Pedicure At Home: ‘ಪೆಡಿಕ್ಯೂರ್’ ಮಾಡಲು ಬ್ಯೂಟಿಪಾರ್ಲರ್ ಹೋಗುತ್ತೀರಾ?! ಇನ್ಮುಂದೆ ಮನೆಯಲ್ಲೇ ಕೂತು ಬಾಳೆಹಣ್ಣಿನ ಸಿಪ್ಪೆಯಿಂದ ಹೀಗ್ ಮಾಡಿ !!

Make a 'pedicure' at home with a banana peel

Pedicure At Home: ಬಹುತೇಕರಿಗೆ ತಮ್ಮ ಪಾದಗಳು ಚೆನ್ನಾಗಿ ಇಲ್ಲ ಎಂಬ ಕೊರಗು ಇರುತ್ತದೆ. ಇದಕ್ಕಾಗಿ ಬ್ಯೂಟಿ ಪಾರ್ಲರ್ ಅಥವಾ ಸಲೂನ್ ಗೆ ಹೋಗಿ ತಮ್ಮ ಪಾದಗಳನ್ನು ಪೆಡಿಕ್ಯೂರ್ ಮಾಡಿಸುತ್ತಾರೆ. ಆದರೆ ನೀವು ಯಾವುದೇ ಖರ್ಚಿಲ್ಲದೇ ಮನೆಯಲ್ಲಿಯೇ ಸುಲಭವಾಗಿ ಸುಂದರವಾದ ಪಾದಗಳನ್ನು ಪಡೆಯಬಹುದು.

ಮುಖ್ಯವಾಗಿ ಅಗ್ಗದ ಹಣ್ಣುಗಳಲ್ಲಿ ಬಾಳೆಹಣ್ಣು ಕೂಡ ಒಂದು. ಬಹುತೇಕರು ಬಾಳೆಹಣ್ಣನ್ನು ತಿನ್ನುತ್ತಾರೆ. ತಿಂದ ನಂತರ ಅದರ ಸಿಪ್ಪೆಯನ್ನು ತಿಪ್ಪೆಗೆ ಎಸೆಯುತ್ತಾರೆ. ಆದರೆ ನೀವು ವೇಸ್ಟ್ ಅಂದುಕೊಂಡಿರುವ ಬಾಳೆಹಣ್ಣಿನ ಸಿಪ್ಪೆ ನಿಮ್ಮ ಪಾದಗಳನ್ನು ಸುಂದರಗೊಳಿಸುತ್ತದೆ.

ಹೌದು, ನೀವು ಪೆಡಿಕ್ಯೂರ್ ಮಾಡಿಸಿಕೊಳ್ಳಲು ಆಗಾಗ ಪಾರ್ಲರ್ಗೆ ಹೋಗುವವರಾಗಿದ್ದರೆ, ಇನ್ಮುಂದೆ ಹೋಗಬೇಡಿ. ಬದಲಿಗೆ ಮನೆಯಲ್ಲಿಯೇ ಸುಲಭವಾಗಿ ಬಾಳೆಹಣ್ಣಿನ ಸಿಪ್ಪೆಯಿಂದ ಪೆಡಿಕ್ಯೂರ್ (Pedicure At Home) ಮಾಡಿಕೊಳ್ಳಿ. ಇದು ಪಾದದ ತ್ವಚೆಯನ್ನು ಸ್ವಚ್ಛವಾಗಿಡುವುದರ ಜೊತೆಗೆ ಅದರಲ್ಲಿರುವ ಕೊಳೆಯೂ ಸಹ ಹೋಗುತ್ತದೆ. ಬಾಳೆಹಣ್ಣಿನ ಸಿಪ್ಪೆಯಿಂದ ಪೆಡಿಕ್ಯೂರ್ ಮಾಡುವುದರಿಂದ ಚರ್ಮವು ಮೃದು ಮತ್ತು ಸ್ವಚ್ಛವಾಗುತ್ತದೆ.

