Agricultural land: ಕೃಷಿ ಭೂಮಿಯಲ್ಲಿ ಮನೆ, ಕಟ್ಟಡ ಕಟ್ಟೋರಿಗೆ ಬಂತು ಹೊಸ ರೂಲ್ಸ್ – ಈ ಕೆಲಸ ಇನ್ನು ಕಡ್ಡಾಯ !!
Karnataka govt news construction of house and building in agricultural land new rules latest news
Agricultural land : ಜಮೀನು ಖರೀದಿ (property purchase) ಇಲ್ಲವೇ ಜಮೀನನ್ನು ಪರಿವರ್ತಿಸಿ ಆ ಜಮೀನಿನಲ್ಲಿ ಕಟ್ಟಡ ನಿರ್ಮಾಣ (building construction) ಮಾಡುವ ವಿಷಯದ ಕುರಿತು ಸರ್ಕಾರ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ.
ಭೂಕಬಳಿಕೆ ಹಾಗೂ ಭೂ ಪರಿವರ್ತನೆ ಬಗ್ಗೆ ರಾಜ್ಯ ಪ್ರಾಧಿಕಾರದಲ್ಲಿ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಹೈಕೋರ್ಟ್(High court) ಒಂದು ಕೇಸ್ ವಿಚಾರವಾಗಿ ಮಹತ್ವದ ತೀರ್ಪನ್ನು ಪ್ರಕಟಿಸಿದೆ. ಕೃಷಿ ಭೂಮಿಯನ್ನು( Agricultural land) ಲೇಔಟ್ ಅಥವಾ ಮನೆ ನಿರ್ಮಾಣ ಮಾಡುವುದಕ್ಕೆ ಒಪ್ಪಿಗೆ ನೀಡಲಾಗುವುದಿಲ್ಲ. ಒಂದು ವೇಳೆ ಹಾಗೆ ನಿರ್ಮಾಣ ಮಾಡುವುದಾದರೆ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತನೆ ಮಾಡಿಕೊಳ್ಳಬೇಕು ಇದಕ್ಕೆ ಜಿಲ್ಲಾಧಿಕಾರಿಗಳ ಬಳಿ ಅನುಮತಿ ಪಡೆದುಕೊಂಡು ಆನಂತರ ಸೆಕ್ಷನ್ 14ರ ಅಡಿಯಲ್ಲಿ ಭೂಕಬಳಿಕೆಯ ಬಗ್ಗೆ ಪ್ರಾಧಿಕಾರದ ಅನುಮತಿ ಪಡೆಯಬೇಕು. ಈ ಹಿಂದೆಯೇ ಕೃಷಿಭೂಮಿಯನ್ನು ಪರಿವರ್ತಿಸಿ ಕೃಷಿಯೇತರ ಭೂಮಿಯಾಗಿ ಬಳಸಿಕೊಂಡಿದ್ದರೆ ಅದಕ್ಕೆ ಅನುಮತಿ ಪಡೆಯದಿದ್ದರೆ ಈಗಲೆ ಪಡೆದುಕೊಳ್ಳಬೇಕು. ಹೀಗಾಗಿ, ಸ್ಥಳೀಯ ಪ್ರಾಧಿಕಾರದ ಅನುಮತಿ ಪಡೆದುಕೊಂಡು ಕೃಷಿ ಭೂಮಿಯನ್ನು ಪರಿವರ್ತಿಸಿಕೊಳ್ಳಬೇಕು ಎಂದು ಹೈಕೋರ್ಟ್ ನಿರ್ಣಯ ಕೈಗೊಂಡಿದೆ.
ಮಾಸ್ಟರ್ ಪ್ಲಾನ್ (master plan) ವ್ಯಾಪ್ತಿಗೆ ಒಳಪಡುವ ಭೂಮಿಯನ್ನ ಪರಿವರ್ತಿಸುವ ವಿಚಾರವಾಗಿ ಹೈಕೋರ್ಟ್ ಗೆ ಹೋದ ಕೇಸ್ ಒಂದರಲ್ಲಿ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಲೇಔಟ್ ಪ್ಲಾನಿಂಗ್ (layout planning) ಕುರಿತು ಅಪ್ರುವಲ್ ಸಿಗದೇ ಇದ್ದ ಹಿನ್ನೆಲೆ ಕರ್ನಾಟಕ ರಾಜ್ಯ ಮಂಡ್ಯ ಗೃಹ ನಿರ್ಮಾಣ ಸಹಕಾರ ಸಂಘ ಮಂಡ್ಯ (Mandya) ಅಭಿವೃದ್ಧಿ ಯೋಜನಾಧಿಕಾರದ ವಿರುದ್ಧ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಕುರಿತು ಹೈಕೋರ್ಟ್ ಯೋಜನಾ ಪ್ರಾಧಿಕಾರವನ್ನು ಪ್ರಶ್ನೆ ಮಾಡಿದೆ. ಕೃಷಿಯೇತರ ಭೂಮಿಯನ್ನಾಗಿ ಕೃಷಿ ಭೂಮಿಯನ್ನು ಪರಿವರ್ತನೆ ಮಾಡುವುದಾದರೆ, ಭೂ ಕಂದಾಯ ಕಾಯ್ದೆ 1965 ಸೆಕ್ಷನ್ 95ರ ಅಡಿಯಲ್ಲಿ ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕು. ಇದಲ್ಲದೇ, ಸೆಕ್ಷನ್ 14 ಎ ಅಡಿಯಲ್ಲಿ ಕೆ ಟಿ ಸಿ ಪಿ ಕಾಯ್ದೆಯ ನಿಯಮಗಳನ್ನು ಕೂಡ ಪಾಲಿಸಬೇಕೆಂದು ಸೂಚಿಸಿದೆ.
ಇದನ್ನೂ ಓದಿ: KSRTC ನೌಕರರಿಗೆ ಮತ್ತೊಂದು ಗುಡ್ ನ್ಯೂಸ್- ನಿಮಗಿನ್ನು ಈ ಸೌಲಭ್ಯ ಉಚಿತ !! ಸರ್ಕಾರದ ಹೊಸ ಘೋಷಣೆ