Arecanut Leaf Spot Disease: ಇದೊಂದು ಸಣ್ಣ ಕೆಲಸ ಮಾಡಿ, ನಿಮ್ಮ ಅಡಿಕೆ ತೋಟದಲ್ಲಿ ಇನ್ಯಾವತ್ತೂ ಎಲೆಚುಕ್ಕಿ ರೋಗ ಬರೋದಿಲ್ಲ !!
Arecanut Leaf Spot Disease: ಅಡಿಕೆ ಬೆಳೆ ಬೆಳೆಯುವುದು ತುಂಬಾ ಸುಲಭದ ಕೆಲಸವೇನಲ್ಲ. ಅಡಿಕೆ ಬೆಳೆಗೆ ನಾನಾ ರೋಗಗಳು ಅಂಟಿಕೊಳ್ಳುತ್ತವೆ. ಅದರಲ್ಲಿ ಎಲೆಚುಕ್ಕಿ ರೋಗ ಕೂಡ ಒಂದು. ಎಲೆಚುಕ್ಕಿ ರೋಗಬಂದರೆ ಕೃಷಿಯ ನಾಶವೇ ಎಂದರ್ಥ. ಹಾಗಾದ್ರೆ ಈ ಎಲೆಚುಕ್ಕೆ ರೋಗಕ್ಕೆ ಪರಿಹಾರ ಇಲ್ವಾ? ಇಲ್ಲಿದೆ ನೋಡಿ, ಇದೊಂದು ಸಣ್ಣ ಕೆಲಸ ಮಾಡಿ, ನಿಮ್ಮ ಅಡಿಕೆ ತೋಟದಲ್ಲಿ ಇನ್ಯಾವತ್ತೂ ಎಲೆಚುಕ್ಕಿ ರೋಗ ಬರೋದಿಲ್ಲ !!
ಹವಾಮಾನ ವೈಪರೀತ್ಯದಿಂದ ಅಡಿಕೆಗೆ ಎಲೆ ಚುಕ್ಕೆ ರೋಗ (Arecanut Leaf Spot Disease) ತಗುಲುತ್ತಿದ್ದು ಬೆಳೆಗಾರರು ಕಂಗಾಲಾಗಿದ್ದಾರೆ. ಕೊಲ್ಲೇಟೋಟ್ರೈಕಮ್ ಗ್ಲಿಯೋಸ್ಪೊರೈಡ್ಸ್ ಹಾಗೂ ಫಿಲೋಸ್ಟಿಕಾ ಅರೇಕಾ ಎಂಬ ಶಿಲೀಂಧ್ರಗಳು ಅಡಿಕೆಯ ಗರಿಗಳ ಮೇಲೆ ಬೆಳೆಯುವ ಕಾರಣಕ್ಕಾಗಿ ಈ ರೋಗ ಉಂಟಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಬಿದ್ದ ಗರಿಗಳ ಮೇಲೆ ಸಂತಾನೋತ್ಪತ್ತಿ ಮಾಡಿ ಗಾಳಿಯಿಂದ ಹರಡುವ ಈ ಶಿಲೀಂಧ್ರಗಳು ಇಳುವರಿಗೆ ಮಾರಕವಾಗಿ ಪರಿಣಮಿಸುತ್ತದೆ ಹಾಗೂ ಅಡಿಕೆ ಮರಗಳ ಜೀವಿತಾವಧಿಯನ್ನು ಹಾಳು ಮಾಡುತ್ತದೆ.
ಅಡಿಕೆ ಎಲೆ ಚುಕ್ಕೆ ರೋಗ ಅಡಿಕೆ ಮರಗಳ ಸೋಗೆಗಳಲ್ಲಿ ಹಳದಿ ಮತ್ತು ಕಪ್ಪು ಚುಕ್ಕೆ ಹೆಚ್ಚಾಗಿ ಕಾಣ ಸಿಗುತ್ತದೆ. ಇದರಿಂದ ಅಡಿಕೆ ಬೆಳೆಯುವ ಮುನ್ನವೆ ಮರಗಳಿಂದ ಉದುರಲು ಪ್ರಾರಂಭ ವಾಗುತ್ತದೆ. ಅಡಿಕೆ ಸೋಗೆಗಳು ಸೊರಗಿ ಹೋಗುತ್ತದೆ. ಅಡಕೆ ಮರ ಆರೋಗ್ಯವಂತವಾಗಿರಲು ಸಾವಯವ ಗೊಬ್ಬರ ನೀಡಬೇಕು.
ಯಾವುದೇ ಗಿಡಗಳಿಗೆ ಸಾರಜನಕ, ರಂಜಕ, ಪ್ರೋಟಾನ್ ಗೊಬ್ಬರ ನೀಡಿ ಗಿಡಗಳ ಪೋಷಣೆ ಮಾಡಬೇಕು. ಚುಕ್ಕೆ ರೋಗ ಪ್ರಾರಂಭ ವಾದ ಸಂದರ್ಭದಲ್ಲಿ ಶಿಲೀಂದ್ರ ನಾಶಕ ಸಿಂಪಡಿಸಬೇಕು. ಶಿಲೀಂಧ್ರನಾಶಕಗಳನ್ನು 1 ಮಿ.ಲೀ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಅಂಟು ದ್ರಾವಣದ ಜೊತೆಗೆ ಸಿಂಪಡಿಸಬೇಕು. ಅಡಿಕೆಗಳಿಗೆ ರೋಗಬಾಧೆ ಕಾಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮಳೆ ಆರಂಭವಾಗುವ ಮೊದಲೇ ಬೋರ್ಡೋ ಸಿಂಪಡಣೆ ಮಾಡುವುದು ಕೂಡ ಮುಖ್ಯವಾಗುತ್ತದೆ. ರೋಗ ಹರಡಿದ ಸೋಗೆಯನ್ನು ತೆಗೆದು ಬಿಡಬೇಕು. ಮರಗಳ ರೆಂಬೆ ಕತ್ತರಿಸಿ, ಗಾಳಿ, ಬೆಳಕು, ನೀರು ಚೆನ್ನಾಗಿ ಹೀರಿಕೊಳ್ಳಯವಂತೆ ಮಾಡಬೇಕು.