Make Dhup Batti At Home: ಯೂಸ್ ಮಾಡಿದ ಹೂವನ್ನು ಬಾಡಿತೆಂದು ಬಿಸಾಡ್ತೀರಾ?! ಇನ್ಮುಂದೆ ಹೀಗ್ ಮಾಡಿ, ಮನೆಯಲ್ಲೇ ಧೂಪ ತಯಾರಿಸಿ

Make Dhup Batti At Home: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೇವತೆಗಳನ್ನು ಮೆಚ್ಚಿಸಲು ಧೂಪ-ದೀಪಗಳನ್ನು ಬೆಳಗಿಸಲಾಗುತ್ತದೆ. ಜೊತೆಗೆ ಮನೆಯಲ್ಲಿ ನಿತ್ಯವೂ ಧೂಪ ಮತ್ತು ದೀಪಗಳನ್ನು ಬೆಳಗಿಸಿದರೆ ನಕಾರಾತ್ಮಕ ಶಕ್ತಿ ದೂರವಾಗಿ ಮನೆಯಲ್ಲಿ ಸುಖ ಸಂತೋಷ ಇರುತ್ತದೆ. ಸದ್ಯ ಪರಿಮಳಯುಕ್ತ ಅನೇಕ ಧೂಪಗಳು ನಿಮಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಸಾವಯವ ಧೂಪದ ಬಳಕೆಯಲ್ಲಿ ಯಾವುದೇ ಆರೋಗ್ಯ ಭಯವಿರೋದಿಲ್ಲ. ಅದಕ್ಕಾಗಿ ಹಣ ನೀಡಿ ತರುವ ಹೂವನ್ನು ದೇವರಿಗೆ ಬಳಸಿದ ಮೇಲೆ ಕಸಕ್ಕೆ ಎಸೆಯಬೇಡಿ, ಇದೇ ಹೂವನ್ನು ನೀವು ಮರಬಳಕೆ ಮಾಡಬಹುದು. ಹೌದು, ಬಳಸಿದ ಹೂವಿನಿಂದಲೇ ನೀವು ಧೂಪವನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.

ಈ ಧೂಪಗಳನ್ನು ತಯಾರಿಸಲು ಹೂ (Flower) ಗಳು ಬೇಕು. ನೀವು ಇದಕ್ಕೆ ಒಣಗಿದ ಹೂಗಳನ್ನು ಬಳಸಬೇಕಾಗುತ್ತದೆ.
ಮನೆ (Home) ಯಲ್ಲೇ ಧೂಪ ತಯಾರಿಸಲು ಬೇಕಾಗುವ ಸಾಮಗ್ರಿ :
ಚೆಂಡು ಹೂವು : 5-7
ಗುಲಾಬಿ ಹೂ : 6-8
ಲವಂಗದ ಎಲೆ : 1-2
ಕರ್ಪೂರ : 3
ಕಲ್ಲಿದ್ದಲು ಮತ್ತು ಒಣ ಸಗಣಿ
ಶ್ರೀಗಂಧದ ಪುಡಿ
3 ಚಮಚ ತುಪ್ಪ
2 ಟೀಸ್ಪೂನ್ ಎಳ್ಳಿನ ಎಣ್ಣೆ
1 ಟೀಚಮಚ ಜೇನುತುಪ್ಪ
ಹವನದ ಸಾಮಗ್ರಿ

ಧೂಪವನ್ನು ತಯಾರಿಸುವ ವಿಧಾನ : ನೀವು ಮೊದಲು ಮಿಕ್ಸಿ ಜಾರಿಗೆ ಒಣ ಹೂವು, ಸಣ್ಣ ತುಂಡು ಕಲ್ಲಿದ್ದಲು, ಒಣ ಸಗಣಿ, ದಾಲ್ಚಿನಿ ಎಲೆ, ಶ್ರೀಗಂಧ ಮತ್ತು ಹವನದ ಪುಡಿಯನ್ನು ಹಾಕಿ ಮಿಕ್ಸಿ ಮಾಡಿಕೊಳ್ಳಿ. ಇದಕ್ಕೆ ನೀರು ಹಾಕದೆ ಪುಡಿ ಮಾಡಬೇಕು. ಪುಡಿಯಾದ ಈ ಮಿಶ್ರಣವನ್ನು ನೀವು ಜರಡಿ ಹಿಡಿಯಬೇಕು. ಜರಡಿ ಹಿಡಿದ ನಂತ್ರ ಸಿಗುವ ಪುಡಿಯನ್ನು ನೀವು ಧೂಪಕ್ಕೆ ಬಳಸಬೇಕು.

