Home Breaking Entertainment News Kannada Anchor Anushree: 35 ವರ್ಷವಾದರೂ ಅನುಶ್ರೀ ಮದುವೆಯಾಗದಿರಲು ಕಾರಣವೇನು? ಈಕೆಯ ಮನಸ್ಸಿನಲ್ಲೇನಿದೆ? ಇಲ್ಲಿದೆ ಉತ್ತರ

Anchor Anushree: 35 ವರ್ಷವಾದರೂ ಅನುಶ್ರೀ ಮದುವೆಯಾಗದಿರಲು ಕಾರಣವೇನು? ಈಕೆಯ ಮನಸ್ಸಿನಲ್ಲೇನಿದೆ? ಇಲ್ಲಿದೆ ಉತ್ತರ

Anchor Anushree

Hindu neighbor gifts plot of land

Hindu neighbour gifts land to Muslim journalist

 

Anchor Anushree : ಕಿರುತೆರೆಯ ಸ್ಟಾರ್ ಆ್ಯಂಕರ್ ಅನುಶ್ರೀ ಹೆಸರು ಕೇಳದವರೆ ಇರಲಿಕ್ಕಿಲ್ಲ. ಕನ್ನಡದ ಬಹುಬೇಡಿಕೆಯ ನಿರೂಪಕಿ ಅನುಶ್ರೀ (Anchor Anushree ) ಅಂದರೆ ಎಲ್ಲರಿಗೂ ಇಷ್ಟಾನೇ ಬಿಡಿ. ಅನುಶ್ರೀ ನಿರೂಪಣೆ ಮಾಡೋಕೆ ಶುರು ಮಾಡಿದರೆ ಸಾಕು, ಜನರು ಶಿಳ್ಳೆ ಹೊಡೆಯುತ್ತಾ ಕಣ್ಣು ಬಾಯಿ ಬಿಟ್ಟು ಆಕೆಯ ನಿರೂಪಣೆಯನ್ನು ಎಂಜಾಯ್ ಮಾಡುವುದು ಸಹಜ.

ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಹಾಗೂ ಸ್ಯಾಂಡಲ್‌ವುಡ್‌ ನಟಿ (Sandalwood star) ಅನುಶ್ರೀ ತಮ್ಮ ನಿರೂಪಣೆಯಿಂದಲೆ ಮನೆಮಾತಾಗಿರುವ ನಟಿ ಎಂದರೇ ತಪ್ಪಾಗದು. ಕಾರ್ಯಕ್ರಮ ನಿರೂಪಣೆಯ(anchoring)ಜೊತೆಗೆ ಸಂಗೀತ, ನೃತ್ಯದಿಂದಲೂ ಮನರಂಜಿಸುವ ಅನುಶ್ರೀ ಸದ್ಯ ಸರಿಗಮಪ ಸಂಗೀತದ ರಿಯಾಲಿಟಿ ಷೋನಲ್ಲಿ ಬಿಜಿಯಾಗಿದ್ದಾರೆ.ಅಚ್ಚ ಕನ್ನಡದಲ್ಲಿ ನಿರೂಪಣೆ ಮಾಡುವ ಕರಾವಳಿಯ ಬೆಡಗಿಗೆ ಮದುವೆಯ ವಯಸ್ಸು ಕಳೆದರೂ ಅನುಶ್ರೀ ಇನ್ನೂ ಯಾಕೆ ಮದ್ವೆಯಾಗುವ ಯೋಚನೆ ಮಾಡಿಲ್ಲ ಎನ್ನುವುದು ಇಡೀ ಕರುನಾಡ ಜನತೆಯ ಪ್ರಶ್ನೆ? ಸದ್ಯ ಈ ಪ್ರಶ್ನೆಗೆ ಸ್ವತಃ ಎಲ್ಲರ ಮೆಚ್ಚಿನ ಮಾತಿನ ಮಲ್ಲಿ ಅನುಶ್ರೀ ಉತ್ತರ ನೀಡಿದ್ದಾರೆ.

