Destroyed Pomegranate Trees: ರಾತ್ರೋ ರಾತ್ರಿ 200ಕ್ಕೂ ಹೆಚ್ಚು ದಾಳಿಂಬೆ ಗಿಡ ಧ್ವಂಸ ಮಾಡಿದ ಕಿಡಿಗೇಡಿಗಳು!

someone destroyed more than 200 pomegranate trees

Share the Article

Destroyed Pomegranate Trees: ದೇವನಹಳ್ಳಿ ತಾಲೂಕಿನ
ಹಡ್ಯಾಳ ಗ್ರಾಮದಲ್ಲಿ ಕಿಡಿಗೇಡಿಗಳು ಇನ್ನೂರಕ್ಕೂ ಅಧಿಕ ದಾಳಿಂಬೆ ಗಿಡಗಳನ್ನು ನಾಶ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ರಾತ್ರೋ ರಾತ್ರಿ ಕಿಡಿಗೇಡಿಗಳು, ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಹಡ್ಯಾಳ ಗ್ರಾಮದಲ್ಲಿ ಒಂದೂವರೆ ವರ್ಷದಿಂದ ಬೆಳೆಸಿದ್ದ ದಾಳಿಂಬೆ ಗಿಡಗಳನ್ನು ಮಚ್ಚಿನಿಂದ ಕತ್ತರಿಸಿ (Destroyed Pomegranate Trees) ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ವೆಂಕಟೇಗೌಡ ಎಂಬುವರ ಲಕ್ಷಾಂತರ ಖರ್ಚು ಮಾಡಿ ಜಮೀನಿನಲ್ಲಿ ದಾಳಿಂಬೆ ಗಿಡಗಳನ್ನು ಬೆಳೆಯಲಾಗಿದ್ದು, ಇದೀಗ ಲಕ್ಷಾಂತರ ರೂಪಾಯಿ ಮೌಲ್ಯದ ದಾಳಿಂಬೆ ಗಿಡಗಳ ನಾಶದಿಂದ ರೈತ ಕಂಗಾಲಾಗಿದ್ದಾರೆ. ಈ ಕುರಿತು ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮಾಹಿತಿ ಪ್ರಕಾರ, ಚನ್ನರಾಯಪಟ್ಟಣ ಪೊಲೀಸ್ ಠಾಣೆ ಹಿಂಭಾಗದಲ್ಲಿಯೇ ಈ ಬೆಳೆ ನಾಶ ಮಾಡಲಾಗಿದೆ ಎಂದು ತಿಳಿದು ಬಂದಿದೆ.

 

ಇದನ್ನು ಓದಿ: Smartphone Technics: ಮೊಬೈಲ್ ಬಳಕೆದಾರರೇ ಗಮನಿಸಿ, ನಿಮ್ಮ ಕರೆ, ಸಂದೇಶ ಯಾರಾದರೂ ರಹಸ್ಯವಾಗಿ ಕೇಳುತ್ತಿದ್ದಾರಾ? ಈ ಐದು ಸಂಖ್ಯೆ ಡಯಲ್ ಮಾಡಿ ತಿಳಿಯಿರಿ!

Leave A Reply