Tv Screen Cleaning: ಟಿವಿ ಸ್ಕ್ರೀನ್ ಒರೆಸುವಾಗ ಮಿಸ್ ಮಾಡ್ದೆ ಈ ಟಿಫ್ಸ್ ಫಾಲೋ ಮಾಡಿ – ಫಳ, ಫಳ ಹೊಳೆಯೋದನ್ನು ನೋಡಿ

Lifestyle home cleaning tips best tips to clean tv screen cleaning tips

Tv Screen Cleaning: ಸ್ಮಾರ್ಟ್ ಯುಗದಲ್ಲಿ ಬಹುತೇಕರ ಮನೆಯಲ್ಲಿ ವಾಲ್‌ ಮೌಂಟೆಡ್‌ ಎಲ್‌ಇಡಿ ಟಿವಿ ಇದ್ದೇ ಇರುತ್ತದೆ. ಈ ಸ್ಮಾರ್ಟ್ ಟಿವಿಗಳು ಹಲವು ಫೀಚರ್ ಒಳಗೊಂಡಿದ್ದು, ಸಕಲ ಸೌಲಭ್ಯಗಳೂ ಒಂದೇ ಪರಿಕರದಲ್ಲಿ ಸಿಗುವಂತೆ ಮಾಡುತ್ತವೆ. ಜೊತೆಗೆ ಮನೆಯ ಅಂದ ಹೆಚ್ಚಿಸುತ್ತದೆ. ಆದ್ರೆ ಎಲ್ಇಡಿ ಟಿವಿ ಸ್ಕ್ರೀನ್‌ ಅನ್ನು ಆಗಾಗ ಸ್ವಚ್ಛ (Tv Screen Cleaning) ಮಾಡುತ್ತಲೇ ಇರಬೇಕು. ಅಂದರೆ ಕನಿಷ್ಟ 1ಅಥವಾ 2 ವಾರಗಳಲ್ಲಿ ಸ್ವಚ್ಛ ಮಾಡಬೇಕು. ಆದರೆ ಸ್ವಚ್ಛ ಮಾಡಲು ಮೊದಲು ಯಾವುದೇ ಕಾರಣಕ್ಕೂ ಈ ಅಂಶಗಳನ್ನು ಮರೆಯಬಾರದು.

ಹೌದು, ಟಿವಿ ಪರದೆಯನ್ನು ಸ್ವಚ್ಛಗೊಳಿಸುವಾಗ ಒಂದೇ ಡೈರೆಕ್ಷನ್‌ನಲ್ಲಿ ಹಲವಾರು ಬಾರಿ ಒರೆಸಬೇಡಿ. ಹಾಗೆ ಮಾಡುವುದರಿಂದ ಪರದೆಯ ಮೇಲೆ ಗೀರುಗಳು ಉಂಟಾಗಬಹುದು. ಇದನ್ನು ತಪ್ಪಿಸಲು, ಅಡ್ಡಲಾಗಿ ಅಥವಾ ಲಂಬವಾಗಿ ಒರೆಸಿ. ಆದರೆ ಅತಿಯಾಗಿ ಶಕ್ತಿ ಹಾಕಿ ಒರೆಸುವುದು ಖಂಡಿತ ತಪ್ಪು.

ಇನ್ನು ಟಿವಿ ಸ್ವಚ್ಛ ಮಾಡಲು ಆರಂಭಿಸುವ ಮುನ್ನ ಟಿವಿಗೆ ಕನೆಕ್ಟ್‌ ಇರುವ ಎಲ್ಲಾ ಸ್ವಿಚ್‌ಗಳನ್ನು ಆಫ್‌ ಮಾಡಬೇಕು. ಇದರಿಂದ ವಿದ್ಯುತ್‌ ಅಪಾಯಗಳನ್ನು ತಪ್ಪಿಸಬಹುದು.

ಎಲ್‌ಸಿಡಿ, ಎಲ್‌ಇಡಿ ಟಿವಿ ಸ್ಕ್ರೀನ್‌ಗಳ ಮೇಲಿನ ಸಣ್ಣ ಧೂಳಿನ ಕಿಡಿಯು ಟಿವಿ ಪರದೆ ಸ್ಕ್ರ್ಯಾಚ್‌ ಉಂಟಾಗಲು ಕಾರಣವಾಗಬಹುದು. ಹಾಗಾಗಿ ಎಲ್‌ಇಡಿ, ಒಎಲ್ಇಡಿ ಮತ್ತು ಪ್ಲಾಸ್ಮಾ ಟಿವಿಗಳ ಪರದೆಗಳನ್ನು ಸ್ವಚ್ಛಗೊಳಿಸಲು ಮೈಕ್ರೋಫೈಬರ್ ಬಟ್ಟೆಯನ್ನು ಬಳಸುವುದು ಸೂಕ್ತ.
ಆದ್ದರಿಂದ ಟಿ.ವಿ ಪರದೆಯ ಮೂಲೆ ಹಾಗೂ ಅಂಚುಗಳನ್ನು ಸ್ವಚ್ಛಗೊಳಿಸಲು ಮೈಕ್ರೋಫೈಬರ್ ಬಟ್ಟೆ ಅವಶ್ಯ. ಆದರೆ ಈ ಜಾಗಗಳನ್ನು ಗಟ್ಟಿಯಾಗಿ ಪ್ರೆಸ್‌ ಮಾಡಿ ಒರೆಸಬಾರದು ಎಂಬುದು ನೆನಪಿರಲಿ.

ಕೆಲವರು ಟಿವಿ ಪರದೆಯನ್ನು ಸ್ವಚ್ಛಗೊಳಿಸಲು ರಾಸಾಯನಿಕ ಸ್ಪ್ರೇ ಬಳಸುತ್ತಾರೆ. ಆದರೆ ಇದರ ಬಳಕೆಗೂ ಮುನ್ನ ಗುಣಮಟ್ಟ ಪರಿಶೀಲಿಸಿ. ಖರೀದಿಗೂ ಮುನ್ನ ಎಚ್ಚರ ವಹಿಸಿ. ಅದನ್ನು ನೇರವಾಗಿ ಪರದೆಗೆ ಸಿಂಪಡಿಸಬೇಡಿ. ಒರೆಸುವ ಬಟ್ಟೆಗೆ ಸಿಂಪಡಿಸಿ ನಂತರ ಟಿವಿ ಪರದೆಯನ್ನು ಒರೆಸಿ.

ಸ್ಪ್ರೇಯಿಂದ ಒರೆಸುವ ಮೊದಲು ಪೇಪರ್‌ ಅಥವಾ ಟಿಶ್ಯೂ ಸಹಾಯದಿಂದ ಧೂಳು ಒರೆಸಿಕೊಳ್ಳಿ. ಟಿವಿ ಸ್ಕ್ರೀನ್‌ ಜೊತೆಗೆ ಸ್ಪೀಕರ್‌ಗಳು ಹಾಗೂ ಪೋರ್ಟ್‌ಗಳ ಧೂಳನ್ನು ಸ್ವಚ್ಛಗೊಳಿಸುವುದು ಒಳ್ಳೆಯದು.

ಇದನ್ನೂ ಓದಿ: ದೋಸೆ ಮಾಡುವಾಗ ತವಾಕ್ಕೆ ಅಂಟ್ಕೊಳ್ಳುತ್ತಾ ?! ಹಾಗಿದ್ರೆ ಈ ಟ್ರಿಕ್ಸ್ ಬಳಸಿ ಗರಿ ಗರಿಯಾದ ದೋಸೆ ಮಾಡಿ

Leave A Reply

Your email address will not be published.