Property Rule: ಸ್ವಂತ ಆಸ್ತಿ, ಜಮೀನು ಹೊಂದಿದವರಿಗೆ ಮಹತ್ವದ ಸುದ್ದಿ- ಆಸ್ತಿ ಪತ್ರಗಳಿಗೆ ಬರಲಿದೆ ಹೊಸ ರೂಲ್ಸ್

Important news for those have own property and land

Property Rule: ಸ್ವಂತ ಆಸ್ತಿ, ಜಮೀನು ಹೊಂದಿದವರಿಗೆ ಮಹತ್ವದ ಸುದ್ದಿ ಇಲ್ಲಿದೆ. ಆಸ್ತಿ ಪತ್ರಗಳಿಗೆ ಬರಲಿದೆ ಹೊಸ ರೂಲ್ಸ್ (Property Rule). ಹೌದು, ಇದೀಗ ಬ್ಯಾಂಕ್ ನಲ್ಲಿ ಸ್ವಂತ ಆಸ್ತಿ ಮತ್ತು ಜಮೀನು ಅಡಮಾನವಾಗಿರಿಸಿದವರಿಗೆ RBI ಮಹತ್ವದ ಮಾಹಿತಿ ಹೊರಡಿಸಿದೆ. ಡಿಸೆಂಬರ್ 1 ರಿಂದ RBI ನ ಈ ಹೊಸ ನಿಯಮ ಜಾರಿಗೆ ಬರಲಿದೆ.

ಸಾಮಾನ್ಯವಾಗಿ ಬ್ಯಾಂಕ್ ನಲ್ಲಿ ಸಾಲ ಪಡೆಯುವಾಗ ಆಸ್ತಿ ಪತ್ರಗಳನ್ನು ಅಡಮಾನವಾಗಿ ಇರಿಸಬೇಕಾಗುತ್ತದೆ. ಗ್ರಾಹಕರು ಇರಿಸುವ ಆಸ್ತಿ ಪುರಾವೆಯ ಆಧಾರದ ಮೇಲೆ ಬ್ಯಾಂಕುಗಳು ಸಾಲವನ್ನು ನೀಡುತ್ತವೆ. ಸಾಲ ಪಡೆದ ನಂತರ ಸಾಲಗಾರರು ನಿಗದಿತ ಸಮಯದೊಳಗೆ ಸಾಲವನ್ನು ಪಾವತಿಸಬೇಕು. ಸಾಲಗಾರರು ನಿಗದಿತ ಸಮಯದೊಳಗೆ ಸಾಲವನ್ನು ಮರುಪಾವತಿಸಿದರೆ ಬ್ಯಾಂಕ್ ಅಡಮಾನವಾಗಿ ಇರಿಸಿಕೊಂಡ ವಸ್ತುಗಳನ್ನು ತಕ್ಷಣವೇ ಹಿಂತಿರುಗಿಸಬೇಕಿದೆ.

ಸಾಲದ ಪೂರ್ಣ ಮರುಪಾವತಿ ಆದ ಬಳಿಕಾ ಸ್ಥಿರಾಸ್ತಿ, ಚರಾಸ್ತಿಗಳ ಮೇಲಿರುವ ಎಲ್ಲಾ ದಾಖಲೆ, ಮಾಲೀಕತ್ವಗಳನ್ನು ಒಂದು ತಿಂಗಳಲ್ಲಿ ವಾಪಾಸ್ ನೀಡುವುದು ಕಡ್ಡಾಯವಾಗಿದೆ. ಇಲ್ಲವಾದರೆ ಬ್ಯಾಂಕುಗಳು ದಂಡದ ರೂಪದಲ್ಲಿ ಗ್ರಾಹಕರಿಗೆ ಮೊತ್ತವನ್ನು ನೀಡಬೇಕಾಗುತ್ತದೆ. ನಿಗದಿತ ದಿನಗಳ ಒಳಗೆ ಬ್ಯಾಂಕ್ ಸಾಲಗಾರರಿಗೆ Property Documents ಗಳನ್ನೂ ನೀಡದಿದ್ದರೆ ದಿನಕ್ಕೆ 5000 ರೂ ದಂಡವನ್ನು ನೀಡಬೇಕಾಗುತ್ತದೆ.

ಸಾಲ ಮರುಪಾವತಿಸಿದ 30 ದಿನಗಳ ಅವಧಿಯಲ್ಲಿ ಅಡಮಾನವಾಗಿ ಇರಿಸಿಕೊಂಡಿದ್ದ Property Documents ಗಳನ್ನೂ ಗ್ರಾಹಕರಿಗೆ ಮರಳಿ ನೀಡಬೇಕು ಎಂದು ಆದೇಶ ಹೊರಡಿಸಿದೆ. ಒಂದು ತಿಂಗಳೊಳಗೆ ಅಡಮಾನವಾಗಿ ಇರಿಸಿಕೊಂಡಿದ್ದ Property Documents ಗಳನ್ನೂ ಮರಳಿ ನೀಡದಿದ್ದರೆ ಬ್ಯಾಂಕುಗಳು ಗ್ರಾಹಕರಿಗೆ ಪರಿಹಾರದ ಮೊತ್ತ ನೀಡಬೇಕು ಎಂದು RBI ಬ್ಯಾಂಕುಗಳಿಗೆ ಆದೇಶ ಹೊರಡಿಸಿದೆ.

ದಾಖಲೆಗಳು ಕಳೆದುಹೋದ ಸಂದರ್ಭದಲ್ಲಿ 30 ದಿನಗಳ ವಿಸ್ತರಣೆಯನ್ನು ನೀಡಲಾಗುತ್ತದೆ. RBI ಈ ಸೂಚನೆಗಳನ್ನು ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949 ರ ಸೆಕ್ಷನ್ 21, 35A ಮತ್ತು 56, Reserve Bank Of India Act 1934 ರ ಸೆಕ್ಷನ್ 45JA ಮತ್ತು 45L ಮತ್ತು National Housing Bank Act 1987 ರ ಸೆಕ್ಷನ್ 30A ಅಡಿಯಲ್ಲಿ ನೀಡಿದೆ.

 

ಇದನ್ನು ಓದಿ: Viral News: ಗಂಡನಿಂದ ಬಂತು ವಿಚಿತ್ರ ಬೇಡಿಕೆ ; ನಿರಾಕರಿಸಿ ಸೀದಾ ಪೋಲೀಸ್ ಸ್ಟೇಷನ್ ಹೋದ ಹೆಂಡ್ತಿ – ಕೇಳಿದ್ರೆ ನಿಮಗೂ ಕೋಪ ನೆತ್ತಿಗೇರುತ್ತೆ !!

Leave A Reply

Your email address will not be published.