Stain Removal Tips: ಬಟ್ಟೆಮೇಲಿನ ಕೆಲವು ಕಲೆಗಳು ಹೋಗ್ತಾನೇ ಇಲ್ವಾ?! ತೊಲಗಿಸಲು ಇಲ್ಲಿದೆ ಸರಳ ಉಪಾಯ !!

Dress stain removal Tips How to remove stains in clothes easy way

Stain Removal Tips: ನಾವು ಚೆಂದದ ಬಟ್ಟೆಯನ್ನು(Dress) ಧರಿಸಿಕೊಂಡು ಹೊರಗೆ ಹೋದ(Out side) ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ನಾನಾ ಕಾರಣಗಳಿಂದ ನಮ್ಮ ಬಟ್ಟೆಯ ಮೇಲೆ ಏನಾದರೂ ಬಿದ್ದರೆ ಸಹಜವಾಗಿ ಕಿರಿಕಿರಿಯಾಗುತ್ತದೆ. ಕಾಫಿ(coffe) ಕುಡಿಯುವಾಗ ಬಿದ್ದ ಕಾಫಿ ಕಲೆಯಾಗಿರಬಹುದು. ಇಲ್ಲವೇ ಹೋಟೆಲ್ ನಲ್ಲಿ(Hotel) ತಿನ್ನುವ ಆಹಾರ(Food) ಮೈಮೇಲೆ ಬಿದ್ದು ಆಗುವ ಕಲೆಯಿರ ಬಹುದು.ಆದರೆ, ಈ ಕಲೆಯನ್ನು(Mark) ಹೇಗೆ ತೊಡೆದು ಹಾಕುವುದು ಎಂಬುದೇ ಹೆಚ್ಚಿನವರಿಗೆ ದೊಡ್ದ ತಲೆ ನೋವಾಗಿ ಪರಿಣಮಿಸುತ್ತದೆ. ಬಟ್ಟೆಗಳ ಮೇಲಿನ ಕಲೆಗಳನ್ನು(Stain Removal Tips)ಸುಲಭವಾಗಿ ತೆಗೆದುಹಾಕಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!!

 

ಎಣ್ಣೆ ಅಥವಾ ಮಸಾಲೆ ಕಲೆಗಳನ್ನು ತೆಗೆಯುವುದು ಹೇಗೆ?
ಅಡುಗೆ ಮಾಡುವಾಗ ಇಲ್ಲವೇ ಆಹಾರ ಸೇವನೆ ಮಾಡುವಾಗ ಬಟ್ಟೆಗಳಲ್ಲಿ ಎಣ್ಣೆ ಮತ್ತು ಮಸಾಲೆಗಳ ಕಲೆಯಾಗುತ್ತವೆ. ಬಟ್ಟೆಯಲ್ಲಿ ಎಣ್ಣೆಯ ಕಲೆಯಾಗಿದ್ದರೆ, ಎರಡು ಚಮಚ ಅಡಿಗೆ ಸೋಡಾಕ್ಕೆ ಒಂದು ಚಮಚ ನೀರನ್ನು ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಬಟ್ಟೆಯಲ್ಲಿನ ಕಲೆಯ ಮೇಲೆ ಅನ್ವಯಿಸಿ, ಸ್ವಲ್ಪ ಹೊತ್ತು ಹಾಗೇ ಬಿಟ್ಟು ಬ್ರಶ್ನಿಂದ ಉಜ್ಜಿದರೆ ಕಾಲೆ ಹೋಗಲಿದೆ.
ಟೀ ಕಾಫಿ ಕಲೆಗಳನ್ನು ತೆಗೆದುಹಾಕುವುದು ಹೇಗೆ?
ಟೀ ಕಾಫಿಯ ಕಲೆಗಳನ್ನು ಹೋಗಲಾಡಿಸಲು ಬಟ್ಟೆಗೆ ಟೆರ್ಜೆಂಟ್ ಪೌಡರ್ ಇಲ್ಲವೇ ಸೋಪು ಹಚ್ಚಿ ಉಗುರು ಬೆಚ್ಚಗಿನ ನೀರಿನಲ್ಲಿ 5 ರಿಂದ 10 ನಿಮಿಷಗಳ ಕಾಲ ನೆನೆಸಿಡಿ. ಇದಾದ ಬಳಿಕ ಶುದ್ಧ ನೀರಿನಿಂದ ಬಟ್ಟೆಯನ್ನು ತೊಳೆಯಿರಿ. ಇದರಿಂದ ಕಲೆಗಳು ನಿವಾರಣೆಯಾಗುತ್ತದೆ. ಇದಲ್ಲದೇ, ಬಟ್ಟೆಯನ್ನು ಸ್ವಲ್ಪ ನೀರಿನಿಂದ ಅದ್ದಿ, ಕಲೆಯಿರುವ ಪ್ರದೇಶಕ್ಕೆ ಅಡಿಗೆ ಸೋಡಾ ಹಾಕಿ, ಸ್ವಲ್ಪ ಉಜ್ಜಿಕೊಂಡು 15 ನಿಮಿಷಗಳ ಕಾಲ ಬಿಡಬೇಕು. ಈ ರೀತಿ ಮಾಡುವುದರಿಂದ ಅಡಿಗೆ ಸೋಡಾ ಬಟ್ಟೆಯ ಕಲೆಗಳನ್ನು ಹೀರಿಕೊಳ್ಳುತ್ತವೆ. ಅದನ್ನು ಶುದ್ಧ ನೀರಿನಿಂದ ತೊಳೆಯಬಹುದು.

