Menstruation: ಮಹಿಳೆಯರೇ ಮುಟ್ಟಿನ ವೇಳೆ ಈ ರೀತಿ ರಕ್ತಸ್ರಾವ ಆಗುತ್ತದೆಯೇ?! ಹಾಗಿದ್ರೆ ಇದೇ ಕಾರಣ ನೋಡಿ
Menstruation: ಮಹಿಳೆಯರಲ್ಲಿ ಮುಟ್ಟು (Menstruation)ನೈಸರ್ಗಿಕ ಕ್ರಿಯೆಯಾಗಿದ್ದು, ಈ ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡುವುದು ಕೂಡ ಅಷ್ಟೇ ಮುಖ್ಯವಾಗಿದ್ದು, ಇಲ್ಲದಿದ್ದರೆ ತುರಿಕೆ, ಸೋಂಕಿನ ಸಮಸ್ಯೆ ಉಂಟಾಗುವುದು ಗೊತ್ತಿರುವ ವಿಚಾರವೇ. ಮುಟ್ಟಿನ ಸಮಯವನ್ನು ಜೊತೆಗೆ ಆ ನೋವಿನ ಪರಿಸ್ಥಿತಿಯನ್ನು ನಿಭಾಯಿಸುವುದು ಬಹುತೇಕ ಮಹಿಳೆಯರಿಗೆ ಸವಾಲಿನ ಸಂಗತಿಯಾಗಿದೆ.
ಮುಟ್ಟಾಗುವ ಮಹಿಳೆಯರಲ್ಲಿ ಬ್ಲಡ್ ಕಾಟ್ ಅಥವಾ ಹೆಪ್ಪುಗಟ್ಟಿದಂತೆ(Blood Clots Normal During Period) ರಕ್ತಸ್ರಾವವಾಗುವುದು ಸಾಮಾನ್ಯ. ಕೆಲವೊಮ್ಮೆ ಸಹಜ ಸ್ರಾವಕ್ಕಿಂತ ಹೆಚ್ಚು ಹೆಪ್ಪುಗಟ್ಟಿದಂತೆ ರಕ್ತಸ್ರಾವವಾಗಬಹುದು.ಮುಟ್ಟಿನ ದಿನಗಳಲ್ಲಿ ದಪ್ಪನೆಯ ಲೋಳೆಯಂತಹ ರಕ್ತಸ್ರಾವವಾದರೆ ಗಾಬರಿಯಾಗುವುದು ಸಹಜ. ಹೆಚ್ಚಿನ ಸಮಯ ರಕ್ತ ಹೆಪ್ಪುಗಟ್ಟುವಿಕೆಯು ಮಾಸಿಕ ಋತುಚಕ್ರದ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ. ಮುಟ್ಟಿನ ಸಮಯದಲ್ಲಿ ಅತಿಯಾಗಿ ರಕ್ತಸ್ರಾವವಾದರೆ ಅದು ಸಮಸ್ಯೆಯ ಲಕ್ಷಣ ಕೂಡ ಆಗಿರಬಹುದು.ಮುಟ್ಟಿನ ಸಮಯದಲ್ಲಿ ರಕ್ತ ಹೆಪ್ಪುಗಟ್ಟಿದಂತೆ ದಪ್ಪ, ಜೆಲ್ಲಿಯ ರೀತಿ ರಕ್ತ ಸ್ರಾವವಾಗುತ್ತಿದ್ದರೆ ಇದು ದೇಹದಿಂದ ಹೆಚ್ಚು ರಕ್ತ ನಷ್ಟವಾಗುವುದನ್ನು ನಿಲ್ಲಿಸಲು ಸಹಕರಿಸುತ್ತದೆ.
ಸರಿಯಾಗಿ ಮುಟ್ಟಾಗದೇ ಇರಲು ಪ್ರಮುಖ ಕಾರಣಗಳೇನು?
# ನಾವು ಸೇವಿಸುವ ಕೆಲವು ಔಷಧಿಗಳು
ನಾವು ಸೇವಿಸುವ ಕೆಲವು ಔಷಧಿಗಳು ಮುಟ್ಟಿನ ರಕ್ತಸ್ರಾವದ ಮೇಲೆ ಪ್ರಭಾವ ಬೀರುತ್ತದೆ. ಇದು ಅತಿಯಾದ ರಕ್ತಸ್ರಾವ ಇಲ್ಲವೇ ಹೆಪ್ಪುಗಟ್ಟಿದಂತಹ ರಕ್ತಸ್ರಾವಕ್ಕೆ ಕಾರಣವಾಗಬಹುದು. ಉರಿಯೂತ, ಹಾರ್ಮೋನ್ ಸಂಬಂಧಿಸಿದ ಔಷಧಿಗಳು ಮತ್ತು ಹೆಪ್ಪುರೋಧಕಗಳು ಮುಟ್ಟಿನ ದಿನಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ಇದರಿಂದ ರಕ್ತಸ್ರಾವದಲ್ಲಿ ವ್ಯತ್ಯಾಸವೂ ಉಂಟಾಗಬಹುದು.
