Arecanut Problem: ಅಡಿಕೆ ಬೆಲೆ ಏರುವ ಸಮಯದಲ್ಲೇ ರೈತರಿಗೆ ಬೆಳೆ ಉಳಿಸುವ ಸಂಕಷ್ಟ!

Arecanut Problem: ಬಿಸಿಲಿನ ತಾಪದಿಂದ ಅಡಿಕೆ ಕೃಷಿ ನಿರ್ವಹಣೆ ಬಹಳ ಕಷ್ಟಕರವಾಗಿದ್ದು ರೈತರು ಪೇಚಿಗೆ ಸಿಲುಕಿದ್ದಾರೆ. ಹೌದು, ಅಡಕೆ ಬೆಳೆದ ರೈತರು ಹರಳು ಉದುರುವಿಕೆಯಿಂದ (Arecanut Problem) ಕಂಗಾಲಾಗಿದ್ದು, ಅದರಿಂದಾಗಿ ಈ ವಾರ್ಷಿಕ ಫಸಲಿನಲ್ಲಿ ಆದಾಯ ಕುಂಠಿತವಾಗಲು ಕಾರಣವಾಗಿದೆ.
ಮುಖ್ಯವಾಗಿ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಅಡಕೆ ಹರಳು (ನಳ್ಳಿ, ಎಳೆಯ ಅಡಕೆ) ಉದುರುವಿಕೆಯಿಂದ ಅಡಕೆ ಬೆಳೆ ಫಸಲು ತೀರಾ ಕಡಿಮೆಯಾಗಿದೆ.
ಕಾರ್ಕಳ ಹಾಗೂ ಹೆಬ್ರಿ ಕಡೆಯಲ್ಲಿ ತೋಟಗಾರಿಕಾ ಬೆಳೆಗಳ ಪೈಕಿ ಅಡಕೆ ಬೆಳೆಯು ಹೆಚ್ಚಿದ್ದು , ಅಡಕೆ ಬೆಳೆದ ರೈತರು ಹರಳು ಉದುರುವಿಕೆಯಿಂದ ಬೇಸತ್ತಿದ್ದಾರೆ.
ಇದನ್ನೂ ಓದಿ: Prices Of Medicines: ಬಿಪಿ, ಶುಗರ್, ಹೃದ್ರೋಗ ಸೇರಿ ಇತರೆ ಔಷಧಿಗಳ ದರ ಇಳಿಕೆ
ಮುಖ್ಯವಾಗಿ ಕರಾವಳಿ ಪ್ರದೇಶಗಳಲ್ಲಿ ಅಡಕೆ ಬೆಳೆ ಹೆಚ್ಚಿದ್ದು ಈ ಬಾರಿ ಬರ ಹಾಗೂ ಬಿಸಿಲಿನ ತಾಪಮಾನದಲ್ಲಿ ಏರುಪೇರಾದ ಕಾರಣ ಅಂತರ್ಜಲ ಕುಸಿತಗೊಂಡಿದೆ. ಇದರಿಂದಾಗಿ ಕೆಲವೆಡೆಗಳಲ್ಲಿ ಅಡಕೆ ಮರಗಳಿಗೆ ನೀರಿಲ್ಲದೆ ಸಮಸ್ಯೆ ಉಂಟಾಗಿದೆ. ಕೆಲವೆಡೆಗಳಲ್ಲಿ ಅತ್ಯಧಿಕ ನೀರು ಹಾಕಿ ಸಮಸ್ಯೆ ಉಂಟಾಗಿದೆ. ಇದು ಹರಳು ಉದುರಲು ಕಾರಣವಾಗಿದೆ.
ನಿರ್ವಹಣೆ ಬಗ್ಗೆ ಹೇಳುವುದಾದ್ರೆ, ಮುಖ್ಯವಾಗಿ ಬಸಿ ಕಾಲುವೆಗಳ ನಿರ್ಮಾಣ, ಪೋಷಕಾಂಶಗಳ ನೀಡುವಿಕೆ ಹರಳು ಉದುರುವಿಕೆ ಕಡಿಮೆ ಮಾಡಬಹುದು. ಕರಾವಳಿ ಪ್ರದೇಶಗಳ ಮಣ್ಣಿನಲ್ಲಿ ಆಮ್ಲೀಯ ಅಂಶಗಳು ಹೆಚ್ಚಿರುವುದರಿಂದ ಸುಣ್ಣ ಹಾಕುವುದು ಅವಶ್ಯಕವಾಗಿದೆ. ಇನ್ನು ರಾಸಾಯನಿಕ ಗೊಬ್ಬರ, ಹಾಗೂ ಸಾವಯವ ಗೊಬ್ಬರಗಳನ್ನು ಪ್ರಮಾಣ ಬದ್ದವಾಗಿ ನೀಡಬೇಕು. ಜೊತೆಗೆ ಪೊಟ್ಯಾಷ್ ಅಂಶ ನೀಡಿದರೆ ಮುಂದಿನ ಫಸಲಿನಲ್ಲಿ ಹೆಚ್ಚಳವಾಗಲಿದೆ. ಅದಲ್ಲದೆ ಹರಳು ಉದುರುವಿಕೆ ಕ್ರಮಗಳಲ್ಲಿ ನೀರು ನಿರ್ವಹಣೆಯು ಮುಖ್ಯವಾಗಿದೆ.
ನಷ್ಟ ದ ಇಳುವರಿ ಗಾಗಿ ಕರಾವಳಿ ಪ್ರದೇಶಗಳಲ್ಲಿ ಅಡಕೆ ಬೆಳೆಯೊಂದಿಗೆ ಅಂತರ್ಬೆಳೆಯಾಗಿ ತೆಂಗು, ಬಾಳೆ, ಕೊಕ್ಕೊ, ಹಲಸು, ಜಾಯಿಕಾಯಿ, ಕಾಳು ಮೆಣಸು, ವೀಳ್ಯದೆಲೆ ಬೆಳೆಗಳನ್ನು ಬಳಸಿ ಸಮಗ್ರ ಕೃಷಿಗೆ ಆದ್ಯತೆ ನೀಡಿದಲ್ಲಿ, ಒಂದಲ್ಲ ಒಂದು ಬೆಳೆಯಲ್ಲಿ ಆದಾಯ ತಂದುಕೊಡಬಲ್ಲವು .