Thick Eyebrows: ಮಹಿಳೆಯರೇ , ದಟ್ಟ ಹುಬ್ಬುಗಳಿಲ್ಲವೆಂಬ ಕೊರಗೇ? ಈ ಮನೆ ಮದ್ದು ಬಳಸಿ ನೀವೂ ಕಾಮನಬಿಲ್ಲಿನಂತ ಹುಬ್ಬು ಪಡೆಯಿರಿ

Lifestyle hair care tips home remedies for thick eyebrows in kannada

Share the Article

Thick Eyebrows: ಮುಖದ ಸೌಂದರ್ಯವನ್ನು (beauty) ಹುಬ್ಬು ಹೆಚ್ಚಿಸುತ್ತದೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಹೌದು, ಮುಖದಲ್ಲಿ ಹುಬ್ಬು ಆಕರ್ಷಣಿಯವಾಗಿದ್ದರೆ ಇನ್ನೊಬ್ಬರ ಗಮನ ನಿಮ್ಮ ಮೇಲಿರುತ್ತದೆ. ಆದರೆ ಹುಬ್ಬುಗಳು ಎಲ್ಲರಿಗೂ ಒಂದೇ ಆಕಾರದಲ್ಲಿರುವುದಿಲ್ಲ. ಯಾಕೆಂದರೆ ತೆಳುವಾದ ಹುಬ್ಬುಗಳಿಗೆ ಇನ್‌ಫೆಕ್ಷನ್‌, ಚರ್ಮದ ಕಾಯಿಲೆ, ಕಣ್ಣಿನ ಸಮಸ್ಯೆ, ಆರೋಗ್ಯ ಸಮಸ್ಯೆಗೆ ಪ್ರತಿದಿನ ಔಷಧ ಸೇವಿಸುವುದು, ಆಟೋಇಮ್ಯೂನ್ ಅಸ್ವಸ್ಥತೆ, ಹುಬ್ಬುಗಳಿಗೆ ಗಾಯ, ಅನುವಂಶಿಕ ಅಸ್ವಸ್ಥತೆಗಳು, ಹಲ್ಲಿನ ಚಿಕಿತ್ಸೆ, ಟ್ರೈಕೋಡಿಸ್ಪ್ಲಾಸಿಯಾ ಸ್ಪಿನುಲೋಸಾ ಹೀಗೆ ನಾನಾ ಕಾರಣಗಳಿಂದ ಕೆಲವರಿಗೆ ಬಹಳ ತೆಳುವಾದ ಹುಬ್ಬು ಇರುತ್ತದೆ. ತೆಳು ಹುಬ್ಬು ಇರುವವರು ಅದನ್ನು ಹೈಲೈಟ್‌ ಮಾಡಲು ಐಬ್ರೋ ಪೆನ್ಸಿಲ್‌ ಬಳಸುತ್ತಾರೆ. ಇದರ ಬದಲಾಗಿ ನೀವು ಪ್ರತಿದಿನ ಇಲ್ಲಿ ಹೇಳುವ ಟಿಪ್ಸ್‌ ಪಾಲಿಸಿದರೆ ಖಂಡಿತ ನೀವೂ ಕಾಮಬಿಲ್ಲಿನಂತ, ದಟ್ಟವಾದ ಹುಬ್ಬುಗಳನ್ನು (Thick Eyebrows) ಪಡೆಯಬಹುದು.

ತೆಂಗಿನೆಣ್ಣೆ:
ಹುಬ್ಬುಗಳು ದಟ್ಟವಾಗಿ ಬೆಳೆಯಲು ಕೂಡಾ ತೆಂಗಿನೆಣ್ಣೆ ಸಹಾಯ ಮಾಡುತ್ತದೆ. ಒಂದೆರಡು ಹನಿ ತೆಂಗಿನೆಣ್ಣೆಯನ್ನು ನಿಮ್ಮ ಬೆರಳುಗಳ ತುದಿಗೆ ಹಚ್ಚಿಕೊಂಡು ಎರಡೂ ಹುಬ್ಬುಗಳಿಗೆ ಸರ್ಕ್ಯುಲರ್‌ ಮಸಾಜ್‌ ಮಾಡಿ. ಪ್ರತಿ ರಾತ್ರಿ ಹೀಗೆ ಮಾಡಿ ಬೆಳಗ್ಗೆ ಇದ್ದು ಮುಖ ತೊಳೆಯಿರಿ.

ಬಾಳೆಹಣ್ಣು:
ಬಾಳೆಹಣ್ಣನ್ನು ಚೆನ್ನಾಗಿ ಮ್ಯಾಶ್‌ ಮಾಡಿ, ಜೇನುತುಪ್ಪದೊಂದಿಗೆ ಮಿಕ್ಸ್‌ ಮಾಡಿ ಹುಬ್ಬುಗಳಿಗೆ ಹಚ್ಚಿ. ಸುಮಾರು 1 ಗಂಟೆ ಕಾಲಬಿಟ್ಟು ನಂತರ ತಣ್ಣೀರಿನಿಂದ ತೊಳೆಯಿರಿ.