ಅನೇಕ ಮಂದಿ ಚಳಿಗಾಲದಲ್ಲಿ ಪಾದದ ಬಿರುಕುಗಳ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದರೆ ಬಾಳೆಹಣ್ಣಿನ ಸಿಪ್ಪೆಯನ್ನು ಪಾದದ ಮೇಲೆ ಉಜ್ಜಿ ಸ್ವಲ್ಪ ಹೊತ್ತು ಬಿಡಿ. ನಂತರ ಪಾದವನ್ನು ನೀರಿನಿಂದ ಸ್ವಚ್ಛಗೊಳಿಸಿ. ಹೀಗೆ ನಿಯಮಿತವಾಗಿ ಮಾಡುವುದರಿಂದ ನೀವು ಪ್ರಯೋಜನವನ್ನು ಪಡೆಯುತ್ತೀರಿ.

ಬಾಳೆಹಣ್ಣಿನ ಸಿಪ್ಪೆಯಿಂದ ಪೆಡಿಕ್ಯೂರ್ ಮಾಡಲು , ಮೊದಲು ಪಾದಗಳನ್ನು ಸ್ವಚ್ಛಗೊಳಿಸಿ. ನಂತರ ಬಾಳೆಹಣ್ಣಿನ ಸಿಪ್ಪೆಯಿಂದ ಪಾದಗಳ ಚರ್ಮವನ್ನು ಚೆನ್ನಾಗಿ ಉಜ್ಜಿ. ಹೀಗೆ ನಿಯಮಿತವಾಗಿ ಮಾಡುವುದರಿಂದ ಚರ್ಮದ ಸತ್ತ ಜೀವಕೋಶಗಳು ಮತ್ತು ಪಾದಗಳ ಕೊಳೆ ನಿವಾರಣೆಯಾಗುತ್ತದೆ ಮತ್ತು ಪಾದಗಳು ಸ್ವಚ್ಛವಾಗಿ ಕಾಣುತ್ತವೆ.

ಬಾಳೆಹಣ್ಣಿನ ಸಿಪ್ಪೆಯೊಂದಿಗೆ ಸ್ವಲ್ಪ ಅಡಿಗೆ ಸೋಡಾವನ್ನು ಬೆರೆಸಿ, ನಿಮ್ಮ ಪಾದಗಳನ್ನು ಉಜ್ಜಿ 5 ನಿಮಿಷಗಳ ಕಾಲ ಬಿಡಿ. ಈಗ ಸ್ವಲ್ಪ ಅಡಿಗೆ ಸೋಡಾವನ್ನು ನೀರಿನಲ್ಲಿ ಮಿಶ್ರಣ ಮಾಡಿ. ಸ್ವಲ್ಪ ಸಮಯದವರೆಗೆ ನಿಮ್ಮ ಪಾದಗಳನ್ನು ಅದರಲ್ಲಿ ನೆನೆಸಿ, ನಂತರ ಟವೆಲ್ನಿಂದ ಒರೆಸಿ, ಕ್ರೀಮ್ ಅಥವಾ ಮಾಯಿಶ್ಚರೈಸರ್ ಅನ್ನು ಹಚ್ಚಿ.

ಬಾಳೆಹಣ್ಣಿನ ಸಿಪ್ಪೆ, ಮೊಸರು, ಜೇನುತುಪ್ಪವನ್ನು ಮಿಕ್ಸಿಯಲ್ಲಿ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಪಾದಗಳು ಮತ್ತು ಕಾಲುಗಳಿಗೆ ಹಚ್ಚಿ ಸ್ವಲ್ಪ ಹೊತ್ತು ಬಿಡಿ. ನಂತರ ನಿಮ್ಮ ಪಾದಗಳನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಒಣ ಪಾದಗಳು ಮತ್ತು ಚರ್ಮವನ್ನು ರಕ್ಷಿಸಲು ಸ್ವಲ್ಪ ಎಣ್ಣೆ ಅಥವಾ ಮಾಯಿಶ್ಚರೈಸರ್ ಅನ್ನು ಹಚ್ಚಿ.

 

ಇದನ್ನು ಓದಿ: Bank Account: ಈ ಬ್ಯಾಂಕಲ್ಲಿ ಖಾತೆ ಹೊಂದಿರೋರಿಗೆ ಸಿಹಿ ಸುದ್ದಿ- “
‘ಬ್ಯಾಲೆನ್ಸ್ ‘ ಕುರಿತು ಭರ್ಜರಿ ಘೋಷಣೆ ಹೊರಡಿಸಿದ ಬ್ಯಾಂಕ್

Leave A Reply

Your email address will not be published.