Home ದಕ್ಷಿಣ ಕನ್ನಡ Mangaluru: ಉಳ್ಳಾಲದ ವೈದ್ಯ ಯುವತಿ ಪಿಜಿಯಲ್ಲಿ ಸಾವು

Mangaluru: ಉಳ್ಳಾಲದ ವೈದ್ಯ ಯುವತಿ ಪಿಜಿಯಲ್ಲಿ ಸಾವು

Mangaluru

Hindu neighbor gifts plot of land

Hindu neighbour gifts land to Muslim journalist

Mangaluru: ದಂತ ವೈದ್ಯಕೀಯ ಪದವಿ ಪೂರೈಸಿದ್ದ ಯುವತಿಯೋರ್ವಳು ಮಂಗಳವಾರ ತನ್ನ ಪಿಜಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವು ಕಂಡಿರುವ ಘಟನೆಯೊಂದು ನಡೆದಿದೆ.

ಉಳ್ಳಾಲ ತಾಲೂಕಿನ ನರಿಂಗಾನ ನಿವಾಸಿ, ದಂತ ವೈದ್ಯಕೀಯ ಪದವಿ ಮಾಡಿದ್ದ ಸ್ವಾತಿ ಶೆಟ್ಟಿ (24) ಎಂಬಾಕೆಯೇ ಮೃತ ಪಟ್ಟಾಕೆ.

ಎ.ಜೆ ಆಸ್ಪತ್ರೆಯಲ್ಲಿ ಬಿಡಿಎಸ್‌ ಪದವಿ ಮಾಡಿದ್ದ ಸ್ವಾತಿ ಪಾಂಡೇಶ್ವರದ ಕ್ಲಿನಿಕ್‌ ಗೆ ಕೆಲಸಕ್ಕೆ ಹಾಜರಾಗಬೇಕಿತ್ತು. ಪಾಂಡೇಶ್ವರದ ಪಿಜಿಯಲ್ಲಿ ಉಳಿದುಕೊಂಡಿದ್ದರು. ನಂತರ ರಾತ್ರಿ ತಾಯಿ ಜೊತೆ ಫೋನನಲ್ಲಿ ಮಾತನಾಡುತ್ತಿದ್ದು, ವಿಪರೀತ ತಲೆನೋವು, ನಾಳೆ ಮಾತನಾಡುವೆ ಎಂದು ಹೇಳಿ ಫೋನ್‌ ಇಟ್ಟಿದ್ದರು ಎಂದು ವರದಿಯಾಗಿದೆ.

ಆದರೆ ಬೆಳಗ್ಗೆ ಸ್ವಾತಿಯನ್ನು ಎಬ್ಬಿಸೋಕೆ ಬಂದ ಇತರರು ಸ್ವಾತಿಯ ದೇಹ ತಣ್ಣಗಿರುವುದನ್ನು ಕಂಡು ಪಿಜಿಯ ಸೂಪರ್‌ವೈಸರ್‌ ಗಮನಕ್ಕೆ ತಂದಿದ್ದಾರೆ. ಕೂಡಲೇ ಆಂಬುಲೆನ್ಸ್‌ ಮೂಲಕ ವೆನ್‌ಲಾಕ್‌ ಆಸ್ಪತ್ರೆಗೆ ದಾಖಲು ಮಾಡಿದ್ದು, ವೈದ್ಯರು ಅಲ್ಲಿ ಆಕೆ ಮೃತ ಹೊಂದಿದ್ದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಮನೆಯಂಗಳದಲ್ಲೇ ಎರಡು ಆನೆಗಳ ಕಾದಾಟ; ವೀಡಿಯೋ ವೈರಲ್‌

ಸ್ವಾತಿಗೆ ಕೆಲಸ ಸಿಕ್ಕ ನಂತರ ಪೋಷಕರು ಮದುವೆ ಮಾಡುವ ತಯಾರಿ ನಡೆಸಿದ್ದರು ಎನ್ನಲಾಗಿದೆ. ಪೊಲೀಸರು ಸ್ವಾತಿ ಬಾಯಲ್ಲಿ ನೊರೆ ಬಂದಿತ್ತು ಎಂದು ಜೊತೆಗಿದ್ದವರು ಹೇಳಿದ್ದಾಗಿ ಹೇಳಿರುವುದಾಗಿ ವರದಿಯಾಗಿದೆ. ಫಿಟ್ಸ್‌ ಖಾಯಿಲೆ ಇರುವ ಕುರಿತು ಮನೆಯವರು ಹೇಳಿದ್ದಾರೆ. ಮನೆಮಂದಿ ಸಂಶಯವೇನೂ ವ್ಯಕ್ತಪಡಿಸಿಲ್ಲ. ಸಹಜ ಸಾವು ಆಗಿರಬಹುದೆಂದು ತನಿಖೆಗಾಗಿ ದೂರು ಕೊಟ್ಟಿಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ: 2nd PUC Exam: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2 ಬರೆಯುವ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ; ಎ.18 ರವರೆಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