಟಿ ಅವರ ಸಮಯ ಪ್ರಜ್ಞೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾತ್ರಿ ಸಮಯದಲ್ಲಿ ಟಾರ್ಚ್‌ ಸಹಾಯದಿಂದ ಲೋಪವನ್ನು ಪತ್ತೆ ಹಚ್ಚಿದ ಪ್ರದೀಪ್‌ ಶೆಟ್ಟಿ ಅವರು ಕೂಡಲೇ ಉಡುಪಿಯ ಆರ್‌ಎಂಇ ಗೆ ಸಮಸ್ಯೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಉಡುಪಿಯಿಂದ ಟ್ರ್ಯಾಕ್‌ ನಿರ್ವಹಣಾ ತಂಡವನ್ನು ಕಳುಹಿಸಲಾಗಿದ್ದು, ನಂತರ ಸಮಸ್ಯೆಯನ್ನು ಸರಿಪಡಿಸಲಾಯಿತು.

ಇದನ್ನೂ ಓದಿ: Hit & Run: ರಸ್ತೆ ದಾಟುತ್ತಿದ್ದ ವೃದ್ಧರಿಗೆ ಕಾರು ಡಿಕ್ಕಿ; ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದು ವೃದ್ಧ ಸ್ಥಳದಲ್ಲೇ ಸಾವು

ಎಲ್‌ಟಿಟಿ-ತಿರುವನಂತಪುರ ಸೆಂಟ್ರಲ್‌ ನೇತ್ರಾವತಿ ಎಕ್ಸ್‌ಪ್ರೆಸ್‌ ಹಾಗೂ ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್‌ ಹಾಗೂ ನೇತ್ರಾವತಿ ಎಕ್ಸ್‌ಪ್ರೆಸ್‌ ಮಂಗಳೂರು ಜಂಕ್ಷನ್‌ ಕಡೆಗೆ ತೆರಳಬೇಕಿತ್ತು. ಹಳಿ ದೋಷ ಸರಿಪಡಿಸುವವರೆಗೂ ಎರಡೂ ರೈಲುಗಳನ್ನು ನಂದಿಕೂರು ಮತ್ತು ಸುರತ್ಕಲ್‌ ನಿಲ್ದಾಣಗಳಲ್ಲಿ ನಿಲ್ಲಿಸಲಾಯಿತು.

ಆ ಮಾರ್ಗದ ಮೂಲಕ ಹಾದು ಹೋಗಬೇಕಿದ್ದ ಇತರ ರೈಲುಗಳನ್ನು ಸುರತ್ಕಲ್‌, ಉಡುಪಿ ರೈಲು ನಿಲ್ದಾಣಗಳಲ್ಲಿ ತಡೆ ಹಿಡಿಯಲಾಯಿತು. ಮೂರು ಗಂಟೆಯ ದುರಸ್ತಿ ಕಾರ್ಯ ಮುಗಿದ ನಂತರ ತಾತ್ಕಾಲಿಕ ಅವಧಿಗೆ ಗಂಟೆಗೆ 20 ಕಿ.ಮೀ. ವೇಗದ ಮಿತಿಯೊಂದಿಗೆ ರೈಲು ಸಂಚಾರಕ್ಕೆ ಅನುವು ಮಾಡಲಾಯಿತು ಎಂದು ವರದಿಯಾಗಿದೆ.

ಪ್ರದೀಪ್‌ ಶೆಟ್ಟಿ ಅವರಿಗೆ ಕೊಂಕಣ ರೈಲ್ವೆಯ ಸಿಎಂಡಿ ಸಂತೋಷ್‌ ಕುಮಾರ್‌ ಝಾ 25,000ರೂ. ನಗದು ಬಹುಮಾನವನ್ನು ಘೋಷಣೆ ಮಾಡಿದ್ದು, ಜೊತೆಗೆ ಕೊಂಕಣ ರೈಲ್ವೆಯ ಉಡುಪಿ ವಿಭಾಗದ ಹಿರಿಯ ಇಂಜಿನಿಯರ್‌ ಗೋಪಾಲಕೃಷ್ಣ ಅವರು ಚೆಕ್‌ ಅನ್ನು ಪ್ರದೀಪ್‌ ಅವರಿಗೆ ಸ್ಥಳದಲ್ಲೇ ನೀಡಿ ಪ್ರಶಂಸಿಸಿದರು.

Leave A Reply

Your email address will not be published.