# ಗರ್ಭಾಪಾತ
ಗರ್ಭಪಾತ ಅಥವಾ ಅಪಸ್ಥಾನೀಯ ಗರ್ಭಧಾರಣೆಯ ಸಂದರ್ಭ ಗರ್ಭಾಶಯದ ಹೊರಗೆ ಮಗುವಿನ ಬೆಳವಣಿಗೆಯನ್ನು ಆರಂಭ ಮಾಡಿದಾಗ ಕೆಲವೊಮ್ಮೆ ಗರ್ಭಾವಸ್ಥೆಯ ಆರಂಭಿಕ ಹಂತಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಅವಧಿಯ ಹೆಪ್ಪುಗಟ್ಟುವಿಕೆ ಎಂದು ತಪ್ಪಾಗಿ ಅರ್ಥೈಸಿಕೊಳ್ಳುವ ಸಂಭವವಿದೆ. ಅಕಾಲಿಕವಾಗಿ ಕೊನೆಗೊಳ್ಳುವ ಗರ್ಭಧಾರಣೆಯ ಪರಿಣಾಮವಾಗಿ ಸಾಮಾನ್ಯಕ್ಕಿಂತ ದೊಡ್ಡದಾದ ರಕ್ತ ಹೆಪ್ಪುಗಟ್ಟುವಿಕೆ ಬೆಳೆಯುವ ಸಾಧ್ಯತೆಯಿದೆ.
# ಪಿಸಿಓಎಸ್(PCOS)
ಪಿಸಿಓಎಸ್ (PCOS )ಕೂಡ ಹಾರ್ಮೋನ್‌ಗೆ ಸಂಬಂಧಿಸಿದ ಸಮಸ್ಯೆ ಉಂಟು ಮಾಡುತ್ತದೆ.ಇತ್ತೀಚಿನ ದಿನಗಳಲ್ಲಿ ಹಲವು ಮಹಿಳೆಯರು, ಹದಿಹರೆಯದ ಹೆಣ್ಣುಮಕ್ಕಳು ಮುಟ್ಟಿನ ತೊಂದರೆಗಳನ್ನು ಅನುಭವಿಸುತ್ತಿದ್ದು, ಇದು ಋತುಚಕ್ರದ ಸಮಯದಲ್ಲಿ ಅತಿಯಾದ ಹೆಪ್ಪುಗಟ್ಟುವಿಕೆ ಮತ್ತು ರಕ್ತಸ್ರಾವ ಉಂಟಾಗಲು ಕಾರಣವಾಗಾಬಹುದು.
# ಥೈರಾಯ್ಡ್
ಥೈರಾಯ್ಡ್ ಗ್ರಂಥಿಯು ಸರಿಯಾಗಿ ಕೆಲಸ ಮಾಡದೇ ಇದ್ದಾಗ ಅಸಹಜ ಮುಟ್ಟು ಉಂಟಾಗುತ್ತದೆ. ಸಹಜ ಮುಟ್ಟು ಹಾಗೂ ರಕ್ತಸ್ರಾವದಲ್ಲಿನ ವ್ಯತ್ಯಾಸದ ಪರಿಣಾಮ ಹೈಪೊಥೈರಾಡಿಸಂ ಹಾಗೂ ಥೈರಾಯಿಡಿಸಂನಂತಹ ಸಮಸ್ಯೆ ಹೆಚ್ಚಾಗಲು ಕಾರಣವಾಗುತ್ತದೆ.
# ಗರ್ಭನಿರೋಧಕಗಳು
ಗರ್ಭನಿರೋಧಕ ಔಷಧಿಗಳು ಕೂಡ ಮುಟ್ಟಿನ ದಿನಗಳಲ್ಲಿ ಹೆಚ್ಚು ರಕ್ತಸ್ರಾವ ಹೆಪ್ಪುಗಟ್ಟಿದಂತೆ ರಕ್ತಸ್ರಾವವಾಗಲು ಕಾರಣವಾಗುತ್ತದೆ. ಅಷ್ಟೆ ಅಲ್ಲದೇ, ಮಾಸಿಕ ಋತುಚಕ್ರದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ.
# ಎಂಡೊಮೆಟ್ರಿಯೊಸಿಸ್
ಎಂಡೊಮೆಟ್ರಿಯೊಸಿಸ್ ಗರ್ಭಾಶಯಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದ್ದು, ಇದು ಮುಟ್ಟಿನ ಸಮಯದಲ್ಲಿ ತೀವ್ರವಾದ ಸೆಳೆತ, ಅತಿಯಾದ ರಕ್ತಸ್ರಾವ ಮತ್ತು ಕಿಬ್ಬೊಟ್ಟೆಯ ನೋವಿಗೆ ಕಾರಣವಾಗಬಹುದು.