ಚಾಕೋಲೇಟ್, ಐಸ್ಕ್ರೀಮ್ ಕಲೆಗಳನ್ನು ಹೇಗೆ ತೆಗೆಯುವುದು?
ಬಟ್ಟೆಯ ಮೇಲೆ ಚಾಕಲೇಟ್ ಬಿದ್ದು, ಕಲೆಯಾದರೆ ತಕ್ಷಣವೇ ಆ ಕಲೆಗಳನ್ನು ತೆಗೆದುಹಾಕಲು ಟಾಲ್ಕಮ್ ಪೌಡರ್ ಹಾಕಬೇಕು. ಇದಾದ ಬಳಿಕ ಬೆಚ್ಚಗಿನ ನೀರಿನಿಂದ ಆ ಬಟ್ಟೆಯನ್ನು ತೊಳೆಯಬೇಕು. ಒಂದು ವೇಳೆ, ಬಟ್ಟೆಗಳಲ್ಲಿ ಐಸ್ಕ್ರೀಮ್ ಕಲೆಯಿದ್ದರೆ, ಅಮೋನಿಯಾ ಲಿಕ್ವಿಡ್ ಬಳಸಬೇಕು. ಈ ಲಿಕ್ವಿಡ್ ಅನ್ನು ಕಲೆಯಿರುವ ಜಾಗಕ್ಕೆ ಹಾಕಿ ನಿಧಾನವಾಗಿ ಉಜ್ಜಬೇಕು. ಹೀಗೆ ಮಾಡುವುದರಿಂದ ಕಲೆಯನ್ನು ತೆಗೆದು ಹಾಕಬಹುದು.

ಬಟ್ಟೆಯಿಂದ ರಕ್ತದ ಕಲೆಗಳನ್ನು ತೆಗೆಯುವುದು ಹೇಗೆ?
ಒಂದು ವೇಳೆ ಬಟ್ಟೆಗಳಲ್ಲಿ ರಕ್ತದ ಕಲೆಯಾದರೆ, ಆ ಬಟ್ಟೆಯನ್ನು ಚೆನ್ನಾಗಿ ನೀರಿನಲ್ಲಿ ತೊಳೆದು, ನಂತರ ರಕ್ತದ ಕಲೆಯಿರುವ ಜಾಗದಲ್ಲಿ ನಿಂಬೆ ರಸವನ್ನು ಹಚ್ಚಿ, 15 ನಿಮಿಷಗಳ ಕಾಲ ನೆನೆಸಿಡಿ. ಇದಾದ ಬಳಿಕ ಚೆನ್ನಾಗಿ ಬಟ್ಟೆಯನ್ನು ಒಗೆಯಬೇಕು. ಹೀಗೆ ಮಾಡುವುದರಿಂದ ಕಲೆ ನಿವಾರಣೆಯಾಗುತ್ತದೆ.

ಶಾಯಿ ಕಲೆಗಳನ್ನು ತೆಗೆದುಹಾಕುವ ವಿಧಾನ:
ಬಟ್ಟೆಯಲ್ಲಿ ಶಾಯಿ ಕಲೆಗಳಾದರೆ, ಅದನ್ನು ಸ್ವಚ್ಛಗೊಳಿಸಲು ನೀವು ಡೆಟಾಲ್ ಬಳಕೆ ಮಾಡಬಹುದು. ಇದಕ್ಕಾಗಿ ಹತ್ತಿ ಉಂಡೆಯನ್ನು ಡೆಟಾಲ್ನಲ್ಲಿ ನೆನೆಸಿ, ಕಲೆಯಿರುವ ಸ್ಥಳದಲ್ಲಿ ಅದನ್ನು ಉಜ್ಜಿ, ಬಟ್ಟೆ ತೊಳೆಯಬೇಕು. ಇದರಿಂದ ಕಲೆಯನ್ನು ಸುಲಭವಾಗಿ ತೆಗೆದುಹಾಕಬಹುದು. ಕಲೆಗಳನ್ನು ತೆಗೆದುಹಾಕಲು ಟೂತ್ಪೇಸ್ಟ್ ಬಳಕೆ ಮಾಡಬಹುದು. ಈ ನಿಟ್ಟಿನಲ್ಲಿ ಮೊದಲು ಶಾಯಿ ಕಲೆ ಮೇಲೆ ಟೂತ್ಪೇಸ್ಟ್ ಹಾಕಿ 10 ರಿಂದ 15 ನಿಮಿಷಗಳವರೆಗೆ ಬಿಡಿ. ಆ ಬಳಿಕ ಬಟ್ಟೆಯನ್ನು ಲಿಕ್ವಿಡ್ ಡಿಟೆರ್ಜಂಟ್ ಬಳಸಿ ಸ್ವಚ್ಛಗೊಳಿಸಬಹುದು.

 

ಇದನ್ನು ಓದಿ: Rain holiday: ಹೆಚ್ಚಿದ ಮಳೆ – ಶಾಲೆಗಳಿಗೆ ರಜೆ ಘೋಷಣೆ !!

Leave A Reply

Your email address will not be published.