Gold Loan Limit: ಈ ಬ್ಯಾಂಕುಗಳಲ್ಲಿ ‘ಗೋಲ್ಡ್ ಲೋನ್’ ಅನ್ನು 2 ಪಟ್ಟು ಹೆಚ್ಚಿಸಿದ RBI , ಚಿನ್ನ ಇಟ್ಟು ಹಣ ಪಡೆಯಲು ಕ್ಯೂ ನಿಂತ ಜನ !!
Business news bank news RBI doubles Gold loan limit in these banks latest news
Gold Loan Limit: ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಬ್ಯಾಂಕಿಂಗ್ ಕೆಲಸಗಳು ಮನೆಯಲ್ಲೆ ಕುಳಿತು ಸರಾಗವಾಗಿ ಹಣ ವರ್ಗಾವಣೆಯ ಜೊತೆಗೆ ಪಾವತಿ ಮಾಡುವ ಸೌಕರ್ಯವನ್ನು ಎಲ್ಲ ಬ್ಯಾಂಕ್ಗಳು ಒದಗಿಸಿ, ಪ್ರತಿ ಕೆಲಸಕ್ಕೂ ಬ್ಯಾಂಕಿನ ಶಾಖೆಗೆ ಓಡಾಡುವ ತಾಪತ್ರಯವನ್ನು ತಪ್ಪಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI)ಕೆಲವು ಬ್ಯಾಂಕುಗಳಲ್ಲಿ ಗ್ರಾಹಕರಿಗೆ ನೀಡುವ ಗೋಲ್ಡ್ ಲೋನ್ ಮಿತಿಯನ್ನು(Gold Loan Limit) ದುಪ್ಪಟ್ಟುಗೊಳಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI)ಬುಲೆಟ್ ರೀಪೇಮೆಂಟ್ ಸ್ಕೀಮ್ ಅನುಸಾರ ನೀಡುವ ಗೋಲ್ಡ್ ಲೋನ್‌ನ (Gold loan limit under bullet repayment scheme) ಮಿತಿಯನ್ನು ಡಬಲ್ ಮಾಡಿದ್ದು,ಕೆಲವು ಬ್ಯಾಂಕುಗಳಿಗೆ ಅನ್ವಯವಾಗುವಂತೆ ಈ ಗೋಲ್ಡ್ ಲೋನ್ ಮಿತಿಯನ್ನು ದುಪ್ಪಟ್ಟು ಮಾಡಲಾಗಿದೆ.
ರಾಜ್ಯ ಮತ್ತು ಕೇಂದ್ರ ಸಹಕಾರಿ ಬ್ಯಾಂಕುಗಳು ತಮ್ಮ ಸಾಲ ನೀತಿಯ ಭಾಗವಾಗಿ ಚಿನ್ನ/ಚಿನ್ನದ ಆಭರಣಗಳ ಭದ್ರತೆಯ ವಿರುದ್ಧ ವಿವಿಧ ಉದ್ದೇಶಗಳಿಗಾಗಿ ಗೋಲ್ಡ್ ಲೋನ್ ಒದಗಿಸುತ್ತವೆ. ಈ ಸಾಲದ ಬಡ್ಡಿಯನ್ನು ಮಾಸಿಕ ಆಧಾರದ ಮೇಲೆ ಖಾತೆಗೆ ವಿಧಿಸುವ ಕ್ರಮ ಜಾರಿಯಲ್ಲಿದೆ. ಆದರೆ ಮಂಜೂರಾದ ದಿನಾಂಕದಿಂದ 12 ತಿಂಗಳ ಅಂತ್ಯದ ವೇಳೆಗೆ ಅಸಲಿನ ಜೊತೆಗೆ ಬಡ್ಡಿಯನ್ನೂ ಪಾವತಿ ಮಾಡಬೇಕಾಗುತ್ತದೆ. ಈ ಸಾಲದ ಅವಧಿಯು ಮಂಜೂರಾದ ದಿನಾಂಕದಿಂದ 12 ತಿಂಗಳುಗಳನ್ನು ಮೀರಬಾರದು ಎಂದು ಆರ್‌ಬಿಐ 2017ರಲ್ಲಿ ಸುತ್ತೋಲೆಯಲ್ಲಿ ಸೂಚಿಸಿದೆ.
