Uses For An Old ToothBrush: ಹಳೆಯ ಟೂತ್ ಬ್ರೆಷ್ ಬಿಸಾಡ್ತೀರಾ ?! ಇನ್ಮುಂದೆ ಎಸೆಯದೆ ಹೀಗೆಲ್ಲಾ ಉಪಯೋಗಿಸಿ
Do not throw away the old toothbrush and use it like this
Uses For An Old ToothBrush: ಟೂತ್ ಬ್ರಷ್ ಹಳೆಯದಾದ್ರೆ ಹಿಂದೆ ಮುಂದೆ ನೋಡದೆ ಬಹುತೇಕರು ಕಸದ ಬುಟ್ಟಿಗೆ ಎಸೆದು ಬಿಡುತ್ತಾರೆ . ಆದ್ರೆ ಹಾಳಾಗಿರುವ ಟೂತ್ ಬ್ರಷ್ ನಿಂದ ಅನೇಕ ಅದ್ಭುತ ಪ್ರಯೋಜನಗಳಿವೆ (Uses For An Old ToothBrush). ಇದರಿಂದ ನೀವು ಹಣದ ಜೊತೆ ಸಮಯವನ್ನು ಉಳಿಸಬಹುದು . ಬನ್ನಿ ಅಂತಹ ಪ್ರಯೋಜನ ಏನೆಂದು ನೋಡೋಣ.
ನಿಮ್ಮ ಕಂಪ್ಯೂಟರ್ ಕೀಬೋರ್ಡ್ ಅನ್ನು ಸ್ಕ್ರಬ್ ಮಾಡಿ. ಕೀಲಿಗಳ ನಡುವೆ ಹಲ್ಲುಜ್ಜುವ ಬ್ರಷ್ ಅನ್ನು ಒರೆಸಿರಿ. ಡ್ರೈ ಬ್ರಷ್‌ನಿಂದ ಲಘುವಾಗಿ ಸ್ಕ್ರಬ್ ಮಾಡಿ, ಕೀಬೋರ್ಡ್ ಅನ್ನು ಕೋನದಲ್ಲಿ ಓರೆಯಾಗಿಸಿ ಇದರಿಂದ ಹೊರಬಿದ್ದ ಧೂಳು ಬೀಳುತ್ತದೆ, ಆದರೆ ಮೊದಲು ನಿಮ್ಮ ಕಂಪ್ಯೂಟರ್ ಅನ್ನು ಆಫ್ ಮಾಡಲು ಅಥವಾ ಕೀಬೋರ್ಡ್ ಅನ್ನು ಅನ್‌ಪ್ಲಗ್ ಮಾಡಲು ಮರೆಯದಿರಿ.
ಕೂದಲನ್ನು ಕಲರ್ ಮಾಡುವ ಅಭ್ಯಾಸ ನಿಮಗಿದ್ದರೆ ತಕ್ಷಣ ಮನೆಯಲ್ಲಿ ಹಾಳಾಗಿದೆ ಎಂದು ಮೂಲೆಗೆ ಎಸೆದಿರುವ ಬ್ರಷ್ ಎತ್ತಿಟ್ಟುಕೊಳ್ಳಿ. ಈ ಬ್ರಷ್ ನಿಮ್ಮ ಕೂದಲಿಗೆ ಬಗೆ ಬಗೆಯ ಬಣ್ಣ ನೀಡಲು ಸಹಕಾರಿ. ಬ್ರಷನ್ನು ಬಣ್ಣದಲ್ಲಿ ಅದ್ದಿ, ಮೇಲಿನಿಂದ ಕೆಳಗಿನ ಭಾಗಕ್ಕೆ ಬಣ್ಣವನ್ನು ಹಚ್ಚಿ.
