Kitchen Tips: ಅಡುಗೆ ಮನೆ ತುಂಬಾ ಚಿಕ್ಕದು ಅನಿಸುತ್ತಾ ?! ಚಿಂತೆಯೇ ಬೇಡ, ಇಲ್ಲಿ ಹೇಳಿದಂತೆ ಜೋಡಿಸಿ, ಊಹೆಗೂ ನಿಲುಕದ ಜಾಗ ಪಡೆದು ಆನಂದಿಸಿ!!
Kitchen Tips best way to create more space in kitchen
Kitchen Tips: ಅಡುಗೆಮನೆಯ (Kitchen)ವಸ್ತುಗಳನ್ನು ಸರಿಯಾದ ಜಾಗದಲ್ಲಿ ಮತ್ತು ಕ್ರಮದಲ್ಲಿ ಜೋಡಿಸುವುದು ಕೆಲವೊಮ್ಮೆ ಸವಾಲಿನ ಕೆಲಸ ಎನಿಸದೆ ಇರದು. ಅದರಲ್ಲಿಯೂ ಚಿಕ್ಕ ಅಡುಗೆಮನೆಯನ್ನು ಜೋಡಿಸಲು ಕೆಲ ಹೆಂಗೆಳೆಯರು ಪರದಾಡುವುದು ಸಾಮಾನ್ಯ. ನೀವು ಚಿಕ್ಕ ಮನೆಯಲ್ಲಿ ವಾಸಿಸುತ್ತಿದ್ದರೆ, ನಿಮ್ಮ ಅಡುಗೆಮನೆಯನ್ನು ಜಾಣ್ಮೆಯಿಂದ ಜೋಡಿಸಿಕೊಳ್ಳಬೇಕಾಗುತ್ತದೆ. ಹಾಗಿದ್ರೆ, ಅಡುಗೆಮನೆ(Kitchen Tips) ಜೋಡಿಸುವುದು ಹೇಗಪ್ಪಾ ಎಂದು ಯೋಚಿಸುತ್ತಿದ್ದರೆ ನೀವು ಇದನ್ನೊಮ್ಮೆ ಟ್ರೈ ಮಾಡಿದರೆ, ಅಡುಗೆ ಮನೆಯಲ್ಲಿ ಬೇಕಾದಷ್ಟು ಜಾಗ ನಿಮಗೆ ಸಿಗಲಿದೆ.
ಅಡುಗೆ ಮನೆ ಜೋಡಿಸಲು ಇಲ್ಲಿವೆ ಕೆಲವು ಸರಳ ಟಿಪ್ಸ್!
* ನಿಮ್ಮಲ್ಲಿರುವ ವಸ್ತುಗಳಿಗೆ ಅನುಗುಣವಾಗಿ ರಾಡ್, ಹುಕ್‌ಗಳನ್ನು ಅಳವಡಿಸಬಹುದು.
* ಹೆಚ್ಚಿನ ಸ್ಥಳಾವಕಾಶ ಪಡೆಯಲು ಪ್ರತಿ ಗೋಡೆ, ಕಟ್ಟೆ ಮತ್ತು ಕಟ್ಟೆಯ ಕೆಳಗಿನ ಜಾಗವನ್ನು ಪರಿಗಣಿಸಬಹುದು.
* ಡ್ರಾಯರ್‌ಗಳಲ್ಲಿರುವ ಅನಗತ್ಯ ವಸ್ತುಗಳನ್ನು ತೆಗೆದು ಅವಶ್ಯಕ ವಸ್ತುಗಳನ್ನು ಮಾತ್ರ ಅಲ್ಲಿ ಜೋಡಿಸಿ ಇದಲ್ಲದೆ, ಅಡುಗೆ ಮಾಡಲು ಬೇಕಾದ ಮತ್ತು ಹ್ಯಾಂಡಲ್‌ಗಳಿರುವ ವಸ್ತುಗಳನ್ನು ನೇತುಹಾಕಿ.
* ಮಣ್ಣಿನ ಮಡಿಕೆಗಳಿಗೆ ಮತ್ತು ಪಿಂಗಾಣಿ ಪ್ಲೇಟ್‌ಗಳನ್ನಿಡಲು ಗೋಡೆಗೆ ಕಪಾಟು ಅಳವಡಿಸಿಕೊಳ್ಳಬಹುದು.