ಕೆಲವು ಅರ್ಬನ್ ಕೋ ಆಪರೇಟಿವ್ ಬ್ಯಾಂಕುಗಳಿಗೆ ಅನ್ವಯವಾಗುವ ಹಾಗೆ ಈಗಿರುವ ಗೋಲ್ಡ್ ಲೋನ್ ಮಿತಿಯನ್ನು 2 ಲಕ್ಷ ರೂಪಾಯಿಯಿಂದ 4 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿರುವ ಕುರಿತು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮಾಹಿತಿ ನೀಡಿದ್ದಾರೆ.ಬುಲೆಟ್ ಮರುಪಾವತಿ ಯೋಜನೆ ಪ್ರಕಾರ ನಗರ ಸಹಕಾರ ಬ್ಯಾಂಕುಗಳಲ್ಲಿ ಚಾಲ್ತಿಯಲ್ಲಿರುವ ಸಾಲ ಸೌಲಭ್ಯವಾಗಿದ್ದು, ಇದರ ಅನುಸಾರ, ಬುಲೆಟ್ ಮರುಪಾವತಿ ಆಯ್ಕೆಯ ಅಡಿಯಲ್ಲಿ ಚಿನ್ನದ ಸಾಲ ಪಡೆದ ಸಾಲಗಾರರು ಸಂಪೂರ್ಣ ಅಸಲು ಮತ್ತು ಬಡ್ಡಿ ಮೊತ್ತವನ್ನು ಸಾಲದ ಅವಧಿಯ ಕೊನೆಯಲ್ಲಿ ಮರುಪಾವತಿ ಮಾಡಬೇಕಾಗುತ್ತದೆ.
ಆದ್ಯತಾ ವಲಯದ ಸಾಲ ನೀಡುವಿಕೆಯ ಅನುಸಾರ, 2023ರ ಮಾರ್ಚ್ 31ಕ್ಕೆ ಅನ್ವಯವಾಗುವ ಹಾಗೆ ಒಟ್ಟಾರೆ ಗುರಿ ಮತ್ತು ಉಪ-ಗುರಿಗಳನ್ನು ಪೂರೈಸಿದ ನಗರ ಸಹಕಾರ ಬ್ಯಾಂಕ್‌ಗಳಿಗೆ (ಯುಸಿಬಿಗಳು) ಸಂಬಂಧಪಟ್ಟಂತೆ ಬುಲೆಟ್ ಮರುಪಾವತಿ ಯೋಜನೆಯಡಿಯಲ್ಲಿ ಚಿನ್ನದ ಸಾಲಗಳ ಪ್ರಸ್ತುತ ಮಿತಿಯನ್ನು 2 ಲಕ್ಷ ರೂಪಾಯಿಯಿಂದ 4 ಲಕ್ಷ ರೂಪಾಯಿಗೆ ಏರಿಕೆ ಮಾಡಲು ತೀರ್ಮಾನ ಮಾಡಲಾಗಿದೆ. ಬುಲೆಟ್ ಮರುಪಾವತಿ ಯೋಜನೆಯಡಿ, ಬ್ಯಾಂಕ್‌ಗಳು ಬಡ್ಡಿ ಸೇರಿ ಸಾಲದ ಮೊತ್ತದ ಮೇಲೆ ಶೇಕಡಾ 75 ರ ಸಾಲದ ಮೌಲ್ಯದ ಅನುಪಾತವನ್ನು ನಿರ್ವಹಣೆ ಮಾಡಬೇಕಾಗುತ್ತದೆ.
ಇದನ್ನೂ ಓದಿ: RBI Monetary Policy: ಸಾಲಗಾರರಿಗೆ ಭರ್ಜರಿ ಸುದ್ದಿ- ಆರ್‌ಬಿಐ ಯಿಂದ ಬಂತೊಂದು ಗುಡ್ ನ್ಯೂಸ್