ಈ ಜರಡಿ ಹಿಡಿದ ಪುಡಿಗೆ ನೀವು ತುಪ್ಪ, ಎಳ್ಳೆಣ್ಣೆ, ಜೇನುತುಪ್ಪ ಮತ್ತು ಒಂದರಿಂದ ಎರಡು ಚಮಚ ಮಾತ್ರ ನೀರು ಸೇರಿಸಿ ಮಿಕ್ಸ್ ಮಾಡಿರಿ .
ಎಲ್ಲವೂ ಸರಿಯಾಗಿ ಮಿಕ್ಸ್ ಆದಮೇಲೆ ನೀವು ಅದನ್ನು ಉಂಡೆ ಮಾಡಬೇಕು. ನಿಮಗಿಷ್ಟ ಆಕಾರದಲ್ಲಿ ಅದನ್ನು ತಯಾರಿಸಬಹುದು. ನೀವು ಈ ಉಂಡೆಯನ್ನು ಬಿಸಿಲಿನಲ್ಲಿಟ್ಟು ಚೆನ್ನಾಗಿ ಒಣಗಿಸಬೇಕು. ಇದು ಒಣಗಿದ ನಂತ್ರ ಬಳಸಲು ಸಿದ್ಧವಾಗುತ್ತದೆ. ಮಿಶ್ರಣ ತುಂಬಾ ಒಣಗಿದೆ ಎನ್ನಿಸಿದಲ್ಲಿ ನೀವು ಅದಕ್ಕೆ ಹೆಚ್ಚು ತುಪ್ಪ ಅಥವಾ ಹರಳೆಣ್ಣೆ ಸೇರಿಸಬಹುದು. ಧೂಪ ಹೆಚ್ಚು ಪರಿಮಳಯುಕ್ತವಾಗಿರಬೇಕು ಎನ್ನುವವರು ಕರ್ಪೂರದ ಬಳಕೆಯನ್ನು ಹೆಚ್ಚು ಮಾಡಬಹುದು.

ನೀವು ಚೆಂಡು ಹೂ ಅಥವಾ ಗುಲಾಬಿ ಹೂ ಇವೆರಡನ್ನೇ ಬಳಸಬೇಕು ಎಂದೇನಿಲ್ಲ. ನಿಮ್ಮ ಮನೆಯಲ್ಲಿರುವ ಯಾವುದೇ ಹೂವನ್ನು ನೀವು ಬಳಕೆ ಮಾಡಬಹುದು.

ಧೂಪ ತಯಾರಿಸುವ ಇನ್ನೊಂದು ವಿಧಾನ:
ಬೇಕಾಗುವ ಸಾಮಗ್ರಿಗಳು :
ಒಣಗಿದ ತೆಂಗಿನ ನಾರಿನ ಸಿಪ್ಪೆಯ ಪುಡಿ
ಗುಲಾಬಿ ಎಸಳುಗಳು
ಗಂಧದ ಪುಡಿ
ಕರ್ಪೂರ
ಮರದ ದಿಂಬಿಯ ಪುಡಿ
ತುಪ್ಪ

ಧೂಪ ತಯಾರಿಸುವ ವಿಧಾನ :
ಒಣಗಿದ ತೆಂಗಿನ ನಾರಿನ ಸಿಪ್ಪೆ ಮತ್ತು ಒಣಗಿದ ಗುಲಾಬಿ ಎಸಳುಗಳನ್ನು ಚೆನ್ನಾಗಿ ಪುಡಿ ಮಾಡಿ. ನಂತರ ಇದನ್ನು ಸರಿಯಾಗಿ ಜರಡಿ ಸಹಾಯದಿಂದ ಸೋಸಿಕೊಳ್ಳಿ. ಇದಾದ ಬಳಿಕ ಇದಕ್ಕೆ ಕರ್ಪೂರವನ್ನು ಪುಡಿ ಮಾಡಿ ಹಾಕಿ. ಜೊತೆಗೆ ಶ್ರೀಗಂಧದ ಪುಡಿ, ಮರದ ದಿಂಬಿಯ ಪುಡಿ ಹಾಕಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ. ಇದಾದ ಬಳಿಕ ಇದಕ್ಕೆ ಒಂದರಿಂದ ಎರಡು ಚಮಚ ತುಪ್ಪ ಹಾಕಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಧೂಪದ ಆಕಾರವಾಗಿ ಮಾಡಿ ಮತ್ತು ಕೆಲ ಗಂಟೆಗಳ ವರೆಗೆ ಹಾಗೆಯೇ ಇಡಿ. ಈಗ ದೇವರಿಗೆ ಹಚ್ಚುವ ಧೂಪ ರೆಡಿ.

 

ಇದನ್ನು ಓದಿ: Karnataka government: ರಾಜ್ಯಕ್ಕೆ, ಜನರಿಗೆ ಮಾತ್ರ ಬರ, ಶಾಸಕರು, ಸಚಿವರ ಸಂಬಳದಲ್ಲಿ ಮಾತ್ರ ಭಾರೀ ಹೆಚ್ಚಳ !!

Leave A Reply

Your email address will not be published.