Water Tank Cleaning: ಮನೆಯ ಸಿಂಟ್ಯಾಕ್ಸ್ ಕ್ಲೀನ್ ಮಾಡಲು ಹರಸಾಹಸ ಪಡ್ತೀರಾ ?! ಈ ಸಿಂಪಲ್ ಟ್ರಿಕ್ಸ್ ಬಳಸಿ ಸ್ವಚ್ಛ ಮಾಡಿದ್ರೆ ಸ್ವಲ್ಪನೂ ಕೊಳೆ ಉಳಿಯಲ್ಲ !
Water Tank Cleaning: ನೀವು ಮನೆಯ ಸಿಂಟ್ಯಾಕ್ಸ್ ಕ್ಲೀನ್ ಮಾಡಲು (Water Tank Cleaning) ಹರಸಾಹಸ ಪಡ್ತೀರಾ ?! ಈ ಸಿಂಪಲ್ ಟ್ರಿಕ್ಸ್ ಬಳಸಿ ಸ್ವಚ್ಛ ಮಾಡಿದ್ರೆ ಸ್ವಲ್ಪನೂ ಕೊಳೆ ಉಳಿಯಲ್ಲ ! ನೀವು ಟ್ಯಾಂಕ್ ಅನ್ನು ಸರಿಯಾಗಿ ಸ್ವಚ್ಛಗೊಳಿಸಿದರೆ ಮತ್ತು ಸೋಂಕುನಿವಾರಕವನ್ನು ಅಥವಾ ಬ್ಲೀಚಿಂಗ್ ಪೌಡರ್ ಅನ್ನು ವರ್ಷಕ್ಕೊಮ್ಮೆ ಹಾಕಿದ್ರೆ ನೀವು ವರ್ಷವಿಡೀ ಸುರಕ್ಷಿತವಾಗಿ ನೀರನ್ನು ಕುಡಿಯಬಹುದು. ನಿಯಮಿತವಾಗಿ ಬಳಸಬಹುದು. ಇಲ್ಲಿದೆ ವಾಟರ್ ಟ್ಯಾಂಕ್ ಕ್ಲೀನ್ ಮಾಡುವ ಸುಲಭ ವಿಧಾನ!!!.
ಮೊದಲು ಟ್ಯಾಂಕ್ನಲ್ಲಿರುವ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿ. ನಂತರ ಕೆಳಗೆ ಉಳಿದಿರುವ ನೀರನ್ನು ಮಗ್ನಿಂದ ಕ್ಲೀನ್ ಖಾಲಿ ಮಾಡಲು ಪ್ರಯತ್ನಿಸಿ. ನೀರು ಖಾಲಿ ಮಾಡಿದ ನಂತರ ಟ್ಯಾಂಕ್‌ನ ಒಳಭಾಗವನ್ನು ಒಣ ಬಟ್ಟೆಯಿಂದ ಸಂಪೂರ್ಣವಾಗಿ ಒರೆಸಿ. ಇನ್ನು ಟ್ಯಾಂಕ್‌ನ ಗಾತ್ರ ಚಿಕ್ಕದಾಗಿದ್ದರೆ ಅದನ್ನು ತಲೆಕೆಳಗಾಗಿ ಹಾಕಿದರೆ ನೀರು ಸಂಪೂರ್ಣವಾಗಿ ಖಾಲಿಯಾಗುತ್ತದೆ. ಒಣಗಿದ ನಂತರ ಟ್ಯಾಂಕ್ ಒಣಗಲು ಸ್ವಲ್ಪ ಸಮಯದವರೆಗೆ ಮುಚ್ಚಳವನ್ನು ಬಿಡಿ.
ಟ್ಯಾಂಕ್‌ನ ಗಾತ್ರಕ್ಕೆ ಅನುಗುಣವಾಗಿ ಬಿಸಿ ನೀರು ಅಥವಾ ಡಿಟರ್ಜೆಂಟ್ ಪುಡಿಯಿಂದ ಸ್ವಚ್ಛಗೊಳಿಸಬಹುದು. ಮೊದಲು ಲಿಕ್ವಿಡ್ ಡಿಟರ್ಜೆಂಟ್‌ನಲ್ಲಿ ನೈಲಾನ್ ಬ್ರಷ್ ಅಥವಾ ಸ್ಪಂಜಿನೊಂದಿಗೆ ಟ್ಯಾಂಕ್‌ನ ಒಳಭಾಗವನ್ನು ಚೆನ್ನಾಗಿ ಸ್ಕ್ರಬ್ ಮಾಡಿ. ಬ್ರಷ್‌ನಿಂದ ಅಡ್ಡಲಾಗಿ ಚೆನ್ನಾಗಿ ಉಜ್ಜಿ. ಶುಚಿಗೊಳಿಸಿದ ನಂತರ ಟ್ಯಾಂಕ್ ಅನ್ನು ಕ್ರಿಮಿನಾಶಕಗೊಳಿಸಲು, ಮೊದಲು ಮುಕ್ಕಾಲು ಭಾಗದಷ್ಟು ಶುದ್ಧ ನೀರಿನಿಂದ ತುಂಬಿಸಿ. ನಂತರ ಅದಕ್ಕೆ ಸಾಕಷ್ಟು ಕ್ಲೋರಿನ್ ಬ್ಲೀಚ್ ಸೇರಿಸಿ. ಟ್ಯಾಂಕ್ ತೊಳೆದ ನಂತರ ಬಟ್ಟೆಯಿಂದ ಒರೆಸಿ. ಟ್ಯಾಂಕ್ ಅನ್ನು ಮತ್ತೆ ಒಣಗಿಸಿ.
ಇದನ್ನು ಓದಿ: Washing Machine : ಮಹಿಳೆಯರೇ, ಕೇವಲ 999ರೂ ಗೆ ಹೊಸ ವಾಷಿಂಗ್ ಮಷೀನ್- ಅಂಗಡಿ ಮುಂದೆ ಜನವೋ ಜನ !!