* ಚಾಕುಗಳನ್ನು ಮ್ಯಾಗ್ನೆಟಿಕ್ ಪಟ್ಟಿಗೆ ಸಿಕ್ಕಿಸಿದರೆ ನೋಡಲು ಚೆಂದ ಕಾಣುವ ಜೊತೆಗೆ ಜಾಗ ಕೂಡ ಉಳಿಯಲಿದೆ.
* ಕಿರಿದಾದ ಜಾಗಗಳಲ್ಲಿ ಲೋಹದ ಇಲ್ಲವೇ ಮರದ ಓಪನ್ ಶೆಲ್ಫಗಳನ್ನು ಅಳವಡಿಸಬಹುದು.
* ಅಡುಗೆಮನೆಯಲ್ಲಿರುವ ಫ್ರಿಡ್ಜ್‌ನ ಮೇಲಿನ ಜಾಗವನ್ನು ಸಹ ಸಮರ್ಪಕವಾಗಿ ಬಳಸಿಕೊಳ್ಳಬಹುದು.
* ಅಪರೂಪಕ್ಕೊಮ್ಮೆ ಬಳಸುವ ವಸ್ತುಗಳನ್ನು ಬೇರೆ ಜಾಗದಲ್ಲಿರಿಸುವ ಅಭ್ಯಾಸ ಮಾಡಿಕೊಳ್ಳಿ. ಇದರ ಜೊತೆಗೆ ದಿನನಿತ್ಯ ವಸ್ತುಗಳ ಜೊತೆ ಅವುಗಳನ್ನು ಸೇರಿಸಿಬೇಡಿ
* ಪಾತ್ರೆಗಳನ್ನು ಜೋಡಿಸಲು ಕಿಟಕಿಗೆ ಶೆಲ್ಫ್ ಹಾಕಿಸಿದರೆ, ತೊಳೆದ ಒದ್ದೆ ಪಾತ್ರೆಗಳನ್ನು ಅಲ್ಲಿಡಬಹುದು.
* ಅಡುಗೆಮನೆಯಲ್ಲಿ ಒಂದು ಎತ್ತರದ ಗ್ಲಾಸ್ ಕಪಾಟನ್ನು ಅಳವಡಿಸಿದರೆ ನಿಮ್ಮ ಗ್ಲಾಸ್ ಪ್ಲೇಟ್, ಬೌಲ್, ಪಿಂಗಾಣಿಯ ಚಹಾ ಕಪ್, ಸಾಸರ್, ಪ್ಲೇಟ್‌ಗಳನ್ನು ಅದರಲ್ಲಿ ಇರಿಸಬಹುದು.
* ಅಡುಗೆ ಕೋಣೆ ಚಿಕ್ಕದಿದ್ದಾಗ ಬುಟ್ಟಿಗಳಲ್ಲಿ ಹಣ್ಣು, ತರಕಾರಿಗಳನ್ನಿಡುವುದರ ಬದಲಿಗೆ ಅವುಗಳನ್ನು ಒಂದು ಮೂಲೆಯಲ್ಲೋ ಇಲ್ಲವೇ ಗೋಡೆಗೋ ತೂಗು ಹಾಕಬಹುದು. ಹೀಗಾಗಿ, ಲೇಯರ್‌ಗಳಿರುವ ಹ್ಯಾಂಗಿಂಗ್ ಚೀಲಗಳನ್ನು ಅಳವಡಿಸಿಕೊಳ್ಳಬಹುದು.
* ನಿಮ್ಮ ಚಿಕ್ಕ ಅಡುಗೆಮನೆಯಲ್ಲಿರುವ ಬಾಗಿಲನ್ನು ಕೂಡ ವಸ್ತುಗಳ ಸಂಗ್ರಹಣೆಗಾಗಿ ಬಳಕೆ ಮಾಡಬಹುದು. ಬಾಗಿಲಿಗೆ ವಸ್ತುಗಳನ್ನು ನೇತುಹಾಕಲು ಹುಕ್ ಇಲ್ಲವೇ ಶಲ್ಫ್ ಅಳಡಿಸಿದರೆ ಅಡುಗೆಮನೆಗೆ ಅವಶ್ಯಕವಾದ ಟವಲ್, ಸ್ಪೋಂಜ್, ಪೇಪರ್ ರೋಲ್, ಟಿಶ್ಯು ಪೇಪರ್‌ಗಳನ್ನು ಇರಿಸಬಹುದು.