ಅನುಶ್ರೀ ಮದುವೆಯಾಗದೆ ಏಕಾಂಗಿಯಾಗಿ ಜೀವನ ನಡೆಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇವರ ವೈಯಕ್ತಿಕ ಜೀವನದ ಅನೇಕ ಊಹಾಫೋಹ ಹರುದಾಡುತ್ತಿರುವುದು ಇದೇ ಮೊದಲೇನಲ್ಲ!! ಅಷ್ಟಕ್ಕೂ ಅನುಶ್ರೀ ಏಕಾಂಗಿಯಾಗಿ ಉಳಿಯುವ ನಿರ್ಧಾರದ ಕುರಿತು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. “ನನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಜೀವನದಲ್ಲಿ ಅನುಸರಿಸಿಕೊಂಡು ನಡೆಯುವ ಸಂಗಾತಿ ನನಗೆ ಇನ್ನೂ ಸಿಕ್ಕಿಲ್ಲ” ಹಾಗಾಗಿ, ತಾನಿನ್ನೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿಲ್ಲ ಎಂದು ಅನುಶ್ರೀ ಹೇಳಿಕೊಂಡಿದ್ದಾರೆ.

ಅನುಶ್ರೀಗೆ ಮದುವೆಗಿಂತ ಮೊದಲ ಪ್ರಾಧಾನ್ಯತೆ ವೃತ್ತಿಜೀವನ. ಹೀಗಾಗಿ, ತಮ್ಮ ಜೀವನದಲ್ಲಿ ಇನ್ನಷ್ಟೂ ಸಾಧಿಸಬೇಕೆಂಬ ಅಭಿಲಾಷೆ ಇಟ್ಟುಕೊಂಡಿರುವ ಹಿನ್ನೆಲೆ ಅನುಶ್ರೀ ವಯಸ್ಸು 35 ವರ್ಷ ಕಳೆದರೂ ಕೂಡ ಮದುವೆಯಾಗದೆ ಉಳಿದಿದ್ದಾರಂತೆ. ಇದರ ಜೊತೆಗೆ ಅದೆಷ್ಟೋ ಸೆಲೆಬ್ರೆಟಿಗಳ ಸಂದರ್ಶನದಲ್ಲಿ ಕೂಡ ಮದುವೆಯ ವಿಚಾರ ಬಂದಾಗ ಮದ್ವೆಯಾಗುವ ಹುಡುಗ ಇಲ್ಲವೇ ಹುಡುಗಿ ಗಂಡ- ಹೆಂಡತಿ ಎಂಬ ಭಾವನೆಯಲ್ಲಿ ಮಾತ್ರವಲ್ಲದೆ ಆತ್ಮೀಯ ಸ್ನೇಹಿತರ ರೀತಿಯಲ್ಲಿ ಸುಮಧುರ ಬಾಂಧವ್ಯ ಹೊಂದಿರಬೇಕು. ಎಲ್ಲಕಿಂತ ಮುಖ್ಯವಾಗಿ ದಾಂಪತ್ಯದಲ್ಲಿ ಹೊಂದಾಣಿಕೆ ಬಹಳ ಮುಖ್ಯ ಎಂದು ಅನುಶ್ರೀ ಅದೆಷ್ಟೋ ಬಾರಿ ಹೇಳಿಕೊಂಡಿದ್ದಾರೆ.

ಇದನ್ನು ಓದಿ: Child Rescue: ಅಚಾನಕ್‌ಆಗಿ ರೂಂ ನಲ್ಲಿ 3 ವರ್ಷದ ಮಗು ಲಾಕ್‌; ಮಗುವಿನ ರಕ್ಷಣೆ ಕಾರ್ಯ ಮಾಡಿದ ಅಗ್ನಿಶಾಮಕ ಸಿಬ್ಬಂದಿ!!