Sandalwood Actress Amulya: ಅಮೂಲ್ಯ ಅವರ ಪುಟ್ಟ ಮಕ್ಕಳ ಕೊರಳಲ್ಲೂ ಹುಲಿ ಪೆಂಡೆಂಟ್ ?! ಏನಂದ್ರು ನಟಿ ?!

Sandalwood news Actress Amulya Clarifies That Her Sons Wearing Tiger nail Pendant case

Share the Article

Sandalwood Actress Amulya: ಬಿಗ್‌ ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್‌ ಅವರ ಮೂಲಕ ಆರಂಭವಾದ ಹುಲಿ ಉಗುರಿನ(Tiger Claw) ಪ್ರಕರಣ ಸದ್ಯ, ಸ್ಯಾಂಡಲ್‌ವುಡ್‌ (sandalwood)ಮತ್ತು ರಾಜಕೀಯ(Politics)ಅಂಗಳಕ್ಕೆ ತಲುಪಿದೆ. ಈ ನಡುವೆ ಸ್ಯಾಂಡಲ್ ವುಡ್ ನಟಿ (Sandalwood Actress Amulya) ಅಮೂಲ್ಯ ತಮ್ಮ ಮಕ್ಕಳಿಗೆ ಹುಲಿ ಉಗುರಿನ ಪೆಂಡೆಂಟ್ ಹಾಕಿದ್ದಾರೆ ಎಂಬ ಸುದ್ಧಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸದ್ಯ, ಇದಕ್ಕೆ ಅಮೂಲ್ಯ ಸ್ಪಷ್ಟನೆ ನೀಡಿದ್ದಾರೆ.

” ತಮ್ಮ ಮಕ್ಕಳ ಕೊರಳಿಗೆ ಹಾಕಿರುವುದು ನಿಜವಾದ ಹುಲಿ ಉಗುರಲ್ಲ, ಅದು ಸಿಂಥೆಟಿಕ್ ಪದಾರ್ಥದ ಉಗುರು ” ಎಂದು ಹೇಳಿದ್ದಾರೆ. “ನನ್ನ ಮಕ್ಕಳಿಗೆ ತಾಯಿ ಏನಾದರೂ ನೀಡಬೇಕಾಗಿತ್ತು. ಹೀಗಾಗಿ, ಅವರು ಸರಗಳನ್ನು ನೀಡಿದ್ದು, ಆದರೆ ಆ ಡಿಸೈನ್ ಅನ್ನು ನಾನೇ ಸೆಲೆಕ್ಟ್ ಮಾಡಿದ್ದೆ. ನಾನು ಹಿಂದೆ ಎಲ್ಲಿಯೋ ಆ ಡಿಸೈನ್ ನೋಡಿ ಫೋಟೊ ತೆಗೆದಿರಿಸಿ ಕೊಂಡಿದ್ದೆ. ಆ ಬಳಿಕ ಅದೇ ಮಾದರಿಯ ಸರಗಳನ್ನು ಮಾಡಿಸಿದ್ದೇವೆ. ನಾನು ನಿಜವಾದ ಹುಲಿ ಉಗುರು ಎಂದು ಭಾವಿಸಿದ್ದೆ, ಆದರೆ ಅಂಗಡಿಯವರು ಬಿಲ್ ಕೊಟ್ಟಾಗ ನನಗೆ ಅದು ಸಿಂಥೆಟಿಕ್ ಎಂಬ ವಿಚಾರ ಗೊತ್ತಾಗಿದ್ದು” ಎಂದು ನಟಿ ಅಮೂಲ್ಯ ತಿಳಿಸಿದ್ದಾರೆ. ನಮ್ಮ ಮಕ್ಕಳ ಕೊರಳಲ್ಲಿ ಸಹ ಅದೇ ಸಿಂಥೆಟಿಕ್ ಉಗುರು ಇರುವುದು. ಅರಣ್ಯ ಇಲಾಖೆಯವರು ಬೇಕಾದರೆ ಪರಿಶೀಲನೆ ನಡೆಸಲಿ ಇದಕ್ಕೆ ನಮ್ಮ ಆಕ್ಷೇಪವಿಲ್ಲ ಎಂದು ನಟಿ ಅಮೂಲ್ಯ ತಿಳಿಸಿದ್ದಾರೆ.

ಇದನ್ನೂ ಓದಿ: Congress: ನಿಗಮ ಮಂಡಳಿ ನಿರೀಕ್ಷೆಯಲ್ಲಿರೋ ‘ಕೈ’ ನಾಯಕರಿಗೆ ಸಂತಸದ ವಿಚಾರ – ಸಿಎಂ, ಡಿಸಿಎಂ ಕೊಟ್ರು ಬಿಗ್ ಅಪ್ಡೇಟ್

Leave A Reply