ಆಲಿವ್‌ ಆಯಿಲ್‌:
ಆಲಿವ್‌ ಆಯಿಲನ್ನು ನಿಮ್ಮ ಹುಬ್ಬುಗಳಿಗೆ ಹಚ್ಚಿ ಒಂದೆರಡು ನಿಮಿಷ ಮಸಾಜ್‌ ಮಾಡಿ, ರಾತ್ರಿಯಿಡೀ ಬಿಟ್ಟು ಬೆಳಗ್ಗೆ ಫೇಸ್‌ ವಾಶ್‌ ಮಾಡಿ.

ಪುದೀನಾ ಎಣ್ಣೆ:
ಕಾಟನ್‌ ಬಾಲ್‌ಗಳಲ್ಲಿ ಒಂದೆರಡು ಹನಿ ಪುದೀನಾ ಎಣ್ಣೆಯನ್ನು ತೆಗೆದುಕೊಂಡು ನಿಮ್ಮ ಐಬ್ರೋಗಳಿಗೆ ಮಸಾಜ್‌ ಮಾಡಿ. ಇಡೀ ರಾತ್ರಿ ಬಿಟ್ಟು ನಂತರ ವಾಶ್‌ ಮಾಡಿ.

ಅಲೊವೆರಾ:
ಅಲೊವೆರಾ/ಲೋಳೆಸರವನ್ನು ಕೂದಲು ಹಾಗೂ ಚರ್ಮಕ್ಕೆ ಬಳಸಲಾಗುತ್ತದೆ. ಫ್ರೆಶ್‌ ಅಲೊವೆರಾದ ಲೋಳೆಯನ್ನು ಸ್ವಲ್ಪ ತೆಂಗಿನೆಣ್ಣೆ ಜೊತೆ ಚೆನ್ನಾಗಿ ಮಿಕ್ಸ್‌ ಮಾಡಿ. ಹುಬ್ಬುಗಳಿಗೆ ಒಂದೆರಡು ನಿಮಿಷ ಮಸಾಜ್‌ ಮಾಡಿ. ರಾತ್ರಿಯಿಡೀ ಬಿಟ್ಟು ಬೆಳಗ್ಗೆ ತೊಳೆಯಿರಿ. ಹೀಗೆ ಮಾಡುವುದರಿಂದ ಹುಬ್ಬುಗಳು ದಟ್ಟವಾಗಿ ಬೆಳೆಯುತ್ತದೆ.

ರೋಸ್‌ಮೆರಿ ಎಣ್ಣೆ:
ರೋಸ್‌ಮೆರಿ ಎಣ್ಣೆ ನೇರವಾಗಿ ಬಳಸದೆ ತೆಂಗಿನೆಣ್ಣೆ ಜೊತೆ ಮಿಕ್ಸ್‌ ಮಾಡಿ ಬಳಸಿದರೆ ಒಳ್ಳೆ ಫಲಿತಾಂಶ ನೀಡುತ್ತದೆ. ರಾತ್ರಿ ಹುಬ್ಬುಗಳಿಗೆ ಹಚ್ಚಿ ಮರುದಿನ ತೊಳೆಯಿರಿ.

ಲ್ಯಾವೆಂಡರ್‌ ಎಣ್ಣೆ:
ದಟ್ಟವಾದ ಹುಬ್ಬುಗಳನ್ನು ಪಡೆಯಲು ಬಳಸುವ ಪರಿಣಾಮಕಾರಿ ಮನೆ ಮದ್ದುಗಳಲ್ಲಿ ಇದೂ ಕೂಡಾ ಒಂದು. ಲ್ಯಾವೆಂಡರ್‌ ಎಣ್ಣೆಯನ್ನು ನಿಮ್ಮ ಹುಬ್ಬುಗಳಿಗೆ ಹಚ್ಚಿ ಮಸಾಜ್‌ ಮಾಡಿ , ಮರುದಿನ ಬೆಳಗ್ಗೆ ಮುಖ ತೊಳೆಯಿರಿ.

ಈರುಳ್ಳಿ:
ಈರುಳ್ಳಿ ರಸದೊಂದಿಗೆ ಜೇನುತುಪ್ಪ ಮಿಕ್ಸ್‌ ಮಾಡಿ ಅದನ್ನು ಹುಬ್ಬುಗಳಿಗೆ ಹಚ್ಚಿ ಇಡೀ ರಾತ್ರಿ ಬಿಟ್ಟು ವಾಶ್‌ ಮಾಡಿ. ಕೆಲವೇ ದಿನಗಳಲ್ಲಿ ದಟ್ಟವಾದ ಹುಬ್ಬುಗಳು ನಿಮ್ಮದಾಗಲಿವೆ.

ಇದನ್ನೂ ಓದಿ: ಚಳಿಗಾಲದಲ್ಲೂ ಮುಖದ ಅಂದ ಚಂದವಾಗೇ ಇರುತ್ತೆ, ಅಡುಗೆ ಮನೆಯಲ್ಲಿ ಸಿಗೋ ಇದನ್ನು ಬಳಸಿದ್ರೆ ಮಾತ್ರ !!

Leave A Reply