ಉಗುರಿನ ಒಳಗಿರುವ ಕೊಳಕನ್ನು ಸ್ವಚ್ಛಗೊಳಿಸಲು ಬ್ರಷ್ ಬಳಸಬಹುದು. ಉಗುರು ಉದ್ದವಾಗಿದೆ ಎಂದ ಮೇಲೆ ಅದರಲ್ಲಿ ಕೆಸರು ಸೇರಿರಲೇಬೇಕು. ಕೆಲವರು ಉಗುರು ಸ್ವಚ್ಛಗೊಳಿಸಲು ಬ್ಯೂಟಿ ಪಾರ್ಲರ್ ಹೋಗುವ ಬದಲು ಸ್ನಾನ ಮಾಡುವ ಮುನ್ನ ಬ್ರಷ್ ಮೂಲಕ ಉಗುರನ್ನು ಸ್ವಚ್ಛಗೊಳಿಸಿಕೊಳ್ಳಬಹುದು.
ಐಬ್ರೋ ದಟ್ಟವಾಗಿಲ್ಲದವರು ಈ ಬ್ರಷ್ ಮೂಲಕ ಮಸಾಜ್ ಮಾಡಿಕೊಳ್ಳಬಹುದು. ಬ್ರಷ್ ಗೆ ಹರಳೆಣ್ಣೆ ಹಾಕಿಕೊಂಡು ಐಬ್ರೋ ಮೇಲೆ ನಿಧಾನವಾಗಿ ಬ್ರಷ್ ಮಾಡುತ್ತಿದ್ದರೆ ಕೂದಲು ದಟ್ಟವಾಗಿ ಬರುತ್ತದೆ.
ಇನ್ನು ಆಭರಣ ಕೊಳಕಾಗಿದ್ದಾಗ ಬ್ರಷ್ ಮೂಲಕ ಸುಲಭವಾಗಿ ಸ್ವಚ್ಛಗೊಳಿಸಬಹುದು. ಮೊದಲು ಉಗುರು ಬೆಚ್ಚಗಿನ ನೀರಿನಲ್ಲಿ ಆಭರಣವನ್ನು ನೆನೆಸಿಡಿ. ನಂತರ ಬ್ರಷ್ ಮೂಲಕ ಕ್ಲೀನ್ ಮಾಡಿ.
ಬಾಚಣಿಕೆ ಕೊಳಕಾಗಿದ್ದರೆ ಕೂದಲ ಹಲವು ಸಮಸ್ಯೆಗಳು ಕಾಡುವುದು ನಿಶ್ಚಿತ, ಆದಕಾರಣ ಬ್ರಷ್ ಮೂಲಕ ಬಾಚಣಿಕೆಯನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.
ಟೋಸ್ಟರ್ಸ್. ಮೈಕ್ರೋವೇವ್ಗಳು. ಕಾಫಿ ಯಂತ್ರಗಳು. ತಲುಪಲು ಕಷ್ಟವಾದ ಸ್ಥಳಗಳಲ್ಲಿ ಬೀಳುವ ತುಂಡುಗಳು ಮತ್ತು ಕಲೆಗಳನ್ನು ಸ್ವಚ್ಛಗೊಳಿಸಲು ಟೂತ್ ಬ್ರಷ್ ಅನ್ನು ಬಳಸಿ.
ಅದಲ್ಲದೆ ಮನೆಯ ಟೈಲ್ಸ್ ಮಧ್ಯೆ, ಶೋಕೇಸ್, ಕಿಟಕಿ ಸಂದಿಯಲ್ಲಿರುವ ಕೊಳಕನ್ನು ತೆಗೆಯಲು ಹಳೆ ಟೂತ್ ಬ್ರಷ್ ಉಪಯೋಗಿಸಬಹುದು.
ನಿಮ್ಮ ಶೂಗಳ ಅಡಿಭಾಗದಲ್ಲಿ ಕೊಳಕು ಮತ್ತು ಕೆಸರು ಸಿಲುಕಿಕೊಂಡಾಗ, ಅದನ್ನು ನಿಮ್ಮ ಹಲ್ಲುಜ್ಜುವ ಬ್ರಷ್‌ನಿಂದ ಸಡಿಲಗೊಳಿಸಿ.